ಕೊಲ್ಹಾಪೂರದಲ್ಲಿ ಜರುಗುವ ಎನ್.ಎಸ್.ಎಸ್. ಶಿಬಿರಕ್ಕೆ ಕ.ವಿ.ವಿ. ಧಾರವಾಡದ ಸ್ವಯಂ ಸೇವಕರು ಆಯ್ಕೆ
ಧಾರವಾಡ 15: ಫೇಬ್ರುವರಿ 16 ರಿಂದ 22 ರ ವರೆಗೆ ಶಿವಾಜಿ ವಿಶ್ವವಿದ್ಯಾಲಯ, ಕೊಲ್ಹಾಪೂರದಲ್ಲಿ ಜರುಗುವ ಪ್ರತಿಷ್ಠಿತ ರಾಷ್ಟ್ರ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಲು ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಆಯ್ಕೆಯಾಗಿರುವ ವರ್ಷಾ ಹಿರೇಹೊಳಿ, ಸ್ವಾತಿ ಯತ್ತಿನಮನಿ, ಕರಿಶ್ಮಾ ಗದಗ, ಭಾಗ್ಯಾ ಅಡವಿಸೋಮಾಪೂರ, ಜ್ಯೋತಿ ಕಡೆಮನಿ ಹಾಗೂ ಗೌರಿಶ ಸೊಪ್ಪಿನ, ಚನ್ನಪ್ಪ, ಸುನೀಲ ಸರೇಬಾನ, ಯಶ್‌ರಾಜ್ ಬೆಣ್ಣಿ, ಪ್ರವೀಣ ಯಣಗಿ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು ಮತ್ತು ಟೀಮ್ ಮ್ಯಾನೆಜರ್ ಆಗಿ ಕಾವೇರಿ ಬೋಳಾ, ಎಸ್.ಟಿ.ಜೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಡರಗಿ ಇವರುಗಳು ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ. ಕ.ವಿ.ವಿ. ಧಾರವಾಡದ, ಡಾ. ಜಯಶ್ರೀ ಎಸ್. ಕುಲಪತಿಗಳು, ಡಾ. ಎ. ಚನ್ನಪ್ಪ, ಕೆ.ಎ.ಎಸ್., ಕುಲಸಚಿವರು, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಮೌಲ್ಯಮಾಪನ ಕುಲಸಚಿವರು ಹಾಗೂ ಡಾ. ಸಿ. ಕೃಷ್ಣಮೂರ್ತಿ, ಹಣಕಾಸು ಅಧಿಕಾರಿಗಳು (ಪ್ರಭಾರಿ) ಇವರು ರಾಷ್ಟ್ರ ್ಘ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅತ್ಯುತ್ತಮ ಕವಾಯತು ಪ್ರದರ್ಶಿಸುವ ಮೂಲಕ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿ, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವಂತಾಗಲಿ ಎಂದು ಎನ್.ಎಸ್.ಎಸ್. ಸ್ವಯಂ ಸೇವಕ/ಕಿಯರಿಗೆ ಶುಭಾಶಯಗಳನ್ನು ಕೋರಿರುವರು.