ಮುತ್ತೂಟ್ ಫಿನ್‌ಕಾರ​‍್್‌ ಲಿ., ಉದ್ಯೋಗಿಗಳಿಂದ ಉಚಿತ ಆರೋಗ್ಯ ತಪಾಷಣಾ ಶಿಬಿರ

Muthoot Fincar Ltd., Free Health Checkup Camp by Employees

ಮುತ್ತೂಟ್ ಫಿನ್‌ಕಾರ​‍್್‌ ಲಿ., ಉದ್ಯೋಗಿಗಳಿಂದ ಉಚಿತ ಆರೋಗ್ಯ ತಪಾಷಣಾ ಶಿಬಿರ 

ಬಳ್ಳಾರಿ 12 : ನಗರದ ಅಗ್ನಿಶಾಮಕ ಎದರುಗಡೆಯ ಮುತ್ತೂಟ್ ಫಿನ್‌ಕಾರ​‍್್‌ ಲಿ., ಕಛೇರಿಯಲ್ಲಿ ಕೋಟೆ ಮಲ್ಲೇಶ್ವರ ಸ್ವಾಮಿಯ ಜಾತ್ರೆ ಪ್ರುಯುಕ್ತ ಬುಧವಾರದಂದು ಮುಂಜಾನೆ ಮುತ್ತೂಟ್ ಫಿನ್‌ಕಾರ​‍್್‌ವತಿಯಿಂದ ತನ್ನ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ರಕ್ತಪರಿಕ್ಷೆ, ಮಧುಮೇಹ, ಸಕ್ಕರೆ ಪ್ರಮಾಣ, ಕಣ್ಣು ಮತ್ತು ದಂತ ತಪಾಷಣೆ ಸೇರಿದಂತೆ ಹಲವು ರೀತಿಯ  ಆರೋಗ್ಯ ತಪಷಣೆಯನ್ನು ನಡೆಸಲಾಯಿತು.  

ಈ ಸಂದರ್ಭದಲ್ಲಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ, ಬ್ರಾಂಚ್ ಮೇನೇಜರ್ ವೇದಾವತಿ ಎ, ಪ್ರತಿಯೊಬ್ಬರು ತಮ್ಮ ದೈನಂದಿನ ಕೆಲಸದ ಒತ್ತಡದಿಂದ ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸಿರುತ್ತಾರೆ, ಇದರಿಂದ ಪ್ರಾಥಮಿಕ ಹಂತದಲ್ಲಿ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ರೋಗ ಉಲ್ಬಣಗೊಂಡು ಸಾವು ಸಂಭವಿಸಿದ ಉದಾಹರಣೆಯಿದೆ, ಇಂತ ಕಾರ್ಯ ಒತ್ತಡದಲ್ಲಿರುವವರಿಗೆ ಮತ್ತು ಬಡಜನರ ಉಪಯೋಗಕ್ಕಾಗಿ ಈ ಆರೋಗ್ಯ ತಪಾಷಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ, ಕಾರಣ ಯಾರೂ ಸಹ ಆರೋಗ್ಯವನ್ನು ನಿರ್ಲಕ್ಷಿಸದೇ ಸಕಾಲಕ್ಕೆ ತಪಾಷಣೆಯನ್ನು ಮಾಡಿಕೊಂಡು ರೋಗದಿಂದ ದೂರವಿರಲು ಸಲಹೆ ನೀಡಿದರು.  

ಮತ್ತೂಟ್ ಫಿನ್ ಕಾರ​‍್್‌ ಸಂಸ್ತೆಯ ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ್ ಎಸ್, ಪ್ರಾದೇಶಿಕ ವ್ಯವಸ್ಥಾಪಕ ವಿರೂಪಾಕ್ಷಪ್ಪ ಪಿ, ಸಹಾಯಕ ವ್ಯವಸ್ಥಾಪಕ ಕಿಶೋರ್ ಕುಮಾರ್, ಹಣಕಾಸು ಅಧಿಕಾರಿ ಶ್ರೀನಿವಾಸ್ ಯು ಮತ್ತು ಸಿಬ್ಬಂದಿ ಪ್ರವೀಣ್ ಕುಮಾರ್, ಶ್ರೀಕಾಂತ್ ಮತ್ತು ಹೆಲ್ತ್‌ ಫ್ರೀ ಸರ್ವಿಸಸ್ ಸಂಸ್ಥೆಯ ಫೌಂಡರ್ ಡಾ.ಕುಮಾರ್, ಬಳ್ಳಾರಿ ಮ್ಯಾನೇಜರ್ ಮಂಜುನಾಥ್ ಡಿ.ಪಿ, ಸಬೀಯಾ, ಹೊನ್ನಪ್ಪ, ದಂತವೈದ್ಯ ಸುರೇಶ್  ಸೇರಿದಂತೆ ಇತರರಿದ್ದರು.