ಎನ್‌.ಎಸ್‌.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರ

NSS units' annual special camp

ಎನ್‌.ಎಸ್‌.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರ 

ರಾಣಿಬೆನ್ನೂರ:18 ಎಲ್ಲಾ ದಾನಗಳಲ್ಲಿ ಶ್ರಮದಾನ ಶ್ರೇಷ್ಠ ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡರೆ ನಿಮ್ಮ ವ್ಯಕ್ತಿತ್ವ ಸುಂದರವಾಗಿ ರೂಪಗೊಳ್ಳುತ್ತದೆ ಎಂದು ಸ್ಥಳೀಯ ಸಿದ್ಧಾರೂಡ ಮಠದ ಮರುಳಶಂಕರ ಮಹಾಸ್ವಾಮಿಗಳು ಹೇಳಿದರು. 

   ತಾಲೂಕಿನ ದತ್ತು ಗ್ರಾಮ ಗಂಗಾಪುರದಲ್ಲಿ ನಗರದ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಎನ್‌.ಎಸ್‌.ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಾದ ನೀವು ಈ ರೀತಿಯ ಸೇವೆಗಳನ್ನು  ಶಿಬಿರಕ್ಕೆ ಮಾತ್ರ ಸೀಮಿತಗೊಳಿಸದೆ ಶಿಬಿರದಲ್ಲಿ ಕಲಿತ ಶಿಸ್ತು, ಶ್ರಮ, ಸೇವಾ ಮನೋಭಾವನೆ ನಿಸ್ವಾರ್ಥ ಸೇವೆ ತ್ಯಾಗ ಮನೋಭಾವನೆಯನ್ನು ನಿಮ್ಮ ಜೀವನದಲ್ಲಿ ಶಾಸ್ವತವಾಗಿ ಅಳವಡಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. 

  ಸ್ಥಳೀಯ ಸಿದ್ಧಾರೂಡ ಮಠದ ಗುರುನಾಥಾರೂಢಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರೊ ಸುಜಾತ ಹುಲ್ಲೂರ, ಪ್ರೊ. ಚನಬಸಪ್ಪ ಮಾಳಿ,  ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ :ಕೃಷ್ಣ ಎಲ್ ಹೆಚ್, ವಾಣಿ ಪಾಟೀಲ,  ಪ್ರೊ. ಮಂಜಪ್ಪ ಸಣಬಸಪ್ಪನವರ,  ಕೃಷ್ಣಪ್ಪ ಚಿಕ್ಕಳವರ, ಶಿವಾಜೆಪ್ಪ ಗುಡಗೂರ, ಹನುಮಮಂತಪ್ಪ ಬಾನುವಳ್ಳಿ, ಸೋಮಪ್ಪ ನಿಟ್ಟೂರ ಉಪಸ್ಥಿತರಿದ್ದರು.