ಲೋಕದರ್ಶನ ವರದಿ
ಬೆಳಗಾವಿ 27- ಇತ್ತೀಚೆಗೆ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದವರು ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ, ಪ್ರಶಸ್ತಿ ಪ್ರದಾನ ಹಾಗೂ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನಗರದ ನಾದಸುಧಾ ಸುಗಮ ಸಂಗೀತ ಶಾಲೆಯವರು ಹೊರತಂದಿರುವ 'ಭಕ್ತಿ ಸಂಗಮ' ಧ್ವನಿ ಸುರುಳಿಯನ್ನು ಸಂಸದ ಸುರೇಶ ಅಂಗಡಿಯವರು ಬಿಡುಗಡೆಗೊಳಿಸಿದರು.
ಎಂ. ಎಸ್. ಸತ್ಯನಾರಾಯಣ ಅವರು ಪ್ರಾರಂಭಿಸಿರುವ ನಾದಸುಧಾ ಸುಗಮಸಂಗೀತ ಶಾಲೆಯವರು ಹೊರತಂದಿರುವ 'ಭಕ್ತಿ ಸಂಗಮ' ಧ್ವನಿಸುರುಳಿಯಲ್ಲಿ ಒಟ್ಟು ಹನ್ನೆರಡು ಹಾಡುಗಳಿವೆ. ಈ ಸಿ.ಡಿಯಲ್ಲಿ ಗಣೇಶ ವಂದನೆ, ಶಿವಸ್ತುತಿ ಯಲ್ಲದೇ ಪುರಂದರದಾಸರು, ಮೀರಾಭಜನ್, ವಿಜಯವಿಠ್ಠಲದಾಸರು, ತುಲಸಿದಾಸರ ಕೃತಿಗಳಿಗೆ ಸಂಗೀತ ಸಂಯೋಜನೆಯೊಂದಿಗೆ ಸುಶ್ರಾವ್ಯವಾಗಿ ಹಾಡಿರುವ ಹಾಡುಗಳಿವೆ.
ನಾದಸುಧಾ ಸಂಸ್ಥಾಪಕ ಎಂ. ಎಸ್. ಸತ್ಯನಾರಾಯಣರಲ್ಲದೇ ಉದಯ ಸಿಂಗರ್ ಜ್ಯೂನಿಯರ ಮೂರನೇ ಸ್ಥಾನ ಪಡೆದಿರುವ ಅಲ್ಲದೇ ನಟ ರವಿಚಂದ್ರನ್ ಅವರ ಪ್ರಶಂಸೆಗೆ ಪಾತ್ರಳಾಗಿರುವ ಕು. ನಿಹಾರಿಕಾಳ ಹಾಡಿದೆ. ಜೊತೆಗೆ ವಿದ್ಯಾಥರ್ಿಗಳಾದ ಅಭಿಜ್ಞಾ, ಸಾತ್ವಿಕ, ಸ್ವಧರ್ುನಿ, ದಿಶಾ, ಸ್ಫೂತರ್ಿ, ತನ್ವಿ ಧ್ವನಿ ನೀಡಿದ್ದಾರೆ.
ಧ್ವನಿ ಸುರುಳಿಯಲ್ಲಿ ಹಾಡಿರುವ ಎಲ್ಲರನ್ನೂ ಮುಗಳಖೋಡದ ಮುರುಘರಾಜೇಂದ್ರ ಸ್ವಾಮೀಜಿಯವರು ಆಶಿರ್ವದಿಸಿದರು. ಮಾಜಿ ಸಚಿವ ಶಶಿಕಾಂತ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.