ರಾಷ್ಟ್ರನಾಯಕರ ಸ್ಮರಣೆ ವಿದ್ಯಾಥರ್ಿಗಳಿಗೆ ಅವಶ್ಯ: ಸಿಇಓ ಮಾನಕರ

ಬಾಗಲಕೋಟೆ 7: ಪರಕಿಯರ ಆಡಳಿತದ ಕಪಿಮುಷ್ಠಿಯಿಂದ ಹೊರಬರಲು ಭಾರತ ಸ್ವತಂತ್ರ್ಯವಾಗಲು ಅನೇಕ ನಾಯಕರು ತಮ್ಮ ಜೀವವನ್ನು ಮುಡುಪಾಗಿಟ್ಟವರಲ್ಲಿ ಪ್ರಮುಖರಾದವರು ಗಾಂಧೀಜಿಯವರಾಗಿದ್ದು, ಇಂತಹ ರಾಷ್ಟ್ರ ನಾಯಕರ ಸ್ಮರಣೆ ವಿದ್ಯಾಥರ್ಿಗಳಿಗೆ ಅವಶ್ಯವಾಗಿದೆ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹಾತ್ಮಾಗಾಂಧಿಜಿಯವರ ಕುರಿತಾದ ಪಾಪು ಬಾಪು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಾಥಮಿಕ ಹಂತದಲ್ಲಿ ಮಕ್ಕಳ ಮನಸ್ಸಿನಲ್ಲಿ ಯಾವ ವಿಚಾರವನ್ನು ಅವರಿಗೆ ಮನದಟ್ಟ ಮಾಡಿಕೊಡುತ್ತೇವೆಯೋ ಅದು ಅವರ ಜೀವನದಲ್ಲಿ ಅಚ್ಚಳಿಯದೇ ಇರುವದು. ಇಂತಹ ನಾಟಕ ಪ್ರದರ್ಶನದಿಂದ ಮಹಾತ್ಮರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದರು.

ಮಹತ್ಮಾಗಾಂಧಿಜಿಯವರ ಕುರಿತಾದ ಈ ನಾಟಕದ ತಂಡ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಯಶಸ್ವಿ ಕಂಡಿದ್ದು, ಮಹಾತ್ಮಾಗಾಂಧಿ ಒಬ್ಬ ಸಾಮಾನ್ಯ ಮನುಷ್ಯನಾಗಿ ಇದ್ದ ವ್ಯಕ್ತಿ ಬ್ರಿಟೀಷ ಸರಕಾರಕ್ಕೆ ಸಿಂಹ ಸ್ವಪ್ನವಾಗಿ ಸ್ವಾತಂತ್ರ್ಯ ದೊರಕಿಸಿಕೊಳ್ಳುವ ಸಮಯದಲ್ಲಿ ಅಹಿಂಸೆಯ ಮೂಲಕ ಅನೇಕ ಸತ್ಯಾಗ್ರಹಗಳನ್ನು ಮಾಡಿ ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿ ಅವರೊಬ್ಬ ವ್ಯಕ್ತಿಯಾಗಿರದೇ ಶಕ್ತಿಯಾಗಿದ್ದರು ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯ ನಾಟಕದ ತಂಡದವರು ಉತ್ತಮವಾದ ಪ್ರದರ್ಶನದೊಂದಿಗೆ ಪ್ರಸ್ತುತಪಡಿಸುತ್ತಾ ಬಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದರ್ೇಶಕ ಮಂಜುನಾಥ ಸುಳ್ಳೊಳ್ಳಿ, ಸಿಂದೂರ, ಅಥಣಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.