ಲೋಕದರ್ಶನ ವರದಿ
ಮುದ್ದೇಬಿಹಾಳ 04: ಎನ್ಎ ಪ್ಲಾಟುಗಳಿಗೆ ಅಗತ್ಯವಾಗಿರುವ ಕಂಪ್ಯೂಟರ್ ಉತಾರೆ ನೀಡಲು ತಾಲೂಕಿನ ಮೂರು ಗ್ರಾಪಂಗಳ ಪಿಡಿಒ, ಆಪರೇಟರ್ಗಳು 4-5 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಜಿಪಂ ಸಿಇಒ ವಿಕಾಸ್ ಸುರಳಕರ್ ಎದುರಿಗೆ ಆರೋಪಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ನಡೆದ ವಸತಿ ಯೋಜನೆ ಹಾಗೂ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ದೇಸಾಯಿ, ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯ ಹಡಲಗೇರಿ, ಕುಂಟೋಜಿ, ಬಿದರಕುಂದಿ ಗ್ರಾಪಂಗಳಲ್ಲಿ ಈ ವಸೂಲಿ ದಂಧೆ ನಡೆದಿದೆ. ಜನಸಾಮಾನ್ಯರು ಒಂದು ಕಂಪ್ಯೂಟರ್ ಉತಾರೆಗೆ ಸಾವಿರಾರು ರೂ.ಗಳನ್ನು ಕೊಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರಲ್ಲದೆ, ಹಡಲಗೇರಿ ಕಂಪ್ಯೂಟರ್ ಆಪರೇಟರ್ ವೆಂಕಟೇಶ ಭಜಂತ್ರಿ ಎಂಬಾತ ಬಹಿರಂಗವಾಗಿ ದುಡ್ಡು ವಸೂಲಿ ಮಾಡುತ್ತಿದ್ದಾನೆ ಎಂಬುದು ಗಮನಕ್ಕೆ ಬಂದಿದೆ. ಇದೇ ಪ್ರವೃತ್ತಿ ಮುಂದುವರಿಸಿದರೆ ಅದಕ್ಕೆ ಪಿಡಿಒ, ಆಪರೇಟರ್ ಮೇಲೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಗ್ರಾಪಂಗಳಲ್ಲಿ ಅಧ್ಯಕ್ಷರು, ಆಡಳಿತ ಮಂಡಳಿ ಕಾರ್ಯನಿರ್ವಹಣೆಗಿಂತ ಪಿಡಿಒ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದೆ. 2020ರೊಳಗಾಗಿ ಎಲ್ಲರಿಗೂ ಸೂರು ಒದಗಿಸುವ ಕಾರ್ಯ ಅಧಿಕಾರಿಗಳಿಂದ ಆಗಬೇಕು. ನಿಜವಾದ ಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆಗಳನ್ನು ಆಯ್ಕೆ ಮಾಡಬೇಕು. ಇದರಲ್ಲಿ ಪಕ್ಷಪಾತ ಧೋರಣೆ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದರು.
ಜಿಪಂ ಉಪ ಕಾರ್ಯದಶರ್ಿ ಅಮರೇಶ ನಾಯಕ, ಮುಖ್ಯಯೋಜನಾಧಿಕಾರಿ ನಿಂಗಪ್ಪ ಎಂ., ತಾಪಂ ಪ್ರಭಾರ ಇಒ ಪ್ರಕಾಶ ದೇಸಾಯಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.