ನಂದಿಹಳ್ಳಿ ಪಂಚಾಯತ್ ಮೂಲಸೌಕರ್ಯ ಕಲ್ಪಿಸಲು ಆಗ್ರಹ

Nandihalli Panchayat demands to provide infrastructure

ನಂದಿಹಳ್ಳಿ ಪಂಚಾಯತ್ ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಹೂವಿನಹಡಗಲಿ 25:ತಾಲ್ಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಗ್ರಾ.ಪಂ. ಅಧ್ಯಕ್ಷೆ ಶೈನಾಜ್ ಬೀ, ಉಪಾಧ್ಯಕ್ಷ ಬಿ. ರವಿಕುಮಾರ್ ಒತ್ತಾಯಿಸಿದ್ದಾರೆ.ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ. ಉಮೇಶ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ, ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.ಗ್ರಾ.ಪಂ ವ್ಯಾಪ್ತಿಯ ನಂದಿಹಳ್ಳಿ, ಹುಗಲೂರು, ಮುದೇನೂರು ಗ್ರಾಮಗಳಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನಸಮಸ್ಯೆ ತಲೆದೋರುವ ಲಕ್ಷಣಗಳು ಗೋಚರಿಸಿವೆ. ಚರಂಡಿಗಳನ್ನು ಸ್ವಚ್ಛಗೊಳಿಸದೇ ನೈರ್ಮಲ್ಯ ಹಾಳಾಗಿದೆ. ಬೀದೀದೀಪ ಸಮಸ್ಯೆಯೂ ಇದೆ ಎಂದು ತಿಳಿಸಿದರು.ಮೂರು ಗ್ರಾಮಗಳ ಸಾರ್ವಜನಿಕರು ಚುನಾಯಿತ ಸದಸ್ಯರಿಗೆ ತರಾಟೆ ತೆಗೆದು ಕೊಳ್ಳುತ್ತಿದ್ದಾರೆ. ಕೆಲವು ದಿನಗಳಿಂದ ಪಂಚಾಯಿತಿಗೆ ಕಾಯಂ ಪಿಡಿಒ ನಿಯೋಜಿಸದೇ ಇರುವುದೇ ಇದಕ್ಕೆ ಕಾರಣವಾಗಿದ್ದು, ತಕ್ಷಣ ಪಿಡಿಒ ನಿಯೋಜಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿ ಮಾಡಿದ್ದಾರೆ.ಪ್ರಶಾಂತ ಹಾಗೂ ಸಾರ್ವಜನಿಕರು ಇದ್ದರು.