ಮುದ್ದೇಬಿಹಾಳ: ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿ: ರಾಹುಲ್

ಲೋಕದರ್ಶನ ವರದಿ

ಮುದ್ದೇಬಿಹಾಳ 01: ಸೇವೆಗೆ ಸೇರಿದ ಮೇಲೆ ನಿವೃತ್ತಿ ಅನಿವಾರ್ಯ. ಆದರೆ ಇಲಾಖೆಗೆ ಉತ್ತಮ ಸೇವೆ ಸಲ್ಲಿಸಿದೆ ಎಂಬ ಸಂತೃಪ್ತಿ ಮನದಲ್ಲಿದ್ದರೆ ನಿವೃತ್ತಿಯ ಜೀವನವೂ ಸುಖಮಯವಾಗಿ ಕಳೆಯಲು ಸಾಧ್ಯ ಎಂದು ಘಟಕ ವ್ಯವಸ್ಥಾಪಕ ರಾಹುಲ್ ಹೂನಸೂರೆ ಹೇಳಿದರು. ಅವರು ಪಟ್ಟಣದ ಸಾರಿಗೆ ಘಟಕದಲ್ಲಿ ಸೇವೆಯಿಂದ ನಿವೃತ್ತರಾದ ಸಾರಿಗೆ ಚಾಲಕ ಎನ್ ಸಿ ಜುಮನಾಳ, ಚಂದ್ರಶೇಖರ ಲಮಾಣಿ, ಎಸ್.ಜಿ ಡಂಬಲ್, ಕಂಡ್ಕಟರ ಐ.ಎ.ಮಾಲದಾರ, ಎಸ್.ಎಚ್.ಗುಬ್ಬಚಿ ತಾಂತ್ರಿಕ ಸಾಹಕ ಎ.ಎನ್.ಮಕಾಂದಾರ ಇವರಿಗೆ ಸನ್ಮಾನಿಸಿ ಮಾತನಾಡಿದರು.

ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವುದು ಎಂದರೆ ಅದು ಸಾಹಸದ ಕೆಲಸವೇ ಆಗಿದೆ. ದಿನ ನಿತ್ಯ ನೂರಾರು ವಿಭಿನ್ನ ಮನೋಭಾವದ ಜನರೊಂದಿಗೆ ಸಹಕರಿಸಿ ಸೇವೆ ಸಲ್ಲಿಸುವುದು ಎಂದರೆ ಸಾಮಾನ್ಯದ ಮಾತಲ್ಲ. ಸಣ್ಣ ಪುಟ್ಟ ವಿಷಯಕ್ಕೂ ಕಾಲು ಕೆದರಿ ಜಗಳ ಕಾಯುವ ಪ್ರಯಾಣಿಕರು ಒಂದೆಡೆಯಾದರೆ ಕರ್ತವ್ಯ ನಿರ್ವಹಣೆಯಲ್ಲಿ ವಿವಿಧ ರೀತಿಯ ಕಿರಿಕಿರಿ ಮಾಡುವ ಅಧಿಕಾರಿಗಳ ಒತ್ತಡ ಸಂಭಾಳಿಸಿ ಸೇವೆ ಮಾಡುವುದು ಇನ್ನೊಂದು ಕಡೆ ಇರುತ್ತದೆ. ಈ ಎಲ್ಲ ಒತ್ತಡಗಳನ್ನು ದಾಟಿ ನಿವೃತ್ತರಾದರು ಎಂದು ಹರ್ಷ ಪಟ್ಟರೆ, ಇಂಥ ಒಳ್ಳೆಯ ಕರ್ತವ್ಯ ಮಾಡುತ್ತಿದ್ದ ಗೆಳೆಯರನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ಕೊರಗು ನಮ್ಮಲ್ಲಿ ಇದೆ ಎಂದವರು ಹೇಳಿದರು. 

ಸಮಾರಂಭದಲ್ಲಿ ಅಥಿತಿಗಳು ಎಸ್.ಜಿ.ಗಸ್ತಿಗಾರ, ಯಮನಪ್ಪ ಬಿ.ಚಲವಾದಿ, ಪಾಟೀಲ ಎ.ಡಿ.ಎಂ ಮತ್ತಿತರರು ಇದ್ದರು. ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪನೆಯನ್ನು ಎಸ್.ಆರ್.ಮುಲ್ಲಾ ಮಾಡಿದರು