ಪುರಸಭೆಯ ಅಯ-ವ್ಯಯ ಬಜೆಟ್ : ಸುಮಾರು 6,59,7459 ರೂ.ಗಳ ಉಳಿತಾಯ ಬಜೆಟ್ ಮಂಡನೆ
ಕಂಪಿ 12: ಪಟ್ಟಣದ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಪುರಸಭೆಯ 2025-26ನೇ ಸಾಲಿನ ಆಯ-ವ್ಯಯ ಮಂಡನೆ ಸಭೆ ಬುಧವಾರ ನಡೆಯಿತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್ ಇವರು ಪ್ರಸಕ್ತ ಸಾಲಿನಲ್ಲಿ ಪುರಸಭೆಗೆ 6,59,7459 ರೂ. ಉಳಿತಾಯ ಬಜೆಟ್ ಮಂಡಿಸಿದ ತದನಂತರ ಬಜೆಟ್ ವಿಷಯವನ್ನು ಓದಿದರು. ನೀರೀಕ್ಷಿಸಲಾದ ಆದಾಯ: 2 ಕೋಟಿ, 70 ಲಕ್ಷ ಮನೆ ತೆರಿಗೆ, 75 ಲಕ್ಷ ರೂ ನೀರಿನ ಶುಲ್ಕ, 35 ಲಕ್ಷ ಮಳಿಗೆ ಬಾಡಿಗೆ, 10 ಲಕ್ಷ ರೂ ಮಾರುಕಟ್ಟೆ ಇತರೆ ಶುಲ್ಕ, 47 ಲಕ್ಷ ರೂ ಕಟ್ಟಡ ಕಾಯಿದೆ ಯೋಜನೆಗೆ ಸಂಬಂಧಿಸಿದ ಶುಲ್ಕ, 2 ಕೋಟಿ ಅಭಿವೃದ್ಧಿ ಶುಲ್ಕ, 10 ಲಕ್ಷ ರೂ ವ್ಯಾಪಾರ ಪರವಾನಿಗೆ ಶುಲ್ಕ ನೀರೀಕ್ಷಿಸಲಾದ ಸಾಮಾನ್ಯ ಆದಾಯಗಳಾಗಿವೆ. ಸರಕಾರಿ ಆದಾಯ: 2 ಕೋಟಿ 15ನೇ ಹಣಕಾಸು ಅನುದಾನ, ನೀರೀಕ್ಷಿಸಲಾದ ಸರಕಾರಿ ಆದಾಯಗಳಾಗಿವೆ.ಸರಕಾರಿ ಖರ್ಚು: 2 ಕೊಟಿ ರೂ ವೆಚ್ಚದಲ್ಲಿ ನಡುವಲ ಮಸೀದಿಯಿಂದ ಜೋಗಿ ಕಾಲುವೆ ವರೆಗೆ ರಸ್ತೆ ಅಭಿವೃದ್ಧಿ, 4 ಕೋಟಿ 80 ಲಕ್ಷ ವೆಚ್ಚದ ರಸ್ತೆ ಬದಿಯ ಚರಂಡಿ ನಿರ್ಮಾಣ, 7 ಕೋಟಿ 80 ಲಕ್ಷದಲ್ಲಿ ಪಟ್ಟಣದ ರಸ್ತೆಗಳ ಅಭಿವೃದ್ಧಿಗಾಗಿ, 3 ಕೋಟಿ 40 ಲಕ್ಷ ವೆಚ್ಚದಲ್ಲಿ ಒಳ ಚರಂಡಿ ಮತ್ತು ನೀರು ಸರಬರಾಜು ಯೋಜನೆ ಖರ್ಚು, 50 ಲಕ್ಷ ರೂ ಪಟ್ಟಣದ ವೃತ್ತಗಳ ನಿರ್ಮಾಣ, 5 ಕೋಟಿ ರೂ ಸೋಮಪ್ಪ ಕೆರೆ ಅಭಿವೃದ್ಧಿ, 5 ಕೋಟಿ ರೂ ನೀರು ಸರಬರಾಜು ಯೋಜನೆ(ಕೆಯುಐಡಿಎಫ್‌ಸಿ) ಖರ್ಚು ಸೇರಿ ನೀರೀಕ್ಷಿಸಲಾದ ಸರಕಾರಿ ಖರ್ಚುಗಳಾಗಿವೆ.ನೀರೀಕ್ಷಿಸಲಾದ ಖರ್ಚು: 3 ಕೋಟಿ, 41 ಲಕ್ಷ ರೂ ಸಾರ್ವಜನಿಕ ವಿದ್ಯುತ್ ಮತ್ತು ಬೀದಿ ದೀಪಗಳ ನಿರ್ವಹಣೆ ಖರ್ಚು, 1 ಕೋಟಿ, 11 ಲಕ್ಷ 20 ಸಾವಿರ ರೂ ಸಾರ್ವಜನಿಕ ಆರೋಗ್ಯದ ಖರ್ಚು, 2 ಕೋಟಿ, 80 ಲಕ್ಷ ರೂ ನೀರು ಸರಬರಾಜು ನಿರ್ವಹಣೆ ಖರ್ಚು, 1 ಕೋಟಿ, 33 ಲಕ್ಷ ರೂ ನೆ?ರ್ಮಲ್ಯ ಮತ್ತು ಘಜನತ್ಯಾಜ್ಯ ವಸ್ತು ನಿರ್ವಹಣೆ ಖರ್ಚು, 2 ಕೋಟಿ 46 ಲಕ್ಷ , 50 ಸಾವಿರ ರೂ ಶೇ.24.10 ಎಸ್ಸಿ, ಎಸ್ಟಿ ಖರ್ಚು, 75 ಲಕ್ಷ , 68 ಸಾವಿರ ರೂ ಶೇಕಡ 7.25 ಇತರೆ ಬಡ ಜನರ ಕಲ್ಯಾಣ ಅಭಿವೃದ್ಧಿ ಖರ್ಚು, 51 ಲಕ್ಷ 80 ಸಾವಿರ ರೂ ಶೇಕಡ 5 ಅಂಗವಿಕಲರ ಕಲ್ಯಾಣ ಅಭಿವೃದ್ಧಿ ಖರ್ಚು, 25 ಲಕ್ಷ ರೂ ಸಾರ್ವಜನಿಕ ಉದ್ಯಾನಗಳ ನಿರ್ಮಾಣ ಖರ್ಚು ಸೇರಿ ನೀರೀಕ್ಷಿಸಲಾದ ಸಾಮಾನ್ಯ ಖರ್ಚುಗಳಾಗಿವೆ ಎಂದು ಲೆಕ್ಕಿಗ ರಮೇಶ ಓದಿ ತಿಳಿಸಿದರು.ಅಧ್ಯಕ್ಷ ಭಟ್ಟ ಪ್ರಸಾದ್ ಬಜೆಟ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ,ಎಲ್ಲಾ ವಾರ್ಡ್‌ಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ಎಲ್ಲ ಸದಸ್ಯರ ಸಹಕಾರದಿಂದ ಬಜೆಟ್‌ನಲ್ಲಿ ಉಲ್ಲೇಖಿಸಿರುವ ಎಲ್ಲ ಕೆಲಸಗಳನ್ನು ಈಡೇರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಡಾ.ವಿ.ಎಲ್.ಬಾಬು, ಸಿ.ಅರ್.ಹನುಮಂತ, ಎನ್.ರಾಮಾಂಜನೇಯ, ಎಸ್.ಎಂ.ನಾಗರಾಜ, ವೀರಾಂಜನೇಯ, ಟಿ.ವಿ.ಸುದರ್ಶನರೆಡ್ಡಿ, ಆರ್.ಆಂಜನೇಯ, ಹೂಗಾರ ರಮೇಶ, ಮೌಲಾ, ಲೊಡ್ಡು ಹೊನ್ನೂರವಲಿ, ನಾಗಮ್ಮ, ಜಿ.ಸುಮಾ, ತಿಮ್ಮಕ್ಕ, ಮೌಲಾ, ಗುಡದಮ್ಮ, ಶಾಂತಲಾ ವಿದ್ಯಾಧರ, ಹೇಮಾವತಿ ಪೂರ್ಣಚಂದ್ರ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು. ಮಾ001ಸ್ಥಳೀಯ ಪುರಸಭೆಯ ಶುದ್ದೀಕರಣ ಘಟಕದ ಆವರಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್ ಇವರು ಪುರಸಭೆಯ ಅಯ-ವ್ಯಯ ಬಜೆಟ್ ಅನ್ನು ಮಂಡಿಸಲಾಯಿತು.