ಶ್ರೀಯುತ ಚಿಕ್ಕಣ್ಣ ಬಿ ಎಸ್ ಇವರಿಗೆ ಪಿ ಎಚ್ ಡಿ ಪ್ರಧಾನ

Mr. Chikkanna B.S. has PhD principal

ಶ್ರೀಯುತ ಚಿಕ್ಕಣ್ಣ ಬಿ ಎಸ್ ಇವರಿಗೆ ಪಿ ಎಚ್ ಡಿ ಪ್ರಧಾನ

ಬ್ಯಾಡಗಿ 05 : ಇಲ್ಲಿನ ಹಂಸ ಬಾವಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾಗಿರುವ ಡಾ. ಚಿಕ್ಕಣ್ಣ. ಬಿ. ಎಸ್‌.ರವರಿಗೆ ಪಿಹೆಚ್‌.ಡಿ. ಪದವಿ ಲಬಿಸಿದೆ.ಮಾನ್ಯತಾ ಕೇಂದ್ರ: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಸಂಶೋಧನಾ ಕೇಂದ್ರದ ಮೂಲಕ ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಬೆಂಗಳೂರು. ಇಲ್ಲಿ ಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ *ಡಾ.ಶೀಲಾದೇವಿ ಎಸ್‌. ಮಳೀಮಠ* ರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾಹಿತ್ಯ ಪರಿಷತ್ತಿನ ಮೂಲಕ ಸಲ್ಲಿಸಿದ ಮಹಾಪ್ರಬಂಧ, *ಕನ್ನಡ ಖಂಡ ಕಾವ್ಯಗಳು ವಸ್ತು ಮತ್ತು ಆಶಯ* (ದಲಿತ/ಬಂಡಾಯ ಕಾಲಘಟ್ಟದ ಆಯ್ದ ಕವಿಗಳನ್ನು ಅನುಲಕ್ಷಿಸಿ) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ *ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಹೆಚ್‌.ಡಿ. ಪದವಿ* ನೀಡಿದೆ. ಇವರು ತುಮಕೂರು ತಾಲ್ಲೂಕಿನ ಜಿ.ಬೊಮ್ಮನಹಳ್ಳಿಯ ಸಿದ್ದಗಂಗಯ್ಯ ಮತ್ತು ನರಸಮ್ಮ ದಂಪತಿಯ ಮಗನಾಗಿದ್ದು, ಕುಟುಂಬದ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗ, ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಶುಭಹಾರೈಸಿದ್ದಾರೆ.