ಮೋದಿ ಸಕರ್ಾರ ಕಾಮರ್ಿಕ ಜನ ವಿರೋಧಿ ಸಕರ್ಾರ ಹೆಚ್.ತಿಪ್ಪಯ್ಯ ಆಕ್ರೋಶ

ಲೋಕದರ್ಶನ ವರದಿ

ಕಂಪ್ಲಿ 08:ಕೇಂದ್ರದ ನರೇಂದ್ರ ಮೋದಿ ಸಕರ್ಾರ ಕಾಮರ್ಿಕ ಹಾಗೂ ಜನ ವಿರೋಧಿ ಸಕರ್ಾರವಾಗಿದೆ ಎಂದು ಸೆಂಟರ್ ಆಫ್ ಇಂಟಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ನ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಹೆಚ್.ತಿಪ್ಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಹೊಸ ಬಸ್ ನಿಲ್ದಾಣದಲ್ಲಿ ಎರಡು ದಿನಗಳ ಭಾರತ್ ಬಂದ್ ಹಿನ್ನಲೆ ಸೆಂಟರ್ ಆಫ್ ಇಂಟಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಕಂಪ್ಲಿ ತಾಲೂಕು ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ನರೇಂದ್ರ ಮೋದಿಯವರು ಬಂಡವಾಳಶಾಹಿಗಳ ಮೊರೆ ಹೋಗಿದ್ದಾರೆ. ಸಾರ್ವಜನಿಕ ಸಂಸ್ಥೆಗಳಾದ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ), ಬಿಎಸ್ಎನ್ಎಲ್, ಹೆಚ್ಎಎಲ್ ಮುಂತಾದ ಸಂಸ್ಥೆಗಳನ್ನು ನಾಶಪಡಿಸುವ ಹುನ್ನಾರ ನಡೆಸಿದದ್ದಾರೆ. ಮತ್ತು ಈ ಸಂಸ್ಥೆಗಳನ್ನು ಖಾಸಗಿಯವರಿಗೆ ವಹಿಸಲು ಷಡ್ಯಂತ್ರ ರೂಪಿಸಿದ್ದಾರೆ. ಇದರಿಂದ ಕಾಮರ್ಿಕರು ಹಾಗೂ ಜನರು ಸಂಕಷ್ಟದ ಜೀವನ ನಡೆಸುವಂತಾಗಿದೆ. ಕೇಂದ್ರ ಸಕರ್ಾರ ಚುನಾವಣೆ ಪೂರ್ವದಲ್ಲಿ ನಾನಾ ಭರವಸೆಗಳನ್ನು ನೀಡಿತ್ತು. ಆದರೆ, ಕಳೆದ 4 ವರೆ ವರ್ಷದಲ್ಲಿ ಕಾಮರ್ಿಕರನ್ನು ಹಾಗೂ ಜನರನ್ನು ವಿರೋಧಿಸುತ್ತಾ ಬಂದಿದೆ. ಹೀಗಾಗಿ ದೇಶದಲ್ಲಿರುವ ಕಾಮರ್ಿಕರು ಹಾಗೂ ಜನರು ಉದ್ಯೋಗಗಳಿಗೆ ಸಂಕಷ್ಟ ಎದುರಿಸುವಂತಾಗಿದೆ. ಕೇಂದ್ರದ ಕಾಮರ್ಿಕ ಹಾಗೂ ಜನ ವಿರೋಧಿ ಖಂಡಿಸಿ, ದೇಶದಲ್ಲಿ ಎರಡು ದಿನಗಳ ಕಾಲ ಭಾರತ್ ಬಂದ್ನೊಂದಿಗೆ ಕೇಂದ್ರಕ್ಕೆ ಬಿಸಿ ಮುಟ್ಟಿಸಲಾಗುವುದು. ಕೂಡಲೇ ಕೇಂದ್ರ ಸಕರ್ಾರ ಎಚ್ಚರವಹಿಸಿ, ಕಾಮರ್ಿಕ ಕಾನೂನು ತಿದ್ದುಪಡಿ ಮಾಡಬಾರದು. ಕನಿಷ್ಠ 18 ಸಾವಿರ ವೇತನ ನೀಡಬೇಕು. ಪೆಟ್ರೋಲ್, ಡೀಸೆಲ್ ಸೇರಿದಂತೆ ನಾನಾ ಸಾಮಾಗ್ರಿಗಳ ಬೆಲೆ ಇಳಿಕೆ ಮಾಡಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.  

ಹೊಸ ಬಸ್ ನಿಲ್ದಾಣದಿಂದ ಆರಂಭಗೊಂಡ ಬೃಹತ್ ಮೆರವಣೆಗೆ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸಕರ್ಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು, ಪ್ರತಿಭಟನೆ ನಡೆಸಲಾಯಿತು.  ಈ ಸಂದರ್ಭದಲ್ಲಿ ಸೆಂಟರ್ ಆಫ್ ಇಂಟಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಕಂಪ್ಲಿ ಅಧ್ಯಕ್ಷ ಡಿ.ಮುನಿಸ್ವಾಮಿ, ಉಪಾಧ್ಯಕ್ಷ ಮಾನ್ವಿ ಮಹೇಶ್, ಖಜಾಂಚಿ ಐ.ಹೊನ್ನೂರಸಾಬ್, ಪ್ರಧಾನ ಕಾರ್ಯದಶರ್ಿ ಬಂಡಿ ಬಸವರಾಜ ಸೇರಿದಂತೆ ಅನೇಕರಿದ್ದರು.