ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರದ ಪ್ರಯೋಜನ ಪಡೆದುಕೊಳ್ಳಲು ನಾಡಗೌಡ್ರ ಕರೆ
ದೇವರಹಿಪ್ಪರಗಿ 25: ಕೇಂದ್ರ, ರಾಜ್ಯ ಸರ್ಕಾರ ರೈತರ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದ್ದು, ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ಸಂ. ನಾಡಗೌಡ್ರ ಹೇಳಿದರು. ತಾಲೂಕಿನ ಯಾಳವಾರ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಸೋಮವಾರದಂದು ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರದ ಚಾಲನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಕೆಪಿಎಸ್ ವ್ಯಾಪ್ತಿಯ ಗ್ರಾಮಗಳ ರೈತರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. ದಿವ್ಯ ಸಾನಿಧ್ಯವನ್ನು ಕಡಕೋಳದ ಮಹಾಲಿಂಗೇಶ್ವರ ಸ್ವಾಮೀಜಿ ಹಾಗೂ ಸ್ಥಳೀಯ ಪಂಚವಟಿ ಆಶ್ರಮದ ಕಾಶಿನಾಥ ಮಹಾಸ್ವಾಮಿಗಳು ವಹಿಸಿ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಉಪಾಧ್ಯಕ್ಷ ರಾಜುಗೌಡ ನ್ಯಾಮಣ್ಣವರ, ಸಂಘದ ಕಾರ್ಯನಿರ್ವಹಣಾ ಅಧಿಕಾರಿಗಳಾದ ಚೆನ್ನಬಸಪ್ಪ ಲಗಳಿ, ಸದಸ್ಯರುಗಳಾದ ಆನಂದಗೌಡ ಮೂಲಿಮನಿ, ತಮ್ಮಣ್ಣ ನಾಯ್ಕೋಡಿ,ಕುಪೇಂದ್ರ ಬ್ಯಾವಡಗಿ, ಮುತ್ತುಗೌಡ ಪಾಟೀಲ, ಬಸನಗೌಡ ದೊಡಮನಿ, ಮುಖಂಡರುಗಳಾದ ಅರವಿಂದ ನಾಗರಾಳ, ಶಿವಾನಂದ ನ್ಯಾಮಣ್ಣವರ, ತುಕಾರಾಮ ಹಂಚಾಟಿ, ಸಿಬ್ಬಂದಿಗಳಾದ ದೀಪು ಶ್ಯಾಬಾದಿ, ಆನಂದ ಗರಡಿಮನಿ ಸೇರಿದಂತೆ ಹಲವಾರು ಜನ ರೈತರು ಉಪಸ್ಥಿತರಿದ್ದರು.