ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ನಾಸೀರ ಹುಸೇನ್ ರಿಂದ ಚಾಲನೆ
ಕೊಪ್ಪಳ 22: ನಗರದ ಮಿಲ್ಲತ್ ಪಬ್ಲಿಕ್ ಶಾಲೆ ಯಲ್ಲಿ ಬುಧವಾರ ದಂದು ವಿದ್ಯಾರ್ಥಿಗಳಿಂದ ಏರಿ್ಡಸಿದ ವಿಜ್ಞಾನ ಹಾಗೂ ಗಣಿತ ವಸ್ತು ಪ್ರದರ್ಶನದ ಕಾರ್ಯಕ್ರಮದ ಉದ್ಘಾಟನೆಯನ್ನು ಇಲ್ಲಿನ ಸಮಾಜಸೇವಕ ಲ್ಯಾಂಡ್ ಡೆವಲೊ ಪರ್ ಸೈಯದ್ ನಾಸೀರ್ ಹುಸೇನ್ ರವರು ನೆರವೇರಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ತಂಬ್ರಳ್ಳಿ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ಎಡಿಟರ ನಾಗವೇಣಿ ಗರುರ ಹಿರಿಯ ವೈದ್ಯರಾದ ಡಾ, ರಾಧಾ ಕುಲಕರ್ಣಿ, ಸಂಸ್ಥೆಯ ಮುಖ್ಯ ಸಲಹೆಗಾರ ಎಂ ಸಾಧಿಕ್ ಅಲಿ ಪಾಲಕರ ಪ್ರತಿನಿಧಿ ಪತೇ ಸಾಬ್ ಚುಟ್ಟ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳಾದ ಅಬ್ದುಲ್ ಅಜೀಜ್ ಮಾನ್ವಿ ಕರ್, ಸೈಯದ್ ಇಮಾಮ್ ಹುಸೇನ್ ಸಿಂದಗಿ ಎಂಡಿ ಜಹೀರ್ ಅಲಿ, ದಾವುದ್ ಹುನಗುಂದ್, ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರೆವಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.