ಮೈಸೂರ ಹುಲಿ ಹಜರತ್ ಟಿಪ್ಪು ಸುಲ್ತಾನ ಜಯಂತ್ಯೋತ್ಸವ

ಲೋಕದರ್ಶನ ವರದಿ

ಕೊಪ್ಪಳ: ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಈಶಪ್ಪ ಸೋಂಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಟಿಪ್ಪು ಒಬ್ಬ ಸಿಪಾಯಿಯ ಮಗನಾಗಿ ಹುಟ್ಟಿ, ಸ್ವ-ಸಾಮಥ್ರ್ಯದಿಂದ ನಾಡಿನ ದೊರೆಯಾದನು. ಮಕ್ಕಳನ್ನು ಅಡವಿಡಲು ಬಯಸುತ್ತೇನೆಯೇ ಹೊರತು ಈ ದೇಶವನ್ನು ಅಡವಿಡಲಾರೆ ಎಂಬ ದಿಟ್ಟ ನಿದರ್ಾರ ಮಾಡಿ ಆಂಗ್ಲರ ಪಾಲಿಗೆ ಹುಲಿಯಾಗಿ ಬಾಳಿದನು. ಇಂತಹ ವ್ಯಕ್ತಿಯ ಆಚರಣೆ ಒಂದು ಧರ್ಮ, ಜಾತಿ, ಭಾಷೆಯ ಸೀಮೆಗೆ ಸೀಮಿತವಾಗರಬಾರದು ಎಂದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯೋಪಾಧ್ಯಾಯ ಫಕೀರಪ್ಪ.ಎನ್.ಅಜ್ಜಿ. ಟಿಪ್ಪುವಿನ ಜೀವನ ಚರಿತ್ರೆಯ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದಶರ್ಿ ವೀರಮ್ಮ ಸೋಂಪುರ, ಶಿಕ್ಷರಾದ ಕೊಟ್ರಯ್ಯ ಗುಡ್ಲಾನೂರ, ಫಕೀರಮ್ಮ ತಳವಾರ, ಮರಿಯಮ್ಮ ಹರಿಜನ, ಹುಲಿಗೇಶ ಭೋವಿ, ಪ್ರಮೋಧ ಜಾದವ, ನಾಗರತ್ನ ಮಾಲಿಪಾಟೀಲ್, ರಜಿಯಾ ಬೇಗಂ, ಮಂಜುಳಾ ಬಹದ್ದೂರಬಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.