ಸಂಗೀತ ಮಾನವನ ಅದ್ಭುತ ಸೃಷ್ಟಿ : ಎಮ್‌.ಡಿ. ಪಲ್ಲವಿ

Music is a wonderful creation of man: M.D. Pallavi

ಸಂಗೀತ ಮಾನವನ ಅದ್ಭುತ ಸೃಷ್ಟಿ : ಎಮ್‌.ಡಿ. ಪಲ್ಲವಿ 

ಬೆಳಗಾವಿ 24: ಸಂಗೀತ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು, ಇದು ಕೇಳುಗರಿಗೆಲ್ಲಾ ಸಂತೋಷವನ್ನು ಹರಡುವುದಲ್ಲದೆ ಒತ್ತಡವನ್ನು ಸಹ ನಿವಾರಣೆ ಮಾಡುತ್ತದೆ. ಆರೋಗ್ಯ, ಎಕಾಗ್ರತೆ, ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಾಕಾರಿಯಾಗುವ ಸಂಗೀತ ಮಾನವನ ಅದ್ಬುತ ಸೃಷ್ಟಿ ಎಂದು ಖ್ಯಾತ ಸುಗಮ ಸಂಗೀತ ಗಾಯಕಿ ಎಮ್‌.ಡಿ. ಪಲ್ಲವಿ ಅಭಿಪ್ರಾಯ ಪಟ್ಟರು.  

ಅವರು ಇಂದು ಕುಮಾರ ಗಂಧರ್ವ ರಂಗಮಂದಿರದಲ್ಲಿ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಾದ ಪಲ್ಲವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  

ವೀರರಾಣಿ ಕಿತ್ತೂರ ಚೆನ್ನಮ್ಮ, ಬೆಳವಡಿಯ ಮಲ್ಲಮ್ಮ ಶರಣೆ ಅಕ್ಕಮಹಾದೇವಿ ನಡೆದಾಡಿದ ಈ ಪುಣ್ಯ ಭೂಮಿಯಲ್ಲಿ ಜನಿಸಿರುವ ಮಹಿಳೆಯರೆ ಧನ್ಯರು. ಅವತಂತಹ ಶೂರ, ಧೀರ ಹಾಗು ಆಧ್ಯಾತ್ಮಿಕ ಗುಣಗಳನ್ನು ಪ್ರತಿಯೊಬ್ಬ ಮಹಿಳೆಯರು ಅಳವಡಿಸಿ ಕೊಳ್ಳಬೇಕು ಎಂದು ಅವರು ಹೇಳಿದರು. ನಂತರ ಇವರ ಮಧುರ ಕಂಠದಲ್ಲಿ ಮೂಡಿಬಂದ ವಿವಿಧ ಹಾಡುಗಳು ಕೇಳುಗರ ಮನಸೂರೆಗೊಂಡವು. 

ಮಹಿಳಾ ಉದ್ಯಮಿಗಳಾದ ಲಕ್ಷ್ಮಿ ಬಗಲಿ, ಸುನಿತಾ ಪಾಟೀಲ, ರಶ್ಮಿ ಅಗಡಿ ಅವರನ್ನು ಸನ್ಮಾನಿಸಲಾಯಿತು. 

ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಗೌರವ ಸದಸ್ಯರಾದ ಶೈಲಜಾ ಬಿಂಗೆ ಶೈಲಾ ಪಾಟೀಲ್ ಆಶಾ ಪಾಟೀಲ್ ಜ್ಯೋತಿ ಬದಾಮಿ ಸುರೇಖಾ ಮಾನ್ವಿ ಅಧ್ಯಕ್ಷೆ ಸುನಿತಾ ಪಾಟೀಲ, ಕಾರ್ಯದರ್ಶಿ ಶಾರದಾ ಪಾಟೀಲ, ನಿರೂಪಿಸಿದರು. ರತ್ನಪ್ರಬಾ ಬೆಲ್ಲದ ಸ್ವಾಗತಿಸಿದರು ಜಯಶೀಲಾ ಬ್ಯಾಕೋಡ ವಂದಿಸಿದರು. ಸಹಕಾರ್ಯದರ್ಶಿ ವಿದ್ಯಾ ಗೌಡರ ಶೋಭಾ ಪಾಟೀಲ್ ಅನುರಾದಾ ಬಾಗಿ ಸೇರಿದಂತೆ ಸಾವಿರಾರು ಮಹಿಳೆಯರು ಉಪಸ್ಥಿತರಿದ್ದರು.