ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷರಾಗಿ ಮುತ್ತಣ್ಣ
ಹಾವೇರಿ 04: ನಗರದ ನಿವಾಸಿಗಳು,ಸಂಘಟನಾ ಚತುರರಾದ ಉಡಚಪ್ಪ ಮಾಳಗಿ ಅವರನ್ನು ರಾಷ್ಟ್ರೀಯ ಅಹಿಂದ ಸಂಘಟನೆಯ ಹಾವೇರಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಎಸ್ ಶಿವಳ್ಳಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬೀರಲಿಂಗೇಶ್ವರ ಪೂಜಾರಿ ಅವರು ಆದೇಶ ಹೊರಡಿಸಿದ್ದಾರೆ.
ನೂತನ ಜಿಲ್ಲಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರು ನೇಮಕ ಮಾಡಿದ ನಾಯಕರಿಗೆ,ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಹಾಗೂ ಸಹಕಾರ-ಬೆಂಬಲ ಸೂಚಿಸಿದ ಮುಖಂಡರಿಗೆ ಅಭಿನಂದನೆಗಳನ್ನು ಪ್ರಕಟಣೆಯ ಮೂಲಕ ಸಲ್ಲಿಸಿದ್ದಾರೆ.