ಮುಂಬೈ ಡಿ , 1ಮಹಾರಾಷ್ಟ್ರ ಸ್ಪೀಕರ್ ಹುದ್ದೆಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ನಾನಾ ಪಟೋಲ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆ .
ಕಡೆ ಘಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಥೋರ್ ಅವರು ಉಮೇದುವಾರಿಕೆ ವಾಪಸ್ ಪಡೆದ ಕಾರಣ ಪಟೋಲ್ ಅವರು ಅವಿರೋಧವಾಗಿ ಅಯ್ಕೆಯಾಗಲು ಹಾದಿ ಸುಗಮವಾಯಿತು.ಪಟೋಲ್ ವಿದರ್ಭದ ಸಕೋಲಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದ್ದರೆ , ಕ್ಯಾಥೋರೆ ಥಾಣೆ ಜಿಲ್ಲೆಯ ಮುರ್ಬಾದ್‌ನ ಬಿಜೆಪಿ ಶಾಸಕರಾಗಿದ್ದಾರೆ.ಪಟೋಲ್ ಮತ್ತು ಕ್ಯಾಥೋರ್ ಇಬ್ಬರೂ ತಮ್ಮ ನಾಲ್ಕನೇ ಅವಧಿಗೆ ಶಾಸಕರಾಗಿದ್ದಾರೆ.
ಶನಿವಾರ ನಡೆದ ಸದನದ ಬಲಾಬಲ ಪರಿಕ್ಷೆಯಲ್ಲಿ 169 ಶಾಸಕರು ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರೆ ಬಿಜೆಪಿಯ 105 ಶಾಸಕರು ಸಭಾತ್ಯಾಗ ಮಾಡಿದ್ದರು. ನವೆಂಬರ್ 23 ರಂದು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು ನಂತರ ನಾಟಕೀಯ ಬೆಳವಣೆಗೆಯಲ್ಲಿ ಕೇವಲ 80 ಗಂಟೆಗಳ ಅವಧಿಯಲ್ಲೇ ಬಿಜೆಪಿ ಸರಕಾರ ರಾಜಿನಾಮೆ ನೀಡಿತ್ತು.
ವಿಧಾನಸಭೆಯಲ್ಲಿ ನಿನ್ನೆ ಬಿಜೆಪಿ ಬಹಮತ ಪರೀಕ್ಷೆ ಎದರಿಸಲಾಗದೆ ಸಭಾತ್ಯಾಗ ಮಾಡಿತ್ತು. ಇಂದೂ ಸಹ ಇಂದು ಸಹ ಚುನಾವಣೆ ನಡೆಯುವ ಮುನ್ನವೇ ಅಭ್ಯರ್ಥಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಮೈತ್ರಿಕೂಟಕ್ಕೆ ಸಲುಭವಾಗಿ ಶರಣಾಗಿದೆ