ಎಸ್ಡಿಎಂಸಿ ಅಧ್ಯಕ್ಷರಾಗಿ ನಾಗವೇಣಿ, ಉಪಾಧ್ಯಕ್ಷರಾಗಿ ಎನ್.ರಮೇಶ
ಕಂಪ್ಲಿ 14: ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂಯ ಮಾವಿನಹಳ್ಳಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ನೂತನ ಎಸ್ಡಿಎಂಸಿ ಸಮಿತಿ ಶುಕ್ರವಾರ ರಚಿಸಲಾಯಿತು. ಎಸ್ಡಿಎಂಸಿಯ ನೂತನ ಅಧ್ಯಕ್ಷೆಯಾಗಿ ನಾಗವೇಣಿ ಹಾಗೂ ಉಪಾಧ್ಯಕ್ಷರಾಗಿ ಸಿ.ರಮೇಶ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸದಸ್ಯರಾದ ಎನ್.ಲಿಂಗಪ್ಪ, ಯಮನೂರ್ಪ, ಲೋಕೇಶ, ರಾಮಾಂಜನಿ, ಜೆ.ಮಂಜುನಾಥ, ಬಿ.ರಾಮಲಿಸ್ವಾಮಿ, ಬಸವರಾಜ, ಎ.ಯರಿ್ರಸ್ವಾಮಿ, ದ್ಯಾವಮ್ಮ, ಕವಿತಾ ವಾಲ್ಮೀಕಿ, ಸುನೀತಾ, ವನಜಾಕ್ಷಿ, ಲಕ್ಷ್ಮಿ, ಸಿದ್ದಮ್ಮ, ಎರೆ್ರಮ್ಮ, ಶಶಿಕಲಾ ಇವರು ಅವಿರೋಧವಾಗಿ ಆಯ್ಕೆಗೊಂಡರು. ಹಿರಿಯ ಮುಖಂಡರು, ಪೋಷಕರು ಸೇರಿ ನೂತನ ಎಸ್ಡಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರತಿಯೊಬ್ಬರ ಸಹಕಾರದೊಂದಿಗೆ ಶಾಲಾ ಅಭಿವೃದ್ಧಿಗೆ ಅಗಲಿರುಳು ಶ್ರಮಿಸಲಾಗುವುದು. ಮತ್ತು ಸರ್ಕಾರದ ಸೌಲಭ್ಯಗಳನ್ನು ಮಕ್ಕಳಿಗೆ ಸಮರ್ಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ಒಗ್ಗಟ್ಟಿನೊಂದಿಗೆ ಕೆಲಸ ಮಾಡಲಾಗುವುದು ಎಂದು ಉಪಾಧ್ಯಕ್ಷ ಎನ್.ರಮೇಶ ತಿಳಿಸಿದರು.
ಮುಖ್ಯಗುರು ನಾಗರಾಜ, ಮುಖಂಡರಾದ ಬಿ.ಕಟ್ಟೆಪ್ಪ, ಬಿ.ಯರಿ್ರಸ್ವಾಮಿ, ಎನ್.ಮುದಿಯಪ್ಪ, ಚಲುವಾದಿ ವಿರುಪಣ್ಣ, ಜಿ.ಹೊನ್ನೂರ್ಪ, ವಿ.ಸಿದ್ದಪ್ಪ, ಎನ್.ಹುಲುಗಪ್ಪ, ಬಿ.ಷಣ್ಮುಕಪ್ಪ, ಚಲುವಾದಿ ದ್ಯಾವಣ್ಣ ಸೇರಿದಂತೆ ಇತರರು ಇದ್ದರು.