ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ಬುಡರಕಟ್ಟಿ ಸೇರಿದಂತೆ 23 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಆರಂಭಿಸಲಾಗಿರುವ 23 ಕೋಟಿ ರೂಪಾಯಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಐದಾರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಬೈಲಹೊಂಗಲ ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಪರಿಶೀಲನೆ ಬಳಿಕ ಆನಿಗೋಳ ಗ್ರಾಮ ಪಂಚಾಯತಿ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯದಲ್ಲಿ 2498 ಶುದ್ಧ ಕುಡಿಯುವ ನೀರಿನ ಘಟಕಗಳು ನಾನಾ ಕಾರಣಗಳಿಂದ ಬಂದ್ ಆಗಿದ್ದು ಅವುಗಳನ್ನು ದುರಸ್ತಿ ಮಾಡುವ ಕೆಲಸ ಚುರುಕಿನಿಂದ ನಡೆದಿದೆ.
ಈಗಾಗಲೇ 950 ಘಟಕಗಳನ್ನು ದುರಸ್ತಿ ಮಾಡಲಾಗಿದೆ ಉಳಿದ ಘಟಕಗಳನ್ನು 15 ದಿನಗಳಲ್ಲಿ ದುರಸ್ತಿ ಮಾಡಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಮಳೆ ರಸ್ತೆ ಹಾನಿ- ದುರಸ್ತಿಗೆ ಹಣ ಬಿಡುಗಡೆ:
ಇತ್ತೀಚೆಗೆ ಮಳೆಯಿಂದಾಗಿ ರಸ್ತೆ ಹಾಳಾಗಿದ್ದು, ಇಂತಹ ರಸ್ತೆಗಳ ತುತರ್ು ದುರಸ್ತಿಗೆ ಶಾಸಕರ ಅಧ್ಯಕ್ಷತೆಯ ಟಾಸ್ಕಫೋರ್ಸ ಗೆ 122 ಕೋಟಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಸುಮಾರು ಒಂದು ನೂರು ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗಿದೆ.
ಈ ಹಣದಲ್ಲಿ ತಕ್ಷಣವೇ ರಸ್ತೆ ದುರಸ್ತಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಬಹಿಲು ಬಹಿದರ್ೆಸೆ ಮುಕ್ತ ರಾಜ್ಯ:
ರಾಜ್ಯ ಸಕರ್ಾರವು ಬರುವ ಅಕ್ಟೋಬರ್ 2ರ ವೇಳೆಗೆ ಕನರ್ಾಟಕ ರಾಜ್ಯವನ್ನು ಬಯಲು ಬಹಿದರ್ೆಸೆ ಮುಕ್ತ ರಾಜ್ಯವನ್ನಾಗಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆದಿದೆ. ಸಾರ್ವಜನಿಕರು ಇದಕ್ಕೆ ಕೈಜೋಡಿಸಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿಕೊಂಡರು.
ತನಗಿರುವ ಮನೆಯ ಒಂದು ಕೋಣೆಯನ್ನೇ ತೆರವುಗೊಳಿಸಿ ಶೌಚಾಲಯ ನಿಮರ್ಿಸಿದ ಬೈಲಹೊಂಗಲ ತಾಲ್ಲೂಕಿನ ಆನಿಗೋಳ ಗ್ರಾಮದ ಫಕ್ಕೀರವ್ವ ಶೌಚಾಲಯ ನಿಮರ್ಾಣದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮಾದರಿ ಮಹಿಳೆ ಫಕ್ಕೀರವ್ವ ಅಂತಹವರ ಸಂಖ್ಯೆ ಹೆಚ್ಚಾದಾಗ ಮಾತ್ರ ಬಯಲು ಬಹಿದರ್ೆಸೆ ಮುಕ್ತ ರಾಜ್ಯ ನಿಮರ್ಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೈಲಹೊಂಗಲ ತಾಲೂಕಿನ ನಯಾನಗರ ಸೇತುವೆ ಬಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಜಾಕವೆಲ್, ಪಟ್ಟಿಹಾಳ ಕೆ.ಬಿ. ಗ್ರಾಮದ ಬಳಿಯ ನೀರು ಶುದ್ಧೀಕರಣ ಘಟಕ, ನರೇಗಾ ಯೋಜನೆ ಅಡಿ ನಿಮರ್ಿಸುತ್ತಿರುವ ಕೆರೆ ಕಾಮಗಾರಿ, ಆನಿಗೋಳ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಚಿವ ಕೃಷ್ಣ ಭೈರೃಗೌಡ ಅವರು ಪರಿಶೀಲಿಸಿದರು.
ಇದಾದ ಬಳಿಕ ಆನಿಗೋಳ ಗ್ರಾಮ ಪಂಚಾಯತಿ ಆವರಣದಲ್ಲಿ ಇರುವ ಅರಳಿ ಕಟ್ಟೆಯಲ್ಲಿ ಕುಳಿತ ಸಚಿವರು, ಗ್ರಾಮದಲ್ಲಿ ಶೌಚಾಲಯಗಳ ನಿಮರ್ಾಣ ಹಾಗೂ ಅವುಗಳ ಬಳಕೆಯ ಕುರಿತು ಗ್ರಾಮಸ್ಥರೊಂದಿಗೆ ಚಚರ್ೆ ನಡೆಸಿದರು.
ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡರ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದಶರ್ಿ ಅತೀಕ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್ ಆರ್. ಸೇರಿದಂತೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.