ರಾಜ್ಯ ಮಟ್ಟದ ಪ್ರಶಸ್ತಿಗೆ ನಾಗರಾಜ ಪಟ್ಟಣ್ಣಶೆಟ್ಟಿ ಭಾಜನ
ಶಿಗ್ಗಾವಿ 25: ಅಖಿಲ ಕರ್ನಾಟಕ ಬಸವ ಬಳಗ ವತಿಯಿಂದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯ ಪುಣ್ಯ ಸ್ಮರಣೆಯ ಅಂಗವಾಗಿ ದಾಸೋಹ ದಿನ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಹುಬ್ಬಳ್ಳಿಯ ಮೂರುಸಾವಿರ ಮಠದ ಸಭಾಭವನದಲ್ಲಿಆದ್ಯಾತ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೆ ಹಿರೇಬೆಂಡಿಗೇರಿಯ ನಾಗರಾಜ ಪಟ್ಟಣ್ಣಶೆಟ್ಟಿ ಭಾಜನರಾದ ಅವರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದಶ್ರೀಗಳಾದ ವೆ ಮೂ ರೇವಣಸಿದ್ದಯ್ಯ ಹಿರೇಮಠ,ಅನಿಲಕುಮಾರ ಸಾತಣ್ಣವರ,ಗುರು ಶೆಟ್ಟರ, ರಮೇಶ ಸಾತಣ್ಣವರ ,ವೀರನಗೌಡ ನಡುವಿನಮನಿ, ಯಲ್ಲಪ್ಪ ಹೊಸಮನಿ ,ಚಂದ್ರು ಸಾತಣ್ಣವರ, ಸಂತೋಷ ನಡೂರ, ಭ್ಯಾಹಟ್ಟಿ ಸಹೋದರರು ಇದ್ದರು..