ಕ್ಷೇತ್ರದಲ್ಲಿನ ನೀರಾವರಿ ಯೋಜನೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು

More emphasis on irrigation scheme and development of roads in the constituency

ಕ್ಷೇತ್ರದಲ್ಲಿನ ನೀರಾವರಿ ಯೋಜನೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು  

ಕೊಪ್ಪಳ   24: ಇಂದು ಕೊಪ್ಪಳದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ವಿಧಾನಸಭ ಕ್ಷೇತ್ರದ ಗೊಂಡಬಾಳ ಜಿ. ಪಂ ವ್ಯಾಪ್ತಿಯ ಕುಣಿಕೇರಿ ತಾಂಡ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಹಾಗೂ ಅಲ್ಲಾನಗರ ಗ್ರಾಮಗಳಲ್ಲಿ ಅಂದಾಜು ಮೊತ್ತ 12.30 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿದರು.ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡಿದ್ದೇವೆ ಕ್ಷೇತ್ರದ ಬಹುದೊಡ್ಡ ಏತ ನೀರಾವರಿ ಯೋಜನೆಗಳಾದ ಬಹದ್ದೂರ್ ಬಂಡಿ ನವಲ್ ಕಲ್ ಹಾಗೂ ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದ್ದು ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಿಸುತ್ತೇವೆ.188 ಕೋಟಿ ವೆಚ್ಚದ ಬಹದ್ದೂರ್ ಬಂಡಿ ನವಲ್ ಕಲ್ ಏತ ನೀರಾವರಿ  ಯೋಜನೆಗೆ ಇನ್ನೂ ಎರಡು -ಮೂರು ದಿವಸದಲ್ಲಿ ಪ್ರಾಯೋಗಿಕ ಚಾಲನೆ ನೀಡಿ ಪರೀಕ್ಷೆ ಮಾಡಲಾಗುವುದು.ಈ ಏತ ನೀರಾವರಿ ಯೋಜನೆಯಿಂದ ಸುಮಾರು 14000 ಎಕರೆ ನೀರಾವರಿ ಪ್ರದೇಶ ಆಗಲಿದೆ. ಕ್ಷೇತ್ರದ ಚಿಕ್ಕಬಗನಾಳ, ಕಾಸನಕಂಡಿ ಹಾಗೂ ಲಾಚನಕೇರಿ ಏತ ನೀರಾವರಿ ಯೋಜನೆಗಳಿಗೆ ಕೂಡ  ಅನುಧಾನ ಒದಗಿಸಿ ಉಳಿದಿರುವ ಕಾಮಗಾರಿಯನ್ನು ಕೂಡ ಮುಗಿಸಿ ಈ ಭಾಗದ ರೈತರಿಗೆ ಅರ​‍್ಿಸುತ್ತೇವೆ ಎಂದರು.ರಸ್ತೆ ಅಭಿವೃದ್ಧಿಗೆ ಒತ್ತು : ಕೊಪ್ಪಳ ಕ್ಷೇತ್ರದಲ್ಲಿ 150 ಕೋಟಿಗೂ ಹೆಚ್ಚಿನ ಅನುಧಾನದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಬಜೆಟ್ ನಂತರ ಇನ್ನೂ 100-150 ಕೋಟಿ ಅನುಧಾನವನ್ನು ರಸ್ತೆಗಳ ಅಭಿವೃದ್ಧಿಗೆ ತರುತ್ತೇವೆ ಎಂಬ ಭರವಸೆ ವ್ಯಕ್ತಪಡಿಸಿದರು. ಇಂದು 7.50 ಕೋಟಿ ವೆಚ್ಚದಲ್ಲಿ ಗಿಣಗೇರಿ -ಗೊಂಡಬಾಳ ರಸ್ತೆಯ ಹಿರೇಬಗನಾಳ ದಿಂದ ಚಿಕ್ಕಬಗನಾಳ ಮಾರ್ಗವಾಗಿ ಲಾಚನಕೇರಿ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.ಪ್ರೌಢ ಶಾಲೆ ಉದ್ಘಾಟನೆ : ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೂತನವಾಗಿ ಮಂಜೂರು ಆಗಿರುವ ಪ್ರೌಢ ಶಾಲೆಯನ್ನು ಉದ್ಘಾಟಿಸಿದರು.ಈ ಸಾಲಿನಲ್ಲಿ ಕೊಪ್ಪಳ ತಾಲೂಕಿಗೆ 6 ಪ್ರೌಢ ಶಾಲೆಗಳು ಮಂಜೂರು ಆಗಿದ್ದವು.ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೂಳಪ್ಪ ಹಲಗೇರಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ ಗಲ್ಬಿ,ಗ್ಯಾರೆಂಟಿ ಸಮಿತಿ ತಾಲೂಕು ಅಧ್ಯಕ್ಷರಾದ ಬಾಲಚಂದ್ರನ್,ತೋಟಪ್ಪ ಕಾಮ್ನೂರ್,ಜಡಿಯಪ್ಪ ಬಂಗಾಳಿ,ಹೇಮಣ್ಣ ದೇವರಮನಿ ಬಸಣ್ಣ ಬಂಗಾಳಿ,ಬನ್ನೆಪ್ಪ ಗೌಡ, ಜಗದೀಶ್ ಕರ್ಕಿಹಳ್ಳಿ, ಹನಮೇಶ್ ಹೊಸಳ್ಳಿ, ಪಂಪಣ್ಣ ಪೂಜಾರ್, ಆನಂದ ಕಿನ್ನಾಳ, ಧರ್ಮರಾಜ್ ದೇವರಮನಿ, ರವಿ ದೇವರಮನಿ, ಕುಮಾರ್ ಮಜ್ಜಿಗಿ, ದೇವೇಂದ್ರ​‍್ಪ ಮಜ್ಜಿಗಿ,ನಿಂಗಪ್ಪ ಕಾಸನಕಂಡಿ, ರವಿ ಪಾಟೀಲ್,ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕ ಪಂಚಾಯತ್ ಇಓ ದುಂಡೇಶ್ ತುರಾದಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.