ಕಿನ್ನಾಳ ಗ್ರಾಮದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ

Music festival in Kinnala village

ಕಿನ್ನಾಳ ಗ್ರಾಮದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ  

ಕೊಪ್ಪಳ  12 : ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಗುರುವಾರದಂದು ಅಭಿನವ ಸಂಗೀತ  ಸಾಂಸ್ಕೃತಿಕ ಶಿಕ್ಷಣ ಸಂಸ್ಥೆ ಇಂದ  ಗ್ರಾಮದ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸಂಗೀತ ಸಂಭ್ರಮ ಕಾರ್ಯಕ್ರಮ ಜರುಗಲಿದೆ ನಾಡಿನ ಹೆಸರಾಂತ  ಕಲಾವಿದರು ಇದರಲ್ಲಿ ಪಾಲ್ಗೊಳ್ಳುತ್ತಾರೆ ಪ್ರಾರಂಭದಲ್ಲಿ ವಿಜಯಲಕ್ಷ್ಮಿ ಮಂಗಳೂರು ರವರಿಂದ ಭರತನಾಟ್ಯ ಹಾಗೂ ಮಾರುತಿ ಬಿನ್ನಾಳ  ರವರಿಂದ ಶಾಸ್ತ್ರೀಯ ಸಂಗೀತ ನಾಗರಾಜ್ ಶಾವಿ ರವರಿಂದ ಬಾನ್ಸೂರಿ  ವಾದನ ಸಂಗಯ್ಯ ಹಿರೇಮಠ ಅವರಿಂದ ಸುಗಮ ಸಂಗೀತ ಪೂರ್ಣಿಮಾ ತಾವರಗೆರೆ ಇವರಿಂದ ಜಾನಪದ ಸಂಗೀತ ಮತ್ತು ನಂತರ ಜೀವನ್ ಸಾಬ್ ಬಿನ್ನಾಳ ರವರಿಂದ ಹಾಸ್ಯ ಕಾರ್ಯಕ್ರಮ ಮತ್ತು ಅಭಿನವ ಸಂಸ್ಥೆ ಕಲಾವಿದರಿಂದ ಹಾಗೂ ಸ್ಥಳೀಯ ಕಲಾವಿದರಿಂದ ಮನರಂಜನೆ ಕಾರ್ಯಕ್ರಮ ಜರುಗಲಿವೆ ಕಾರ್ಯಕ್ರಮ ದಲ್ಲಿ ಎಲ್ಲರೂ ಪಾಲ್ಗೊಂಡು ಯೆಶಸ್ವಿ ಗೊಳಿಸಲು ಸಂಸ್ಥೆಯ ಅಧ್ಯಕ್ಷ ಬಾಷಾ ಕಿನ್ನಾಳ್ ರವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.