ಲೋಕದರ್ಶನ ವರದಿ
ಕೊಪ್ಪಳ 13:
ನಗರದ ಬಾಲಕರ ಸಕರ್ಾರಿ ಪದವಿ ಪೂರ್ವ ವಿದ್ಯಾಲಯದ
2016-17ನೇ ಸಾಲಿನ ಪದವಿ ಪೂರ್ವ ಶಿಕ್ಷಣ
ಇಲಾಖೆಯ ಅನುದಾನದಡಿ ಅಂದಾಜೂ ಮೊತ್ತ ರೂ 90-77 ಲಕ್ಷದ ನೂತನ 2 ತರಗತಿ ಕಟ್ಟಡ, ಲ್ಯಾಬರೇಟರಿ ಕಟ್ಟಡ, ಮತ್ತು ಶೌಚಾಲಯ ಕಟ್ಟಡ ಉದ್ಘಾಟಿಸಿ ಮತ್ತು 2017-18 ನೇ ಸಾಲಿನ ಪದವಿ
ಪೂರ್ವ ಶಿಕ್ಷಣ ಇಲಾಖೆಯ ಅನುದಾನದಡಿಯಲ್ಲಿ 2 ಕೋಟಿಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ
ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ
ಹಿಟ್ನಾಳರವರು ಶಿಕ್ಷಣದಲ್ಲಿ ಅನೇಕ ತಾಂತ್ರಿಕ ಕಾಲಮಾನಕ್ಕೆ
ತಕ್ಕಂತೆ ಬದಲಾವಣೆಗಳಾಗುತ್ತಿದ್ದು.
ಪ್ರತಿಯೊಬ್ಬ ವಿದ್ಯಾದ್ಯಾತೆಗೆ ತಮ್ಮ ವಿಧ್ಯಾ ಶೈಲಿಯನ್ನು
ಬದಲಾವಣೆ ಮಾಡಿಕೊಳ್ಳಬೇಕು. ನಮ್ಮ ಜಿಲ್ಲೆಯು ಹೈದ್ರಾಬಾದ್
ಕನರ್ಾಟಕ 371ಜೆ ಕಾಲಂ ಗೆ
ಒಳಪಡುವುದರಿಂದ ಇಲ್ಲಿಯ ವಿಧ್ಯಾಥರ್ಿಗಳಿಗೆ ಭವಿಷ್ಯದಲ್ಲಿ ಅನೇಕ ಉತ್ತಮ ಅವಕಾಶಗಳು
ಲಬಿಸಲಿವೆ. ಸಕರ್ಾರ ಶಿಕ್ಷಣಕ್ಕಾಗಿ ಹೆಚ್ಚು-ಹೆಚ್ಚು ಅನುಧಾನವನ್ನು ನೀಡುತ್ತಿದ್ದು, ಪ್ರತಿಯೊಬ್ಬ ವಿದ್ಯಾಥರ್ಿಯು ಇದರ ಸದುಪಯೋಗ ಪಡೆದುಕೊಳ್ಳಬೇಕು
ಹಿಂದಿನ ಕಾಂಗ್ರೆಸ್ ಸಕರ್ಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿದ್ಯಾಶ್ರೀ, ಉಚಿತ ಲ್ಯಾಪ್ ಟಾಪ್,
ಹಾಗೂ ಹೆಚ್ಚಿನ ಶಿಕ್ಷಣ ಪಡೆದುಕೊಳ್ಳಲು ಸಾಲಸೌಲಭ್ಯ ಪಡೆದುಕೊಳ್ಳಲು ವಿದ್ಯಾಥರ್ಿಗಳಿಗೆ ಅನೇಕ ಯೋಜನೆಗಳನ್ನು ನೀಡಿ
ಯಾವೋಬ್ಬ ವಿದ್ಯಾಥರ್ಿ ಶಿಕ್ಷಣದಿಂದ ವಂಚಿತರಾಗದೇ ತಮ್ಮ ಪಾಲಕರ ಕನಸನ್ನು
ನನಸು ಮಾಡಲು ಪ್ರಾಮಾಣಿಕ ಪ್ರಯತ್ನಮಾಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ದೇಶದ ಅತ್ಯನ್ನ ಸ್ಥಾನದಲ್ಲಿ
ಸೇವೆ ಸಲ್ಲಿಸಬೇಕಾಗುವಂತೆ ವಿದ್ಯಾಥರ್ಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು
ಕರೆ ನೀಡಿದರು. ಹಾಗೂ ಈಗಾಗಲೇ 2018-19 ನೇ
ಸಾಲಿನಲ್ಲಿ ಹೆಚ್.ಕೆ.ಡಿ.ಆರ್.ಡಿ.ಬಿ
ಮತ್ತು ಡಿ.ಎಮ್.ಎಫ್
ಅನುದಾನದಲ್ಲಿ ಪದವಿ ಪೂರ್ವ ಮತ್ತು
ಪದವಿ ವಿದ್ಯಾಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರೂ 150-00 ಲಕ್ಷಗಳ ಮಿಸಲಿರಸಲಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಅಕ್ಬರಪಾಷಾ ಪಲ್ಟನ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ
ಹನುಮರೆಡ್ಡಿ ಹಂಗನಕಟ್ಟಿ, ಸಾಹಿತಿಗಳಾದ ಅಲ್ಲಮಪ್ರಭು ಬೆಟದೂರು, ಬಿ.ಜಿ.ಕರಿಗಾರ,
ಪ್ರಾಚಾರ್ಯರರಾದ ನಾಗರಾಜ, ಬಾಲಕರ ಪದವಿ ಪೂರ್ವ ಕಾಲೇಜಿನ
ಸಲಹಾ ಸಮೀತಿ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ಶಿವಾನಂದ ಹೂದ್ಲೂರು, ಕೌಶಲ್ ಚೋಪ್ರಾ, ಗುತ್ತಿಗೆದಾರರಾದ ಚಂದ್ರಶೇಖರ ಹಳ್ಳಿ, ಉಪಸ್ಥಿತರಿದ್ದರು.