ಸಂಗೀತವು ಪಶು, ಪ್ರಾಣಿ-ಪಕ್ಷಿಗಳಾದಿಯಾಗಿ ಎಲ್ಲ ಜೀವಜಂತುಗಳಿಗೂ ಅತ್ಯಗತ್ಯ : ಡಾ. ಪಿ.ಎಲ್.ಪಾಟೀಲ
Music is essential for all living beings, including animals and birds: Dr. P.L. Patil
ಧಾರವಾಡ 09: ಸಂಗೀತವು ಮನುಷ್ಯನಿಗಷ್ಟೇ ಅಲ್ಲದೇ ಪ್ರಕೃತಿಯಲ್ಲಿರುವ ಸಸಿಗಳು, ಪಶು, ಪ್ರಾಣಿ-ಪಕ್ಷಿಗಳಾದಿಯಾಗಿ ಎಲ್ಲ ಜೀವಜಂತುಗಳಿಗೂ ಅತ್ಯಗತ್ಯವಾಗಿದೆ. ಒಂದು ಸಸಿ ಫಲವತ್ತಾಗಿ ಬೆಳೆದು ಫಲ ಕೊಡಲು ಅದರ ಸುತ್ತಲೂ ಇರುವ ಪರಿಸರ ಬಹಳ ಮುಖ್ಯವಾಗಿರುತ್ತದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್.ಪಾಟೀಲ ಅಭಿಪ್ರಾಯ ಪಟ್ಟರು. ದಿನಾಂಕ: 8.2.2026ರಂದು ಸಂಜೆ ನಗರದ ಕವಿವ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ನಾವಿಕಾ ರಂಗಭೂಮಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರಿ್ಡಸಿದ್ದ ಸಿತಾರವಾದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಪಿ.ಎಲ್.ಪಾಟೀಲರು, ನಾವು ಪ್ರತಿದಿನ ಯಾವುದೇ ಸ್ಥಳದಲ್ಲಿದ್ದರೂ ಆಕಾಶವಾಣಿ ಮೂಲಕ ಸಂಗೀತವನ್ನು ಆಲಿಸುತ್ತ ನಮ್ಮ ಮನಸ್ಸು ಆಹ್ಲಾದಕರವಾಗಿರುತ್ತದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಧಾರವಾಡ ಆಕಾಶವಾಣಿಯ ಕೊಡುಗೆ ಅಮೋಘವಾದುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಮಾತನಾಡುತ್ತ ದೇಶಕಂಡ ಮಹಾನ್ ಚೇತನರಾದ ಪಂ.ಪಂಚಾಕ್ಷರಿ ಗವಾಯಿಗಳು ಹಾಗೂ ಪಂ.ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರಕ್ಕೆ ಕೊಡುಗೆ ಬಹುದೊಡ್ಡದಾಗಿದೆ. ಅಲ್ಲಿ ಸಂಗೀತ ಕಲಿತ ಬಹುದೊಡ್ಡ ಸಂಖ್ಯೆಯ ಶಿಷ್ಯಬಳಗವು ದೇಶದ ತುಂಬೆಲ್ಲ ಹರಡಿ ತಮ್ಮ ಸಂಗೀತದ ಕಂಪನ್ನು ಪಸರಿಸುವ ಮೂಲಕ ವೀರೇಶ್ವರ ಪುಣ್ಯಾಶ್ರಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅದರಲ್ಲಿ ಪ್ರೊ. ರಾಜೀವ ಹಿರೇಮಠರು ಒಬ್ಬರು. ಗದುಗಿನ ಪಂ.ಪಂಚಾಕ್ಷರಿ ಗವಾಯಿಗಳ ಮಹಾವಿದ್ಯಾಲಯದಲ್ಲಿ 33 ವರ್ಷಗಳ ಕಾಲ ಸಿತಾರ ಪ್ರಾಧ್ಯಾಪಕರಾಗಿ ಅನೇಕ ಶಿಷ್ಯವರ್ಗವನ್ನು ಸೃಷ್ಟಿಸಿದ್ದಾರೆ. ಕೇವಲ ಸಂಗೀತ ಕ್ಷೇತ್ರವಷ್ಟೇ ಅಲ್ಲದೇ ರಂಗಭೂಮಿ ಕ್ಷೇತ್ರದಲ್ಲೂ ಪಂ.ಪಂಚಾಕ್ಷರಿ ಗವಾಯಿಗಳು ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಶರಣಬಸವ ಚೋಳಿನ ಅವರು ಮಾತನಾಡುತ್ತ ಸಂಗೀತ ವಾತಾವರಣವಿಲ್ಲದ ಗದುಗಿನಲ್ಲಿ ನೆಲೆಸಿ, ಎಲ್ಲ ಸಂಗೀತದಲ್ಲಿ ಅಪಾರ ಸಾಧನೆ ಮಾಡಿದ್ದಷ್ಟೇ ಅಲ್ಲ, ಧಾರವಾಡ ಆಕಾಶವಾಣಿಯಲ್ಲಿ ಬಹುಪಾಲು ಕಲಾವಿದರು ವೀರೇಶ್ವರ ಪುಣ್ಯಶ್ರಮದಲ್ಲಿ ಕಲಿತವರೇ ಅನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಸಾಹಿತ್ಯ ಮತ್ತು ಸಂಗೀತ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ ಎಂದರು. ವೇದಿಕೆಯಲ್ಲಿ ಕಲಬುರಗಿಯ ಸಯ್ಯದ ತಾಜುದ್ದೀನ, ದಾಕ್ಷಾಯಣಿ ಹಿರೇಮಠ, ಪದ್ಮಾವತಿ ದೇವಶಿಖಾಮಣಿ, ಪ್ರೊ.ರಾಜೀವ ಹಿರೇಮಠ, ಶರಣಕುಮಾರ ಗುತ್ತರಗಿ ಉಪಸ್ಥಿತರಿದ್ದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಪೂರ್ವಿ ಎಮ್.ಡಿ. ಪ್ರಾರ್ಥಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.
ಪಂ.ಪಂಚಾಕ್ಷರಿ ಗವಾಯಿಗಳ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಿತಾರ ಕಲಾವಿದರಾದ ಪ್ರೊ.ರಾಜೀವ ಹಿರೇಮಠ ಅವರು ಸಿತಾರ ವಾದನದಲ್ಲಿ ರಾಗ ಕಿರ್ವಾಣಿ ಮತ್ತು ಶಿವರಂಜನಿ ಪ್ರಸ್ತುತ ಪಡಿಸಿದರು. ಸಹ ಸಿತಾರ ವಾದನದಲ್ಲಿ ಬೆಂಗಳೂರಿನ ಸಂಧ್ಯಾ ಎಚ್. ಹಾಗೂ ಅವಿಲೇಶ ಎಚ್. ತಬಲಾದಲ್ಲಿ ಗದುಗಿನ ಶರಣಕುಮಾರ ಗುತ್ತರಗಿ ಅವರು ಸಮರ್ಥ ಸಾಥ್ ಸಂಗತ ನೀಡಿದರು. ಸಮಾರಂಭದಲ್ಲಿ ಗಣ್ಯರಾದ ಡಾ. ಮೃತ್ಯುಂಜಯ ಶೆಟ್ಟರ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಶಂಕರ ಕಬಾಡಿ, ಸದಾಶಿವ ಐಹೊಳಿ, ವಾಯ್.ಬಿ.ಬೆಂಡಿಗೇರಿ, ಕ್ಷಮಾ ಹೊಸಕೇರಿ, ಈಶ್ವರ ಹಿರೇಮಠ, ವೀರಣ್ಣ ಪತ್ತಾರ, ಡಾ. ಗುರುಬಸವ ಮಹಾಮನೆ, ವಿವೇಕ ಘಂಟೆಣ್ಣವರ, ವಿಜಯ ಸುತಾರ, ಡಾ. ಅರ್ಚನಾ ಪತ್ತಾರ ಸುತಾರ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 