ಆದ್ಯಾತ್ಮಿಕ ಪ್ರವಚಣದಲ್ಲಿ ಸಂಗೀತ ಕಾರ್ಯಕ್ರಮ

Musical program in spiritual discourse

ಆದ್ಯಾತ್ಮಿಕ ಪ್ರವಚಣದಲ್ಲಿ ಸಂಗೀತ ಕಾರ್ಯಕ್ರಮ  

ಯಮಕನಮರಡಿ 18: ಸ್ಥಳೀಯ ಭೀಮ ನಗರದಲ್ಲಿ ಆಯೋಜಿಸಲಾಗಿದ್ದ ಮೂಡನಂಬಿಕೆ ನಿರ್ಮೂಲನಾ ಅಂಗವಾಗಿ ಸ್ಥಳೀಯ ಹುಣಸಿಕೋಳ್ಳಮಠದ ಸಿದ್ದಬಸವ ದೇವರು ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳಮಠದ ಪೂಜ್ಯರು ಐದು ದಿನಗಳ ಕಾಲ ಆದ್ಯಾತ್ಮಿಕ ಹಾಗೂ ಬಸವತತ್ವ ಕುರಿತು ಪ್ರವಚನ ನೀಡಿದರು. ಈ ಸಂದರ್ಬದಲ್ಲಿ ವಚನ ಸಂಗಿತ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದ ಹಾಗೂ ಆಕಾಶವಾಣಿ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆದ ಗೋಪಾಲ ಚಪಣಿಯವರು ಹಾಗೂ ಹಾರ್ಮೊನಿಯಂ ವಾದಕರು ಶಿವಾನಂದ ಬಡಿಗೇರ ಹಿಡಕಲ್ ಡ್ಯಾಂ ಮತ್ತು ತಬಲಾ ವಾದಕರಾದ ಶಿವಾನಂದ ಕಡಪಟ್ಟಿ ಬಸ್ಸಾಪುರ ಇವರು ತಬಲಾ ಸಾಥ ನಿಡಿದರು.  ಈ ಸಂಧರ್ಬದಲ್ಲಿ ಅಪಾರ ಜನಸಮೂಹ ಉಪಸ್ಥಿತರಿದ್ದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.