ಲೋಕದರ್ಶನ ವರದಿ
ಮುದ್ದೇಬಿಹಾಳ 24: ರಾಜ್ಯದಲ್ಲಿ ಕಾಂಗ್ರಸ್, ಜೆಡಿಎಸ್, ಬಿಜೆಪಿಯ ಯಾವ ಶಾಸಕರಿಗೂ ಮಧ್ಯಂತರ ಚುನಾವಣೆ ಬೇಕಾಗಿಲ್ಲ. ಹೀಗಾಗಿ ಈ ಸರ್ಕಾರ 4 ವರ್ಷದ ಅವಧಿಯವರೆಗೂ ಮುಂದುವರಿಯುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ತಾಳೀಕೋಟೆ ತಾಲೂಕಿನ ಲಿಂಗದಳ್ಳಿ ಗ್ರಾಮಕ್ಕೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗಮಧ್ಯೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸಕರ್ಾರ ಬೀಳುತ್ತೆ ಎನ್ನುವ ಮಾತುಗಳಿಗೆಲ್ಲ ಅರ್ಥ ಇಲ್ಲ. ಮೈತ್ರಿ ಎಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳಿರುವುದು ಸಹಜ. ಒಂದೇ ಮನೆಯಲ್ಲಿ ಸಮಸ್ಯೆಗಳು ಹೇಗೆ ಇರುತ್ತವೆಯೋ ಹಾಗೆ ಮೈತ್ರಿ ಸರ್ಕಾರದಲ್ಲೂ ಇವೆ ಎಂದರು.
ಮಧ್ಯಂತರ ಚುನಾವಣೆ ಬಗ್ಗೆ ತಮ್ಮ ಹೇಳಿಕೆ ತಪ್ಪಾಗಿ ಗ್ರಹಿಸಲಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರೇ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಆ ಬಗ್ಗೆ ಹೆಚ್ಚು ಮಾತಾಡೊಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಮೈತ್ರಿ ಕಾರಣ ಎಂದು ವೀರಪ್ಪ ಮೋಯ್ಲಿ ಹೇಳಿದ್ದು ಅವರ ವೈಯುಕ್ತಿಕ ವಿಚಾರ. ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಸೋತಿದೆ. ಆದರೆ ಅಲ್ಲಿ ಯಾವ ಮೈತ್ರಿಯೂ ಇರಲಿಲ್ಲವಲ್ಲ. ಇಡೀ ದೇಶಾದ್ಯಂತ ಪಕ್ಷಕ್ಕೆ ಹಿನ್ನೆಡೆ ಆಗಿದೆ. ಕರ್ನಾಟಕದಲ್ಲಿ ಮೈತ್ರಿ ಇದೆ ಎಂದ ಮಾತ್ರಕ್ಕೆ ಇದನ್ನೇ ಟೀಕಿಸುವುದು ಸರಿ ಅಲ್ಲ. ಜನರ ತೀಪರ್ಿಗೆ ತಲೆ ಬಾಗಿದ್ದೇವೆ. ಪಕ್ಷವನ್ನೇ ಮತ್ತೇ ಬಲಿಷ್ಠವಾಗಿ ಕಟ್ಟಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರಿಟೀಷರ, ರಾಜ ಮಹಾರಾಜರ ಕಾಲದಲ್ಲಿದ್ದ ಪೊಲೀಸ್ ಬ್ಯಾಂಡ್ ಸೇವೆ ನಶಿಸಿ ಹೋಗತೊಡಗಿದೆ. ಇದನ್ನು ಉಳಿಸಿ ಪ್ರೋತ್ಸಾಹಿಸಲು ಮತ್ತು ಬ್ಯಾಂಡ್ಗೆ ಉತ್ತೇಜನ ಕೊಡಲು ಅಲೋವೆನ್ಸ್ ಕೊಡುವ ಚಿಂತನೆ ನಡೆದಿದೆ. ಔರಾದ್ಕರ್ ಸಮಿತಿ ವರದಿ ಅನುಷ್ಠಾನ ಕಾರ್ಯರೂಪದಲ್ಲಿದ್ದು ಬೇಡಿಕೆ ಈಡೇರಿಸಲು ರು.830 ಕೋಟಿ ಆರ್ಥಿಕ ಹೊರೆ ಆಗುತ್ತದೆ. ಈ ಬಗ್ಗೆ ಅಂತಿಮ ರೂಪ ನೀಡಲು ಸಿಎಂ 15 ದಿನ ಕಾಲಾವಕಾಶ ನೀಡಿದ್ದಾರೆ. ಗೃಹ ಮತ್ತು ಹಣಕಾಸು ಇಲಾಖೆ ನಡುವೆ ಚಚರ್ೆ ಪ್ರಗತಿಯಲ್ಲಿದ್ದು 8-10 ದಿನಗಳಲ್ಲಿ ಅಂತಿಮಗೊಂಡು 15-20 ದಿನಗಳಲ್ಲಿ ಪೊಲೀಸರಿಗೆ ಸಿಹಿ ಸುದ್ದಿ ಸಿಗುತ್ತದೆ ಎಂದರು.
ಎಲ್ಲ ಠಾಣೆಗಳಲ್ಲಿ ಪೊಲೀಸರ ಕೊರತೆ ಗಂಭೀರವಾಗಿದ್ದು ಇದನ್ನು ನೀಗಿಸಲು ರಾಜ್ಯದಲ್ಲಿ ಶೀಘ್ರ 1 ಲಕ್ಷ ಪೊಲೀಸರನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸ್ಕೇರಸಿಟಿ ಯೋಜನೆ ಅಡಿ ಈಗಾಗಲೇ ಬೆಂಗಳೂರಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಪ್ರಗತಿಯಲ್ಲಿದೆ. ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರ ನಗರಗಳನ್ನು ಕೂಡ ಈ ಯೋಜನೆ ಅಡಿ ಸೇರಿಸಲು ಪ್ರಪೋಜಲ್ ಕಳಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹೊರಟ್ಟಿ ಪ್ರತಿಕ್ರಿಯೆ:
ದೇವೇಗೌಡರ ಹೇಳಿಕೆ, ಸಮ್ಮಿಶ್ರ ಸಕರ್ಾರದ ಬಗ್ಗೆ ಕಾಂಗ್ರೆಸ್ನವರ ಹೇಳಿಕೆಗೆ ಪ್ರತಿಕ್ರಿಯಿಸುವಂತೆ ಸುದ್ದಿಗಾರರು ಸಚಿವರ ಜೊತೆ ಇದ್ದ ಮಾಜಿ ಸಚಿವ, ಜೆಡಿಎಸ್ ಹಿರಿಯ ಧುರೀಣ ಬಸವರಾಜ ಹೊರಟ್ಟಿ ಅವರನ್ನು ಕೇಳಿದರು. ಆದರೆ ಪ್ರತಿಕ್ರಿಯಿಸಲು ನಿರಾಕರಿಸಿದ ಹೊರಟ್ಟಿ ಅವರು ಏನನ್ನೂ ಪ್ರತಿಕ್ರಿಯಿಸದಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೂಚಿಸಿ ಬಾಯಿ ಮುಚ್ಚಿಬಿಡಿ ಅಂದಿದ್ದಾರೆ. ಹೀಗಾಗಿ ನಾವು ಈ ಬಗ್ಗೆ ಏನೂ ಹೇಳೊಲ್ಲ ಎಂದರು.
ಮಾಜಿ ಸಚಿವ ಸಿ.ಎಸ್.ನಾಡಗೌಡ, ಜೆಡಿಎಸ್ ಧುರೀಣರಾದ ಮಂಗಳಾದೇವಿ ಬಿರಾದಾರ, ಬಸವರಾಜ ಸುಕಾಲಿ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ತಾಪಂ ಸದಸ್ಯ ಪ್ರೇಮಸಿಂಗ್ ಚವ್ಹಾಣ, ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ್ ಶಿರೋಳ, ತಂಗಡಗಿ ಗ್ರಾಪಂ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಕನರ್ಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಅಶೋಕ ನಾಡಗೌಡ, ಚನ್ನಪ್ಪ ವಿಜಯಕರ್, ಎಸ್.ಎಸ್.ಮಾಲಗತ್ತಿ ಇದ್ದರು.