ಲೋಕದರ್ಶನವರದಿ
ಧಾರವಾಡ೨೮: ಜನರಿಗೆ ಉತ್ತರ ಕರ್ನಾಟಕ ಎಂದರೆ ತಪ್ಪು ತಿಳುವಳಿಕೆ ಇದ್ದು, ಇಂತಹ ಒಂದು ವಿದ್ಯಾಕಾಶಿಗೆ ಒಂದು ಗರಿಯಂತೆ ಈ ವಿಜ್ಞಾನ ಕೇಂದ್ರವು ಇದ್ದು, ಇದನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಲು ನಾವು ನೀವೆಲ್ಲರೂ ಇದನ್ನು ಪ್ರಚಾರವನ್ನು ಮಾಡಬೇಕು ಎಂದು ಸ್ಥಾನಿಕ ಸಂಪಾದಕರು, ವಿಜಯಕನರ್ಾಟಕ ಬಂಡು ಕುಲಕರ್ಣಿಯವರು ಹೇಳಿದರು.
ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕನರ್ಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, ಕನರ್ಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು ಇವುಗಳ ಸಹಯೋಗದಲ್ಲಿ "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ನ್ನು ಫೆ.28ರಂದು ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಚರಿಸಲಾಯಿತು. ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ವಿಷಯ "ಜನರಿಗಾಗಿ ವಿಜ್ಞಾನ ಹಾಗೂ ವಿಜ್ಞಾನಕ್ಕಾಗಿ ಜನ" ನಿಮಿತ್ಯ ಪದವಿ ವಿದ್ಯಾಥರ್ಿಗಳಿಗೆ ಚಚರ್ಾ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು.
ವಿಜ್ಞಾನ ಕೇಂದ್ರವು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಿ ಮರೆಯುವ ಬದಲು, ಅದರ ಮಹತ್ವವನ್ನು ಅರಿತುಕೊಂಡು ಮೂಲ ವಿಜ್ಞಾನದಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಮಾಡಲು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೇಂದ್ರದ ನಿದರ್ೇಶಕರಾದ ಡಾ. ಕೆ.ಬಿ. ಗುಡಸಿ ಅವರು ಸಿ.ವಿ.ರಾಮನ್ ಅವರ ಜೀವನ ಚರಿತ್ರೆಯಿಂದ ಪ್ರೇರೆಪಿತರಾಗುವಂತೆ ವಿದ್ಯಾಥರ್ಿಗಳಿಗೆ ಮನಮುಟ್ಟುವ ಹಾಗೆ ವಿವರಿಸಿದರು. ರಾಮನ್ ಅವರು ವಿಜ್ಞಾನದಲ್ಲಿ ನೋಬೆಲ್ ಪಡೆದ ನಂತರ ಇಲ್ಲಿಯವರೆಗೂ ಯಾವುದೇ ನೋಬೆಲ್ ಪಾರಿತೋಷಕ ವಿಜ್ಞಾನದಲ್ಲಿ ಭಾರತಕ್ಕೆ ಬಂದಿರುವುದಿಲ್ಲ. ಇದಕ್ಕೆ ಕಾರಣ ಬ್ರಿಟಿಷರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕೇವಲ ಸಹಾಯಕರ/ ಕ್ಲರ್ಕ ಕೆಲಸಗಳಿಗೆ ಸೀಮಿತವಾಗುವಂತೆ ರೂಢಿಸಿಕೊಟ್ಟು ಹೋಗಿದ್ದಾರೆ. ಈ ಶಿಕ್ಷಣ ವ್ಯವಸ್ಥೆಯು ಬದಲಾದರೆ ಭಾರತೀಯರ ನಿಜವಾದ ಜ್ಞಾನಕ್ಕೆ ಬೆಲೆಸಿಕ್ಕು ಇನ್ನಷ್ಟು ನೋಬೆಲ್ ಪಾರಿತೋಷಕಗಳು ಬರಬಹುದು ಎಂದು ತಿಳಿಸಿದರು.
ಚಚರ್ಾ ಸ್ಪಧರ್ೆಯ ಕಾರ್ಯಕ್ರಮಕ್ಕೆ ನಿಣರ್ಾಯಕರಾಗಿ ಡಾ. ಉಮರ್ ಫಾರೂಕ್, ಡಾ. ಸುನೀಲ ರಾಠೋಡ ಹಾಗೂ ಡಾ. ಮಲ್ಲಿಕಾಜರ್ುನ ವಿಜಯಕುಮಾರ ಗಿಡ್ನವರ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿಗಳಾದ ಸಂದೀಪ ರಂಜಣಗಿ, ಅಡಿವೆಪ್ಪ ಅಂತಣ್ಣವರ, ಎಂ.ಸಿ. ಕಂದಗಲ್ಲ, ಅಭಿಷೇಕ ಸಿ., ಪ್ರಮೋದ ಆರ್., ಎಂ.ಕೆ. ಹೊರಕೇರಿ, ಕೆ. ಎನ್. ಲಕ್ಷ್ಮಣ, ಶ್ಯಾಮ ತೇಲಗಾರ, ಎಂ.ಸಿ. ಶಂಕರೇಗೌಡ, ಆರ್. ಎನ್. ಕಿಲ್ಲೇದಾರ, ಶಂಕರ ಹಿರೇಮಠ, ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾಥರ್ಿಗಳು, ಪಾಲಕರು ಉಪಸ್ಥಿತರಿದ್ದರು. ಸಿ.ಎಫ್.ಚಂಡೂರ ಅವರು ನಿರೂಪಿಸಿದರು. ವಿಶಾಲಾಕ್ಷಿ ಎಸ್.ಜೆ. ವಂದಿಸಿದರು.