ಲೋಕದರ್ಶನ ವರದಿ
ಬೆಳಗಾವಿ 20: ಸಂಗೀತವೆನ್ನುವುದು ವಿಶ್ವದ ಭಾಷೆ. ಜಾತಿ, ಮತ, ಪಂಥ ಯಾವುದೇ ಬೇಧವಿಲ್ಲದ ಭಾಷೆಯಿದು. ಕೋಪ, ತಾಪ, ಸಂತೋಷ, ದುಃಖ, ಪ್ರೀತಿ ಹೀಗೆ ಮನುಷ್ಯ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ. ಈ ಲಯಬದ್ದವಾದ ಸಂಗೀತವನ್ನು ಕಲಿತಾಗ ಜೀವನವೇ ಲಯಬದ್ದವಾಗಿರುತ್ತೆ. ಅದು ಜೀವನದಲ್ಲಿ ಬದುಕಬೇಕಾದ ಶಿಸ್ತನ್ನು ತಂದುಕೊಡುತ್ತದೆ ಎಂದು ಸ್ತ್ರೀರೋಗ ತಜ್ಞೆ ಡಾ. ಸೌಭಾಗ್ಯಾ ಭಟ್ ಇಂದಿಲ್ಲಿ ಹೇಳಿದರು.
ಗುರುಪ್ರಸಾದ ನಗರದಲ್ಲಿರುವ ಸಪ್ತಸ್ವರ ಸಂಗೀತ ವಿದ್ಯಾಲಯದವರು 19 ನೇ ವಾಷರ್ಿಕ ಸಂಗೀತೋತ್ಸವವನ್ನು ಹಿಂದವಾಡಿಯಲ್ಲಿರುವ ಆಯ್.ಎಂ.ಇ.ಆರ್. ಸಭಾಭವನದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಸೌಭಾಗ್ಯಾ ಭಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಸಂಗೀತವನ್ನು ಕೇಳಿದಾಗ ಮನಸ್ಸಿನಲ್ಲಿ ಶಾಂತಿ ಮೂಡುತ್ತದೆ. ಈ ರೀತಿ ಶಾಂತಿ ಮೂಡಿಸುವ ವಾತಾವರಣವನ್ನು ದೇಶದ ತುಂಬೆಲ್ಲ ಪಸರಿಸಿದರೆ ದೇಶದಲ್ಲಿ ನಡೆಯುತ್ತಿರುವ ಅಶಾಂತಿಮಯ ವಾತಾವರಣದಿಂದ ಶಾಂತಿಯೆಡೆಗೆ ಒಯ್ಯಬಹುದು ಎಂದು ಹೇಳಿದರು
ಪುಟ್ಟ ಪುಟ್ಟ ಮಕ್ಕಳು ತುಂಬ ಸುಶ್ರಾವ್ಯವಾಗಿ ಹಾಡುವುದನ್ನು ಕೇಳಿದಾಗ ಮನಸ್ಸಿಗೆ ತುಂಬ ಆನಂದವಾಯಿತು. ಇದರ ಹಿಂದೆ ನಿರ್ಮಲಾ ಪ್ರಕಾಶ ಅವರ ಶ್ರಮ ತುಂಬ ಇದೆ. ಎಪ್ಪತ್ತು ವರ್ಷ ದಾಟಿರುವ ನಿರ್ಮಲಾ ಪ್ರಕಾಶ ದಪಂತಿಗಳಿಗೆ ನಮ್ಮ ಸಹಾಯಹಸ್ತ ಯಾವಾಗಲೂ ಇದ್ದೇ ಇದೆ ಎಂದು ಹೇಳಿದರು.
ಗಮನ ಸೆಳೆದ ನಿರ್ಮಲಾ ಪ್ರಕಾಶ ಅವರ ಗಾಯನ ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ ಯಾವುದೇ ಇರಲಿ ಎಲ್ಲದಕೂ ಶಾಸ್ತ್ರೀಯ ಸಂಗೀತವೇ ಮೂಲ. ಶಾಸ್ತ್ರಿಯ ತಳಹದಿಯಲ್ಲೇ ನಾವು ಗಾಯಕರಾಗಲು ಸಾಧ್ಯವಿಲ್ಲವೆಂಬುದನ್ನು ನಾವು ಮೊದಲು ಅರಿತುಕೊಳ್ಳಬೇಕು ಎಂದು ಹೇಳಿ ಲಲಿತ ರಾಗದ ಕಣ್ಣೀರಧಾರೆ ಇದೇಕೆ ಇದೇಕೆ (ಹೊಸ ಬೆಳಕು), ಭೀಮಪಲಾಸರಾಗದ ಏ ಜಿಂದಗಿ ಉಸಿಕಿ ಹೈ(ಅನಾರಕಲಿ), ವನಚದಲ್ಲಿ ನಿಮ್ಮ ನಾಮಾಮೃತವ ತುಂಬಿ(ವಚನ), ಭೂಪರಾಗದ ಜ್ಯೋತಿ ಕಳಸ ಛಲಕಿ (ಭಾಭಿಕಿ ಚೂಡಿಯಾ), ಪಿಳ್ಳಂಗೋವಿ ಚಲ್ವಕೃಷ್ಣನ್(ಪುರಂದರದಾಸರ ಕೃತಿ), ದುಗರ್ಾ ರಾಗದ ಆಡ ಪೋಗೋಣ ಬಾರೋ ರಂಗ(ದಾಸರಪದ) ಆಯಾ ರಾಗಗಳ ಕಲ್ಪನೆಗಳನ್ನು ನೀಡಿ ರಾಗಗಳ ಮೇಲೆ ರಚಿತಗೊಂಡಿರುವ ಚಲನಚಿತ್ರಗೀತೆ, ದಾಸರಪದಗಳು, ವಚನಗಳನ್ನು ಹಾಡಿ ತೋರಿಸಿ ಎಲ್ಲರ ಮನಗೆದ್ದರು.
ಇದೇ ಸಂದರ್ಭದಲ್ಲಿ ಡಾ. ಸೌಭಾಗ್ಯಾ ಭಟ್ ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆಯನ್ನಿಟ್ಟು ಗೌರವಿಸಲಾಯಿತು. ಸಪ್ತಸ್ವರ ಸಂಗೀತ ಮಹಾವಿದ್ಯಾಲಯದ ವಿದ್ಯಾಥರ್ಿ,ವಿದ್ಯಾಥರ್ಿನಿಯರು ಕೇದಾರ, ಮಾಲಕಂಸ, ಸಾರಂಗ, ಯಮನ ಮುಂತಾದ ರಾಗಗಳನ್ನು ಪ್ರಸ್ತುತಪಡಿಸುವುದರೊಂದಿಗೆ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಡಿ ತಮ್ಮಲ್ಲಿರುವ ಪ್ರತಿಭೆಯನ್ನು ಹಂಚಿಕೊಂಡರು.
ವಾಮನ ವಾಗೂಕರ, ನಿರಂಜ ಮೂತರ್ಿ, ನಾರಾಯಾಣ ಗಣಾಚಾರಿ, ಜಿತೇಂದ್ರ ಸಾಬಣ್ಣವರ ಹಾಮರ್ೊನಿಯಮ್ ಹಾಗೂ ತಬಲಾ ಸಾಥ ನೀಡಿದರು. ಡಾ. ಕಿಶೋರ ಭಟ್, ಪ್ರಕಾಶ ಅಯ್ಯರ ಉಪಸ್ಥಿತರಿದ್ದರು. ಸುಷ್ಮಾ ಕೃಷ್ಣಮೂತರ್ಿ ಸ್ವಾಗತಿಸಿದರು. ಡಾ. ಸ್ವಪ್ನಾ ಕುಲಕಣರ್ಿ ಪರಿಚಯಿಸಿದರು. ವಷರ್ಾ ಹೆಗಡೆ ವಂದಿಸಿದರು. ವೀಣಾ ಹೆಗಡೆ ನಿರೂಪಿಸಿದರು.