ಮುದ್ದೇಬಿಹಾಳ27: ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಜನಸ್ಪಂದನೆ ಸಭೆಯನ್ನು ತೆಗೆದುಕೊಂಡ ಜಿಪಂ ಅಧ್ಯಕ್ಷರಿಗೆ ಗ್ರಾಮಸ್ಥರಿಂದ ಊಹೆಗೂ ಮೀರಿ ದೂರುಗಳು ಬಂದವು. ಅವುಗಳನ್ನು ಬಗೆಹರಿಸುವಲ್ಲಿ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಅವರಿಗೆ ಕೆಲವರು ಮುಜುಗರಕ್ಕೆ ಒಳಗಾಗುವಂತೆ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಶುಕ್ರವಾರ ಎರಡನೇ ಹಂತದ 3ನೇ ದಿನದ ಜನಸ್ಪಂಧನಾ ಸಭೆಯಲ್ಲಿ ಸಾರ್ವಜನಿಕರ ಅಹಲವಾಲು ವೀಕರಿಸುವ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ಜಿಪಂ ಚುನಾಯಿತ ಸದಸ್ಯರಾಗಿ ಆಯ್ಕೆಗೊಂಡ ನಂತರ ಗ್ರಾಮಕ್ಕೆ ಕೇವಲ ಎರಡು ಬಾರಿ ಬೇಟಿ ನೀಡಿದ್ದಿರಿ. ಅಲ್ಲದೇ ಸರಕಾರಿ ಯೋಜನೆಗಳಲ್ಲಿ ತಾರತಮ್ಯವನ್ನು ತೋರಿದ್ದಿರಿ ಎಂದು ಗ್ರಾಮದ ಕೆಲವರು ಜಿಪಂ ಅಧ್ಯಕ್ಷರ ಎದುರಿಗೆ ಆರೋಪಿಸಿದರು.
ಅರ್ಹರಿಗೆ ಸಿಗಬೇಕಾದ ಸೌಲಭ್ಯಗಳು ಅನರ್ಹರ ಪಾಲಾಗಿವೆ. ವಯಸ್ಸು ಆಗದವರು ವಯಸ್ಸಾಗಿದೆ ಎಂದು ಸುಳ್ಳು ಹೇಳಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ, ಅನರ್ಹರಿಗೆ ಮಾತ್ರ ಪಡಿತರ ಕಾರ್ಡ ನೀಡಲಾಗಿದೆ. ಅರ್ಹರಿಗೆ ದೊರೆತಿಲ್ಲ ಎಂದೆಲ್ಲ ದೂರಿದರು. ಏಜಂಟರ ಹಾವಳಿಯೂ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಅಧಿಕಾರಿಗಳನ್ನು, ಜಿಪಂ ಅಧ್ಯಕ್ಷರನ್ನು ಒತ್ತಾಯಿಸಿದರು. ಕೆಲವರಂತೂ ಗ್ರಾಮದಲ್ಲಿರುವ ಗಂಭೀರ ಸಮಸ್ಯೆಗಳಿಗೆ ಜನಪ್ರತಿನಿಧಿಗಳೇ ಕಾರಣ.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದಶರ್ಿ ಬಿ.ಡಿ.ಬಾಲರಡ್ಡಿ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಡಾ.ಸುರೇಶ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ, ಪಿಡಿಓ ಶಿವನಗೌಡ ಪಾಟೀಲ, ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಎ.ಎಂ.ದಳವಾಯಿ, ಗ್ರಾಮಲೆಕ್ಕಿಗ ಡಬ್ಲು ಎಂ ಶೇಖ್, ತಾಪಂ ಸದಸ್ಯ ಸುರೇಶ ಹುಗ್ಗಿ, ಹೆಸ್ಕಾಂನ ನಾಲತವಾಡ ಸೆಕ್ಷನ್ ಅಧಿಕಾರಿ ರುದ್ರಸ್ವಾಮಿ ಹಿರೇಮಠ, ಸಿಆರ್ಪಿ ವೀರೇಶ ನವಲಿ, ಅಖಿಲ ಗೋವಾ ಕನ್ನಡಿಗರ ಹೋರಾಟ ಸಮಿತಿ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ಸಿ.ಸಿ.ಕುಲಕಣರ್ಿ, ಗ್ರಾಪಂ ಸದಸ್ಯರು, ಸ್ಥಳೀಯ ಗಣ್ಯರು, ನಾಲತವಾಡ ಹೊರ ಪೊಲೀಸ್ ಠಾಣೆಯ ಪೇದೆಗಳು ಇದ್ದರು.
ಬಲದಿನ್ನಿ-ಕಾರಕೂರ ಗ್ರಾಮದ ಶಾಲಾ ಕಟ್ಟಡ ದುರಸ್ಥಿಗೆ ಆಗ್ರಹ:
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಖಡಕ್ಕಾದ ನಿಧರ್ಾರಗಳನ್ನು ತೆಗೆದುಕೊಂಡು ಸಂಬಂಧಿಸಿದ ಅಧಿಕಾರಿಗಳಿಲಗೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಜಿಪಂ ಅಧ್ಯಕ್ಷರ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಸರಕಾರಿ ಶಾಲಾ ಕಟ್ಟಡ ಸರಿಯಾಗಿಲ್ಲ ಎನ್ನುವುದು ದುದರ್ೈವದ ಸಂಗತಿ. ಕೂಡಲೇ ಶಾಲಾ ಕಟ್ಟಡ ಬಗ್ಗೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಸೂಚಿಸಿದರು.
ತಾಲೂಕಿನ ಬಲದಿನ್ನಿ ಹಾಗೂ ಕಾರಕೂರ ಗ್ರಾಮದಲ್ಲಿ ಶುಕ್ರವಾರ ಎರಡನೇ ಹಂತದ 3ನೇ ದಿನದ ಜನಸ್ಪಂಧನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಅವರು ಗ್ರಾಮಸ್ಥರ ಒತ್ತಾಯದ ಮೆರೆಗೆ ಗ್ರಾಮದ ಸರಕಾರಿ ಶಾಲೆಗೆ ಬೇಟಿ ನೀಡಿ ಶಾಲಾ ಶೀಥಲಾವಸ್ಥೆ ದುರಸ್ಥಿ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ.ಗಾಂಜಿ ಅವರು ಸೂಚಿಸಿದರು.
ಬಲದಿನ್ನಿ ಹಾಗೂ ಕಾರಕೂರ ಗ್ರಾಮಗಳಿಗೆ ಒಂದೇ ಶಾಲೆ ಇದ್ದ ಕಾರಣ ಶಾಲಾ ಕಟ್ಟಡ ದುರಸ್ಥಿಗೆ ಸಮಸ್ಯೆಯಾಗಿರಬಹುದು. ಕೂಡಲೇ ಗ್ರಾಮದ ಹಿರಿಯರನ್ನು ಸಂಪಕರ್ಿಸಿ ಶಾಲಾ ಕಟ್ಟಡದ ದುರಸ್ಥಿಗೆ ಯೋಜನೆಯನ್ನು ರೂಪಿಸಬೇಕು ಎಂದು ಅವರು ಹೇಳಿದರು.
ಜಿಪಂ ಅಧ್ಯಕ್ಷರ ಸೂಚನೆ ಸ್ಪಂಧಿಸಿದ ಬಿಇಓ ಎಸ್.ಡಿ.ಗಾಂಜಿ ಅವರು ಕೂಡಲೇ ಗ್ರಾಮದ ಹರಿಯರನ್ನು ಸಂಪಕರ್ಿಸಿ ಎರಡೂ ಶಾಲೆಗಳನ್ನು ಒಂದೇ ಶಾಲೆಯನ್ನಾಗಿ ಪರಿವತರ್ಿಸಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ನೋಡಿಕೊಳ್ಳುವದಾಗಿ ಜಿಪಂ ಅಧ್ಯಕ್ಷರಿಗೆ ಭರವಸೆ ನೀಡಿ ಇದಕ್ಕೆ ಅವರೂ ಸಹಕಾರ ನೀಡಬೇಕು ಎಂದು ಕೋರಿದರು.
ಬಲದಿನ್ನಿ, ಕಾರಕೂರ ಗ್ರಾಮದಲ್ಲಿ ಜಂಟಿಯಾಗಿ ನಡೆದ ಜನಸ್ಪಂಧನೆಯಲ್ಲಿ ಯಾವುದೇ ಗೊಂದಲ, ಗಲಾಟೆ ಆಗಲಿಲ್ಲ. ಮಾಸಾಶನ, ಪಡಿತರ ವಂಚಿತರು ಹೊಸದಾಗಿ ಅಜರ್ಿ ಸಲ್ಲಿಸಿದ್ದರ ಬಗ್ಗೆ ತಿಳಿಸಿ ಮಂಜೂರು ಮಾಡಿಕೊಡಲು ಒತ್ತಾಯಿಸಿದರು. ಈ ಗ್ರಾಮಗಳು ಕೆಬಿಜೆಎನ್ನೆಲ್ನ ಪುನರ್ವಸತಿ ವಿಭಾಗದ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ದೊರಕುವ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಕೋರಿದರು.
ಬಿಸಿ ಊಟ ಸೇವಿಸಿದ ಜಿಪಂ ಅಧ್ಯಕ್ಷೆ:
ಶಾಲಾ ಸಮಸ್ಯೆಯನ್ನೂ ಕೂಡಲೇ ಬಗೆಹರಿಸಬೇಕು ಎಂದು ಜಿಪಂ ಅಧ್ಯಕ್ಷ ನೀಲಮ್ಮ ಮೇಟಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿ ಶಾಲೆಯಲ್ಲಿ ಮಕ್ಕಳಿಗಾಗಿ ಮಾಡಿದ ಬಿಸಿ ಊಟವನ್ನು ಮಕ್ಕಳೊಂದಿಗೆ ಸೇವಿಸಿ ಅಡುಗೆ ಗುಣಮಟ್ಟವನ್ನು ಪರಿಶೀಲಿಸಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಮಾತ್ರವಾಯಿತು. ಜಿಪಂ ಅಧ್ಯಕ್ಷರು ಮಾತ್ರವಲ್ಲದೇ ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಸೇರಿದಂತೆ ತಾಲೂಕಿನ ಪ್ರಮುಖ ಇಲಾಖೆ ಅಧಿಕಾರಿಗಳೂ ಬಿಸಿ ಊಟವನ್ನು ಸೇವಿಸಿದರು.