ಕಾಳಿಕಾದೇವಿ ದೇವಸ್ಥಾನಕ್ಕೆ ನಾಡಗೌಡ ಬೇಟಿ
ಮುದ್ದೇಬಿಹಾಳ 21: ಬೆಳಗಾಂವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಕಾಳಿಕಾದೇವಿ ದೇವಸ್ಥಾನಕ್ಕೆ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಬೇಟಿ ನೀಡಿ ದೇವಿಯ ದರ್ಶನಾಶಿರ್ವಾದ ಪಡೆದರು. ಈ ವೇಳೆ ಶಿರಸಂಗಿ ಕಾಳಿಕಾದೇವಿ ದೇವಸ್ಥಾನ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಆಡಳಿತ ಮಂಡಳಿಯ ಶ್ರೀಕಾಂತ ಪತ್ತಾರ, ತಾಳಿಕೋಟಿ ತಾಲೂಕಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಿ ಐ ಬಡಿಗೇರ, ಮುಖಂಡರಾದ ನಾಗರಾಜ ಪತ್ತಾರ, ಸುರೇಶ ಪತ್ತಾರ (ಸೋಮನಾಳ) ವಿಶ್ವಕರ್ಮ ಅಭಿವೃದ್ಧಿ ನಿಗಮದ ಸದಸ್ಯ ಮನೋಜ ಬಡಿಗೇರ, ಕೇಶವ ಪತ್ತಾರ,ವಿವೇಕಾನಂದ ಪತ್ತಾರ, ಲಕ್ಷ್ಮೀಕಾಂತ ಬಡಿಗೇರ ಪತ್ರಕರ್ತ ಹಾಗೂ ಹಿರಿಯ ಸಾಹಿತಿ ಪರುಶುರಾಮ ಕೊಣ್ಣುರ ಸೇರಿದಂತಗೆ ಹಲವರು ಇದ್ದರು