ಲೋಕದರ್ಶನವರದಿ
ಧಾರವಾಡ 27: ಸಂಗೀತ ಕ್ಷೇತ್ರ ಇಂದು ಅತ್ಯಂತ ವ್ಯಾಪಕವಾಗಿ ಪಸರಿಸುತ್ತಿದೆ. ಅನೇಕ ಟಿವಿ ಚ್ಯಾನಲ್ಗಳಲ್ಲಿ ಸಂಗೀತ ಕಾರ್ಯಕ್ರಮಗಳು ಪ್ರಸಾರ ಆಗುತ್ತಿವೆ. ಬಾಲ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಸಂಗೀತ ಕಠಿಣ ವಿದ್ಯೆಯಾದರೂ ಸತತ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದು ಧಾರವಾಡ ಆಕಾಶವಾಣಿಯ ಹಿಂದೂಸ್ಥಾನಿ ಗಾಯಕ ಪಂಡಿತ ಸದಾಶಿವ ಐಹೊಳೆ ಅಭಿಪ್ರಾಯಪಟ್ಟರು.
ತಾಲೂಕಿನ ಚಿಕ್ಕಮಲ್ಲಿಗವಾಡ ರಸ್ತೆ ಹತ್ತಿರದ ರೈಸಿಂಗ್ ಸ್ವಿಮಿಂಗ್ ಪೂಲ್ ಇದರ ಪ್ರಥಮ ವಾಷರ್ಿಕೋತ್ಸವ ಪ್ರಯುಕ್ತ ರೈಸಿಂಗ್ ಡೆವಲಪರ್ರ್ಸ ಹಾಗೂ ಪ್ರೇರಣಾ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಗುರು ಕುಮಾರೇಶ್ವರ ಸಂಗೀತ ವಿದ್ಯಾಲಯ ಆಯೋಜಿಸಿದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗುರು ಶಿಷ್ಯ ಪರಂಪರೆಗೆ ಭಾರತೀಯ ಸಂಸ್ಕೃತಿ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಈ ಕಾರಣಕ್ಕಾಗಿಯೇ ವಿದೇಶಿಯರು ಭಾರತೀಯ ಸಂಗೀತಕ್ಕೆ ಮಾರುಹೋಗಿದ್ದಾರೆ. ಸಾಂಸ್ಕೃತಿಕ ನಗರ ಧಾರವಾಡ ಅನೇಕ ಸಂಗೀತ ದಿಗ್ಗಜರ ಪರಂಪರೆ ಹೊಂದಿದೆ. ಬೇರೆ ವಿಷಯದಂತೆ ಸಂಗೀತ ವಿಷಯ ಅಲ್ಲ. ಸಂಗೀತವನ್ನು ಅಭ್ಯಾಸದಿಂದ ಮಾತ್ರ ಕರಗತಗೊಳಿಸಲು ಸಾಧ್ಯ. ಗುರುವಿನ ಗುಲಾಮನಾಗುವ ತನಕ ದೊರೆಯದೇನ್ನ ಮುಕುತಿ ಎನ್ನುವಂತೆ ಸಂಗೀತ ಕಲಿಸುವಲ್ಲಿ ಗುರುವಿನ ಪಾತ್ರ ಹಾಗೂ ಕಲಿಸುವಲ್ಲಿ ಶಿಷ್ಯನ ಪಾತ್ರ ಮಹತ್ವವಾಗಿದೆ ಎಂದು ಹೇಳಿದರು.
ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ನಿದರ್ೇಶಕ ಮಲ್ಲಿಕಾಜರ್ುನ ಭಜಂತ್ರಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಇಂದಿನ ಸ್ಫಧರ್ಾತ್ಮಕ ಯುಗದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ರೈಸಿಂಗ್ ಡೆವಲಪರ್ರ್ಸ ಸಂಗೀತ ಹಾಗೂ ಕ್ರೀಡೆಗಳಿಗೆ ಪ್ರೋತ್ಸಹ ಕೊಡುವ ದೃಷ್ಠಿಕೋನದಿಂದ ಸುಸಜ್ಜಿತವಾದ ಈಜುಗೋಳ ನಿಮರ್ಿಸಿ ಯುವಜನತೆಯಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೊತ್ಸಾಹ ಕೊಡುತ್ತಿರುವುದು ಪ್ರಶಂಶನೀಯ ಎಂದರು.
ಪ್ರೇರಣಾ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ನಿದರ್ೇಶಕ ಡಾ.ವಿಶ್ವನಾಥ ಚಿಂತಾಮಣಿ ಮಾತನಾಡಿ, ಗ್ರಾಮೀಣ ಯುವ ಸಂಗೀತಗಾರರನ್ನು ಹಾಗೂ ಯುವ ಕಲಾವಿದರನ್ನು ಗುರುತಿಸುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಪ್ರತಿ ವರ್ಷ 10 ಸಾವಿರ ನಗದು ಬಹುಮಾನ ಸಹಿತ "ಗಾನ ಗಂಧರ್ವ ಪ್ರಶಸ್ತಿ ಹಾಗೂ ಸನ್ಮಾನ ಪತ್ರ ಕೊಡುವ ಮೂಲಕ ತೆರೆಮರೆಯಲ್ಲಿ ಇರುವ ಬಡ ಕಲಾವಿದರನ್ನು ಮುಖ್ಯವಾಹಿನಿಗೆ ಕರೆತರುವ ಗುರತರ ಜವಾಬ್ದಾರಿ ಹೊತ್ತುಕೊಳ್ಳಲಿದೆ ಎಂದರು. ಶೀಘ್ರದಲ್ಲಿ ಪ್ರಶಸ್ತಿಗೆ ಅರ್ಹರನ್ನು ಗುರುತಿಸುವ ಕಾರ್ಯ ಪ್ರಾರಂಭವಾಗಲಿದೆ. ಹಿರಿಯ ಸಂಗೀತಗಾರ ಮಾರ್ಗದರ್ಶನದಲ್ಲಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾಡುವ ಮೂಲಕ ಅವರಿಂದ ಸಂಗೀತ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಹೇಳಿದರು.
ರೈಸಿಂಗ್ ಡೆವಲಪರ್ರ್ಸನ ವ್ಯವಸ್ಥಾಪಕ ನಿದರ್ೇಶಕ ಡಾ. ರಮೇಶ ಇಡಗಲ್, ಗುರು ಕುಮಾರೇಶ್ವರ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಪರಮೇಶ್ವರ ತೇಲಿ ಇದ್ದರು. ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಕೆ. ಎಚ್. ಕಾಕನೂರ ಅಧ್ಯಕ್ಷತೆವಹಿಸಿದ್ದರು. ರೈಸಿಂಗ್ ಸ್ವಿಮಿಂಗ್ ಪೂಲ್ನ ವ್ಯವಸ್ಥಾಪಕ ನಿದರ್ೇಶಕಿ ಶಿಲ್ಪಾ ಇಡಗಲ್ ಸ್ವಾಗತಿಸಿದರು. ಗುರು ಕುಮಾರೇಶ್ವರ ಸಂಗೀತ ವಿದ್ಯಾಲಯದ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.