ನರೇಂದ್ರ ಮೋದಿ ಬಲಿಷ್ಠ ಪ್ರಧಾನಿ: ಎಸ್.ಎಮ್ ಕೃಷ್ಣ

ಬೆಂಗಳೂರು 31: ಲೋಕಸಭಾ ಚುನಾವಣೆಯ ಕಾವು ದಿನೇ ದಿನೆ ಹೆಚ್ಚಾಗುತ್ತಿದ್ದು, ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಾನುವಾರ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕ್ಕಿದ್ದು, ಬಿ.ಜೆ.ಪಿ. ಉತ್ತರ ಲೋಕಸಭಾ ಕ್ಷೇತ್ರದ ಅಭ್ಯಥರ್ಿ ಡಿ.ವಿ. ಸದಾನಂದ ಗೌಡ ಅವರ ಪರ ಪ್ರಚಾರ ನಡೆಸಿದರು.  

  ರಾಜಾಜಿ ನಗರದ ಅಪಾಟ್ರ್ಮಂಟ್ ನಿವಾಸಿಗಳ ಜೊತೆ ಸಂವಾದ, ಬ್ರಿಗೇಡ್ ಗೇಟ್ ವೇ, ರೆನಾಸೆನ್ಸ್ ಪಾಕರ್್ ನಿವಾಸಿಗಳ ಜೊತೆ ಎಸ್ ಎಂ ಕೃಷ್ಣ ಮಾತುಕತೆ ನಡೆಸಿದರು. ಇದೇ ವೇಳೆ  ಉತ್ತರ ಲೋಕಸಭಾ ಕ್ಷೇತ್ರದ ಅಭ್ಯಥರ್ಿ ಡಿವಿ ಸದಾನಂದ ಗೌಡ, ಮಲ್ಲೇಶ್ವರಂ  ಶಾಸಕ ಅಶ್ವತ್ ನಾರಾಯಣ ಉಪಸ್ಥಿತರಿದ್ದರು.  

   ಕಳೆದ ಐದು ವರ್ಷಗಳಲ್ಲಿ  ದೇಶ ನಡೆದು ಬಂದಿರುವ ದಾರಿಯನ್ನ ಹಿಂತಿರಿಗಿ ನೋಡಿದಾಗ ಸಮಾಧಾನ , ಸಂತೋಷ ತಂದುಕ್ಕೊಟ್ಟಿದೆ. ಗುಜರಾತ್ ನಿಂದ ಬಂದ ಮೋದಿ ಈ ರಾಷ್ಟ್ರಕ್ಕೆ ಒಬ್ಬ ಬಲಿಷ್ಠ ಪ್ರಧಾನಿ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಯ ವರೆಗೂ ಬಲಿಷ್ಠ ಪ್ರಧಾನಿ ಅಂದರೆ ಯಾರು ಎಂಬುದು ದೇಶಕ್ಕೆ ತಿಳಿದಿರಲಿಲ್ಲ ಎಂದು ಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.  

  ಸಮ್ಮಿಶ್ರ ಸಕರ್ಾರದಲ್ಲಿ ಸ್ವ ಇಚ್ಛೆಯಿಂದ ಏನು ಬೇಕಾದ್ರು ಮಾಡಬಹುದು ಎಂಬ ಭಾವನೆ ಮೂಡಿತ್ತು, ಹೀಗಾಗಿ ದೇಶಕ್ಕೆ ಸುಭದ್ರ ನಾಯಕತ್ವ ಬೇಕು ಎಂದು ಜನ ತೀಮರ್ಾನಿಸಿದ್ದರು. ಮೋದಿ ಅವರ ದೃಷ್ಟಿ ಈ ದೇಶ ಬಲಿಷ್ಠ ವಾಗಿ ಹೊರ ಹೊಮ್ಮಬೇಕು  ಎನ್ನುವುದಾಗಿದೆ ಎಂದು ಅವರು ತಿಳಿಸಿದ್ದಾರೆ.  'ನಾನು ಮೊದಲಿನಿಂದಲೂ ವಂಶಪರಂ ಪರೆಯ ವಿರೋಧಿ. ಆಡಳಿತ ನಡೆಸುವುದು ಗೊತ್ತಿಲ್ಲದೇ ಇದ್ದರೂ ದೇಶವನ್ನು ಆಳಬಲ್ಲೆ ಎಂಬುದು ಆ ವಂಶದ ನಂಬಿಕೆಯಾಗಿದೆ' ಎಂದು ಎಸ್.ಎಂ ಕೃಷ್ಣ,  ಗಾಂಧಿ ಕುಟಂಬವನ್ನು ಕುಟುಕಿದರು.  

  ಪ್ರಸಕ್ತ ಸಕರ್ಾರ ದೇಶಕ್ಕೆ ಕೊಟ್ಟ ದೊಡ್ಡ ಆಡಳಿತ. ಆಥರ್ಿಕ ವ್ಯವಸ್ಥೆ ಯಲ್ಲಿ ದೇಶ, ಚೀನಾಗೆ ಪೈಪೋಟಿ ನೀಡುತ್ತಿದೆ. ಅದಕ್ಕೆ ಮೋದಿ ಅವರ  ಪರಿಶ್ರಮ ಕಾರಣ. ಮೋದಿ ಅವರ ಐದು ವರ್ಷಗಳ ಆಡಳಿತದಲ್ಲಿ  ಒಂದು ಹಗರಣವೂ  ಇಲ್ಲ ಕೃಷ್ಣ ಅವರು ಮೋದಿ ಗುಣಗಾನ ಮಾಡಿದ್ದಾರೆ.  

  ರಫೇಲ್ ವಿಚಾರ ಪ್ರಸ್ತಾಪಿಸಿದ ಕೃಷ್ಣ, ಕಾಂಗ್ರೆಸ್ ನಾಯಕರೂ ಸಾಕಷ್ಟು ಆರೋಪಗಳನ್ನ ಮಾಡಿದ್ದಾರೆ. ಅವರ ಆರೋಪದಲ್ಲಿ ಸತ್ವ, ಸತ್ಯ ಎರಡು ಇಲ್ಲ. ಆರೋಪಗಳು ಬರುತ್ತವೆ ಹೋಗುತ್ತವೆ ಅವು ಲೆಕ್ಕಕ್ಕೆ ಇಲ್ಲ. ಈ ವಿಚಾರ ಚುನಾವಣಾ ಸಂದರ್ಭದಲ್ಲಿ ಚಚರ್ೆ ಆಗಬೇಕಿತ್ತು ಎಂದಿದ್ದಾರೆ.  

 ಕಾಂಗ್ರೆಸ್ ಜನರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನೀಡುತ್ತಿಲ್ಲ. ಕೇಂದ್ರ ದಲ್ಲಿ ಯು.ಪಿ.ಎ ಅಧಿಕಾರ ಚುಕ್ಕಾಣಿ ಹಿಡಿಯಲು  ಸಾಧ್ಯವಿಲ್ಲ ಎಂಬುದನ್ನು ವಿರೋಧ ಪಕ್ಷಗಳೇ ಬಲ್ಲವು. ಆದರೂ ಯೋಜನೆಗಳನ್ನು ಘೋಷಿಸುತ್ತಿವೆ ಎಂದು ಲೇವಡಿ ಮಾಡಿದರು. 

  ಪಾಕಿಸ್ತಾನದ  ಜೊತೆ ಸಂಬಂಧ ಸುಧಾರಣೆ ಮಾಡುವುದಕ್ಕೆ  ತಾವು ವಿದೇಶಾಂಗ ಸಚಿವನಾಗಿದ್ದಾಗ ಮಾತುಕತೆ ನಡೆಸಿದ್ದೆ. ಆದರೆ ಪಾಕ್ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ ಎಂದು ತಿಳಿಯಿತು. ಪಾಕಿಸ್ತಾನ ಸಕರ್ಾರದ ಮೇಲೆ ಅಲ್ಲಿನ  ಸೇನೆ ಭಾರಿ ಹಿಡಿತ  ಹೊಂದಿದೆ ಎಂದು ಹೇಳಿದ್ದಾರೆ.    ಹಿಂದಿನ ಸಕರ್ಾರದಂತೆ ಮುಂಬೈಗೆ ಬಂದು ನೂರಾರು ಅಮಾಯಕರನ್ನು ಕೊಲ್ಲಬಹುದು, ಇಲ್ಲಿನ ಸಕರ್ಾರ ಏನು ಮಾಡಲ್ಲ ಎಂದು ಪಾಕಿಸ್ತಾನ ಅಂದುಕೊಂಡಿತ್ತು. ಆದರೆ ಭಾರತದಲ್ಲಿ ಹೊಸ ಸಕರ್ಾರ, ಹಳೆ ಸಕರ್ಾರದಂತೆ ಅಲ್ಲ ಎಂದು ಮೋದಿ ಸಾರಿ ಹೇಳಿದ್ದಾರೆ.  

   '2004ರಲ್ಲಿ ಜನ ನನಗೆ ಆಶೀರ್ವದಿಸಲಿಲ್ಲ. ನನ್ನನ್ನು ಕೈ ನಾಯಕರು ಕನರ್ಾಟಕದಲ್ಲೇ ಉಳಿಸಿಕೊಳ್ಳಬಹುದಿತ್ತು. ನಾನು ಇಲ್ಲಿ ಇದ್ದರೆ ಅವರ ಅವಕಾಶ ತಪ್ಪುತ್ತದೆ ಎಂದು ಅರಿತು ಕೇಂದ್ರಕ್ಕೆ ಕಳುಹಿಸಿಕೊಟ್ಟರು' ಎಂದು ಎಸ್.ಎಂ ಕೃಷ್ಣ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.