ರಾಷ್ಟ್ರೀಯ ಕಲಾಶಿಬಿರಕ್ಕೆ ನಡೋಣಿ ಆಯ್ಕೆ

ಬಾಬುರಾವ ನಡೋಣಿ

ಲೋಕದರ್ಶನ ವರದಿ

ರಾಯಬಾಗ10: ತುಮಕೂರ ಇದೇ ಜ.12 ರಿಂದ 15 ರವರೆಗೆ ನಡೆಯಲಿರುವ ರಾಷ್ಟ್ರೀಯ ಕಲಾಶಿಬಿರಕ್ಕೆ ರಾಯಬಾಗದ ಖ್ಯಾತ ಚಿತ್ರಕಲಾವಿದ ಬಾಬುರಾವ ನಡೋಣಿ ಅವರು ಆಯ್ಕೆಯಾಗಿದ್ದಾರೆ. ಈ ಕಲಾ ಶಿಬಿರದಲ್ಲಿ ದೇಶದ ಹೆಸರಾಂತ 10 ಜನ ಖ್ಯಾತ ಚಿತ್ರಕಲಾವಿದರು ಭಾಗವಹಿಸಲಿದ್ದು, ಶಿಬಿರದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜೀವನ ಚರಿತ್ರೆ ಕುರಿತು ಕಲಾಕೃತಿಗಳನ್ನು ರಚಿಸಲಾಗುವುದು. ಶಿಬಿರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉದ್ಘಾಟಿಸಲಿದ್ದಾರೆ.  

ಬಾಬು ನಡೋಣಿ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರಿಯ ಕಲಾಶಿಬಿರ, ಕಲಾಪ್ರದರ್ಶನಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ.