ಹುಚ್ಚೆಬ್ಬಿಸೋ ಹೋರಿ ಹಬ್ಬದಲ್ಲಿ ಮುಳುಗೆದ್ದ ಮುಂಡಗೋಡು

Mundagodu was immersed in the maddened bull festival

ಹುಚ್ಚೆಬ್ಬಿಸೋ ಹೋರಿ ಹಬ್ಬದಲ್ಲಿ ಮುಳುಗೆದ್ದ ಮುಂಡಗೋಡು 

ಮುಂಡಗೋಡ, 10 ; ಹೋರಿ ಹಬ್ಬವೆಂದರೆ ಅರೆ ಮಲೆನಾಡು ಹಾಗೂ ಬಯಲು ಸೀಮೆ ಭಾಗದ ಜನರಿಗೆ ಹಬ್ಬ, ಆ ದಿನ ಕೆಲಸ-ಕಾರ್ಯಗಳನ್ನು ಬಿಟ್ಟು ಬೆಳಿಗ್ಗೆಯೇ ಅಖಾಡಕ್ಕೆ ಇಳಿದು ರಾತ್ರಿಯ ತನಕ ಹೋರಿಗಳನ್ನು ಬೆದರಿಸಿ ಹಿಡಿದು ಸಂಭ್ರಮಿಸುತ್ತಾರೆ.   

   ಇದು ಲಕ್ಷಾಂತರ ಖರ್ಚು ಮಾಡಿ ಮಾಡುವ ಉತ್ಸವ, ನೂರಾರು ಹೋರಿಗಳು ಅಲಂಕರಿಸಿಕೊಂಡು ರೈತರು ಕಣಕ್ಕೆ ಇಳಿಸುತ್ತಾರೆ, ನೂರು-ಎರಡು ನೂರು ಮೀಟರ್ ಓಡುವ ದನಗಳನ್ನು ಹಿಡಿಯಲು ಜನರು ದುಂಬಾಲು ಬಿದ್ದಿರುತ್ತಾರೆ.  

   ಮುಂಡಗೋಡದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಹೋರಿ ಬೆದರಿಸುವ ಕಾರ್ಯಕ್ರಮ ನಡೆಯಿತು, ಪಟ್ಟಣದ ಹುಬ್ಬಳ್ಳಿ ಶಿರಸಿ ರಸ್ತೆಯ ಮಹಾಲೆ ರೈಸ್ ಇಂಡಸ್ಟ್ರೀಸ್ ಹಿಂಭಾಗದಲ್ಲಿ 100 ಕ್ಕೂ ಹೆಚ್ಚಿನ ಹೋರಿಗಳನ್ನು ಬೆದರಿಸಲಾಯಿತು.  ನಾಯಕನ ಅಧಿಕಾರ ಹಾವೇರಿಯ ಕರ್ಜಿಗಿ ಓಂ ಹರಿಹರದ ಅಶ್ವಮೇಧ, ಹಾವೇರಿಯ ಯೋಧ ಹಾವೇರಿಯ ಮಹಾನಾಯಕ, ಹೈಪವರ್, ಕಾತೂರ ಮಾರಿಕಾಂಬಾ, ಆಲಳ್ಳಿ ಅಶ್ವಮೇಧ, ಮುಡಸಾಲಿ ಡಾಲಿ, ಸನವಳ್ಳಿ ಸಾಹುಕಾರ  ಸೊರಬದ ಹಿಂದೂ ಸಾಮ್ರಾಟ್, ಹಿರೇಲಿಂಗದಳ್ಳಿ ಸರ್ಕಾರ ಇವೆಲ್ಲಾ ಹೋರಿಗಳು ಕಣದ ಹುರುಪನ್ನು ಇನ್ನೂ ಹೆಚ್ಚಿಸಿದ್ದವು   ಐನೂರಕ್ಕೂ ಹೆಚ್ಙಿನ ಯುವಕರು ಹೋರಿಗಳನ್ನು ಹಿಡಿಯಲು ನಿಂತಿದ್ದರು ಸಾಯಂಕಾಲದವರೆಗೂ ಕಾರ್ಯಕ್ರಮ ನಡೆಯಿತು. ಹಾಗೆಯೇ ಬಂಪರ್ ಬಹುಮಾನವಾಗಿ ಎರಡು ಎಚ್ ಎಫ್ ಡಿಲಕ್ಸ್‌ ಬೈಕ್ ಅನ್ನು ಕೊಡಲಾಯಿತು.