ಲೋಕದರ್ಶನ ವರದಿ
ಧಾರವಾಡ11: ವಿದ್ಯಾಥರ್ಿಗಳು ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಸಹೋದರತೆ, ಸಮಾಜಮುಖಿಯಾಗಿ ಯಾವ ರೀತಿ ಸೇವೆ ಮಾಡಬೇಕು ಮತ್ತು ವ್ಯಕ್ತಿತ್ವವನ್ನು ಹೇಗೆ ರೂಪಿಕೊಳ್ಳಬೇಕು ಎನ್ನುವುದನ್ನು ರಾಷ್ಟೀಯ ಸೇವಾ ಯೋಜನೆ ತಿಳಿಸುತ್ತದೆ ಕವಿವಿಯ ರಾಷ್ಟೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪ್ರೊ. ಮಹಾದೇವಪ್ಪ ಭೀ. ಧಳಪತಿ ಹೇಳಿದರು.
ಧಾರವಾಡ ಕೆ.ಇ.ಬೋಡರ್ಿನ ಪ್ರಥಮ ದಜರ್ೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ ಧಾರವಾಡ ಮತ್ತು ಗ್ರಾಮ ಪಂಚಾಯತ ಪುಡಕಲಕಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಜರುಗಿತು.
ರಾಷ್ಟೀಯ ಸೇವಾ ಯೋಜನೆಯು(ಎನ್ ಎಸ್ ಎಸ್) ಭಾರತ ಸಕರ್ಾರದ ಒಂದು ಯೋಜನೆಯಾಗಿದ್ದು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳಿಗಿರುವಂತಹ ಒಂದು ಮಹತ್ವದ ಕೋಶ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಹಾಗೂ ಉನ್ನತ ಭಾರತ ಅಭಿಯಾನ ಕೋಶದ ಸಂಯೋಜಕ ಪ್ರೊ.ಜೆ.ಎಂ.ಚಂದುನವರ ಮಾತನಾಡಿ, ಧಾರವಾಡ ತಾಲೂಕಿನ ಪುಡಕಲಕಟ್ಟಿ ಗ್ರಾಮವನ್ನು ಕವಿವಿ ಉನ್ನತ ಭಾರತ ಅಭಿಯಾನದಲ್ಲಿ ದತ್ತು ಗ್ರಾಮವನ್ನಾಗಿ ತೆಗೆದುಕೊಂಡಿದ್ದು, ಬರೀ ಕ್ಯಾಂಪ್ ಅಷ್ಟೇ ಅಲ್ಲದೆ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಅಂತರಜಲಮಟ್ಟ ತೀವ್ರವಾಗಿ ಕುಸಿದಿದ್ದು, ಇಂಗು ಗುಂಡಿ, ಹಾಗು ಚೆಕ್ಡ್ಯಾಮ್ಗಳ ಮೂಲಕ ನೀರು ಸಂಗ್ರಹಣೆಗೆ ಎಲ್ಲರೂ ಆದ್ಯತೆ ನೀಡಬೇಕು,ಕೆಲಸ ಮಾಡಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯವಹಿಸಿದ ಗಂಗಯ್ಯ ಸ್ವಾಮಿ ಹಿರೇಮಠ ಮಾತನಾಡಿದರು. ಸೇವೆ ಬಸವಣ್ಣನವರ ಕಾಲದಿಂದಲೂ ಬೆಳೆದುಬಂದಿದ್ದು, ಯಾರಿಗೆ ಸೇವಾಮನೋಭಾವನೆ ಇರುತ್ತೋ ಅವರು ಜೀವನದಲ್ಲಿ ಮುಂದೆ ಬರುತ್ತಾರೆ ಎಂದು ಹೇಳಿದರು. ಪ್ರಾಚಾರ್ಯ ಮೋಹನ ಸಿದ್ದಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಉಪಸ್ಥಿತರಿದ್ದರು.
ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಧಿಕಾರಿ ಪ್ರೊ. ಈಶ್ವರರಾವ್ ಕರಾತ್ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. 'ಸ್ವಚ್ಛತೆಗಾಗಿ ಯುವಜನತೆ ಜೀವ ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅಭಿಯಾನದೆಡೆಗೆ ಒಂದು ವಾರ ಕಾಲ ರಾಷ್ಟೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಬಿರ ನಡೆಯಲಿದೆ ಎಂದು ಹೇಳಿದರು.
ಪ್ರೊ. ಸುನಿತಾ ಸತ್ಯಣ್ಣವರ ಪುಷ್ಪಾರ್ಪಣೆ ನೆರವೇರಿಸಿದರು. ಪ್ರಾರ್ಥನೆ ಮತ್ತು ನಿರೂಪಣೆಯನ್ನು ಸೇವಾ ವಿದ್ಯಾಥರ್ಿನಿಯರು ನಡೆಸಿಕೊಟ್ಟರು.