ಲೋಕದರ್ಶನ ವರದಿ
ಧಾರವಾಡ 27: ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ, ವಿಚಾರಿಸಿದಡೆ ಏನೂ ಹುರಳಿಲ್ಲವಯ್ಯಾ, ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪ ಮಾಡಿ ನೀವಿರಿಸಿದಿರಿ, ಕೂಡಲಸಂಗಮದೇವಾ. ಎಂಬ ಬಸವಣ್ಣನವರ ವಚನದಂತೆ ಮನುಷ್ಯ ಜೀವನದುದ್ದಕ್ಕೂ ಆಶೆಯಿಂದಲೆ ಬದಕುಸಾಗಿಸಿ ಬರಗೈಯಲ್ಲಿ ಹೋಗುವದನ್ನು ಮರೆತಿರುತ್ತಾನೆ, ಪ್ರಾಮಾಣಿಕವಾಗಿ ಆದಾಯ ತೆರಿಗೆ ಕಟ್ಟುವುದರ ಮೂಲಕ ಪ್ರತಿಯೊಬ್ಬರು ಸಕರ್ಾರದ ಭಾಗವಾಗಬೇಕೆಂದು ಧಾರವಾಡ ತಾಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಹೇಳಿದರು.
ಅವರು ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಎಕ್ಸೈಡ್ ಲೈಫ್ ಇನ್ಸುರೆನ್ಸ್ ಧಾರವಾಡ ಇವರು ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಆದಾಯ ತೆರಿಗೆ ಮಾಹಿತಿ ಕಾರ್ಯಾಗಾರವನ್ನು ನಗರದ ತಾಲೂಕು ಶಿಕ್ಷಕ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಆರ್ ಎಸ್ ಮುಳ್ಳುರು ಮಾತನಾಡಿ ಸಂಸಾರವೆಂಬುದೊಂದು ಗಾಳಿಯ ಸೊಡರು, ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ, ಇದ ನೆಚ್ಚಿ ಕೆಡಬೇಡ, ಎಂಬ ಶರಣರ ವಾಣಿಯಂತೆ ನಾವು ಇಂದು ಜೀವಿಸಬೇಕಾಗಿದೆ. ಈ ವರ್ಷದಿಂದ ಕನರ್ಾಟಕ ಸಕರ್ಾರವು ಸ್ವಲ್ಪ ಬದಲಾವಣೆಯೊಂದಿಗೆ ಆದಾಯ ತೆರಿಗೆ ಸಂಗ್ರಹಿಸುತ್ತಿದೆ. ಇದರ ಮಾಹಿತಿ ಪ್ರತಯೊಬ್ಬರಿಗೂ ಇರಬೇಕಾಗಿರುವುದು ಅವಶ್ಯಕವಾಗಿದೆ. ಇಂತಹ ಕಾಯರ್ಾಗಾರಗಳನ್ನು ಇಲಾಖೆಯ ಬದಲಾಗಿ ಶಿಕ್ಷಕರ ಸಂಘಟನೆಯವರು ಮಾಡುತ್ತಿರುವು ಶ್ಲಾಘಣಿಯವಾಗಿದೆ ಎಂದು ಹೇಳಿದರು. ಖ್ಯಾತ ಚಾಟರ್ೆಡ್ ಅಕೌಂಟಂಟ ಸುಭಾಸ ಪಾಟೀಲ ನೂತನ ಆದಾಯ ತೆರಿಗೆ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯಅತಿಥಿಗಳಾಗಿ ಎಕ್ಸೈಡ್ ಲೈಫ್ ಇನ್ಸುರೆನ್ಸ್ ನ ಏಜನ್ಸಿ ಲೀಡರ್ ಅಜಿತಸಿಂಗ್ ತಜಪೂತ, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯಾಧ್ಯಕ್ಷ ಗುರು ಪೋಳ, ಉಪಾಧ್ಯಕ್ಷ ಗುರು ತಿಗಡಿ. ರಾಜ್ಯ ಪ್ರಧಾನ ಕಾರ್ಯದಶರ್ಿ ಶಂಕರ ಘಟ್ಟಿ, ರಾಜ್ಯ ಸಂಘಟನಾ ಕಾರ್ಯದಶರ್ಿ ಸಿ ಎಂ ಕಿತ್ತೂರ, ಧಾರವಾಡ ಜಿಲ್ಲಾ ಅಧ್ಯಕ್ಷ ನಾರಾಯಣ ಭಜಂತ್ರಿ, ಸಮನ್ವಯಾಧಿಕಾರಿ ಎಸ್ ಟಿ ಅರಸನಾಳ, ಎಸ್ಸಿ/ಎಸ್ಟಿ ಸಂಘದ ರಾಜ್ಯ ಕಾರ್ಯಧ್ಯಕ್ಷ ಹೇಮಂತ ಕುಂದರಗಿ, ಮಾರುತಿ ಬಂಡಿವಡ್ಡರ, ಚಂದ್ರಶೇಖರ ತಿಗಡಿ, ರಾಜು ಮಾಳವಾಡ, ಆರ್ ಎನ್ ಬೆಸ್ತವಾಡಕರ, ಮಹಾದೇವಿ ದೊಡಮನಿ, ಬಸವರಾಜ ದೇಸೂರು, ಸುಮಿತಾ ಹಿರೇಮಠ, ಮಂಜುನಾಥ ಸತ್ತೂರ, ಜಿ ಎಂ ಗುಂಜಾಳ, ಯಲ್ಲಪ್ಪ ಶೆರೆವಾಡ, ಗಂಗವ್ವ ಕೊಟಿಗೌಡರ, ಶಾರದಾ ಶಿರಕೊಳ, ಮಾರುತಿ ಬಂಡಿವಡ್ಡರ, ಸಂಜೀವ ಅಣ್ಣಿಗೇರಿ, ವಸಂತ ಭಜಂತ್ರಿ, ಶಾರದಾ ಜಯರಾಮನವರ, ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ತಾಲೂಕ ಅಧ್ಯಕ್ಷರಾದ ಕಾಶಪ್ಪ ಎಸ್ ದೊಡವಾಡ ವಹಿಸಿದ್ದರು. ರಮೇಶ ಮಂಗೊಡಿ, ನಿರೂಪಿಸಿದರು. ನಾರಾಯಣ ಭಜಂತ್ರಿ ಸ್ವಾಗತಿಸಿದರು, ಶಿದ್ದಪ್ಪ ಶಿವಶಿಂಪಿ ವಂದಿಸಿದರು.