ನವದೆಹಲಿ 31: ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ (ಎನ್ಆಸರ್ಿ) ಅಂತಿಮ ಕರಡು ಪಟ್ಟಿಯಿಂದ ಹೊರಗುಳಿದಿರುವ ಎಲ್ಲಾ 40 ಲಕ್ಷ ಜನರ ವಿರುದ್ಧ ಯಾವುದೇ ದಬ್ಬಾಳಿಕೆ ಕ್ರಮ ಅನುಸರಿಸಬಾರದು ಎಂದು ಸುಪ್ರೀಂ ಕೋಟರ್್ ಕೇಂದ್ರ ಸಕರ್ಾರಕ್ಕೆ ತಿಳಿಸಿದೆ.
ಇದಲ್ಲದೆ ಪಟ್ಟಿಯಿಂದ ಹೊರಗುಳಿದವರ ಆಕ್ಷೇಪಣೆ, ಅಹವಾಲುಗಳ ನಿರ್ವಹಣೆಗಾಗಿ ನ್ಯಾಯೋಚಿತ ಮಾರ್ಗವನ್ನು ಕಂಡುಹಿಡಿಯಬೇಕೆಂದು ಕೋಟರ್್ ಸೂಚಿಸಿದೆ.. ಅಲ್ಲದೆ ಎನ್ಆಸರ್ಿ ಸಂಬಂಧ ಕೇಂದ್ರ ಅನುಸರಿಸುವ ಪ್ರಾಮಾಣಿಕ ಕಾರ್ಯಕಾರಿ ವಿಧಾನ (ಎಸ್ ಒಪಿ) ಕುರಿತಂತೆ ಒಂದು ವರದಿ ಸಲ್ಲಿಸುವಂತೆ ಸಹ ನ್ಯಾಯಾಲಯ ಕೇಂದ್ರಕ್ಕೆ ನಿದರ್ೆಶಿಸಿದೆ.
ನ್ಯಾಯಮೂತರ್ಿಗಳಾದ ರಂಜನ್ ಗೊಗೊಯ್ ಮತ್ತು ಆರ್ ಎಫ್ ನಾರಿಮನ್ ಅವರನ್ನೊಳಗೊಂಡ ಪೀಠವು ಕೇಂದ್ರವು ಆಗಸ್ಟ್ 16 ರೊಳಗೆ ಎಸ್ಒಪಿಯನ್ನು ಮಂಡಿಸಬೇಕು. ಆಕ್ಷೇಪಣೆ, ಅಹವಾಲುಗಳ ಸಲ್ಲಿಸುವವರಿಗಾಗಿ ಸ್ಥಳೀಯ ರಿಜಿಸ್ಟ್ರಾರ್ ಗಳು ನೋಟೀಸ್ ನೀಡಬೇಕು.ಅವರುಗಳಿಗೆ ನ್ಯಾಯೋಚಿತವಾಗಿರುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದೆ.
ಹಜೀಲಾ ಮಾತನಾಡಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 28 ರವರೆಗೆ ಎನ್ಆಸರ್ಿ ಮತ್ತು ಹೊರಗಿಡುವಿಕೆಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳು ಸಲ್ಲಿಕೆಗೆ ಅವಕಾಶವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಗಸ್ಟ್ 7 ರವರೆಗೆ ಎನ್ಆಸರ್ಿ ಪಟ್ಟಿಯಲ್ಲಿತಮ್ಮ ಹೆಸರು ಇದೆಯೆ, ಇಲ್ಲವೆ ನೋಡಲು ಜನರಿಗೆ ಅವಕಾಶ ಲಭಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಚಿವಾಲಯವು ಎಸ್ಒಪಿಯ ವಿಧಾನಗಳನ್ನು ರೂಪಿಸಲು ಸಿದ್ಧವಾಗಿದೆ ಎಂದಾದರೆ ಎಸ್ಒಪಿಯನ್ನು ನ್ಯಾಯಾಲಯದ ಮುಂದಿಡುವಂತೆ ಅಟಾನರ್ಿ ಜನರಲ್ ಅವರಿಗೆ ನ್ಯಾಯಪೀಠ ಹೇಳಿದೆ.
ರಾಜ್ಯ ನಾಗರಿಕರ ಪಟ್ಟಿಯಾದ ಎನ್ಆಸರ್ಿ ಎರಡನೇ ಮತ್ತು ಅಂತಿಮ ಕರಡು ನಿನ್ನೆ ಪ್ರಕ್ಕಟವಾಗಿದ್ದು ಇದರಲ್ಲಿ ಅಸ್ಸಾಂನ 3.29 ಕೋಟಿ ಅಜರ್ಿದಾರರಲ್ಲಿ 2.89 ಕೋಟಿ ಜನರ ಹೆಸರು ಪ್ರಕಟವಾಗಿತ್ತು.ಸುಮಾರು 40.07 ಲಕ್ಷ ಅಭ್ಯಥರ್ಿಗಳ ಹೆಸರು ಪಟ್ಟಿಯಿಂದ ಹೊರಗಿದೆ.