ಅಭಿವೃದ್ದಿ ಯೋಜನೆಗಳಿಗೆ ಹೆಚ್ಚಿನ ಒತ್ತು: ಬಾಯಕ್ಕ ಮೇಟಿ

ಬಾಗಲಕೋಟೆ29: ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೆಚ್ಚಿನ ಪ್ರಗತಿಗೆ ಶ್ರಮಿಸುವುದಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.

ಜಿ.ಪಂ ಅಧ್ಯಕ್ಷರ ಕಚೇರಿಯಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಯಲ್ಲಿ ಈ ವಿಷಯ ತಿಳಿಸಿದ ಅವರು ಜಿಲ್ಲೆಯಲ್ಲಿ ಸತತ ಬರಗಾಲ ಆವರಿಸುತ್ತಿದ್ದು, ಜಿಲ್ಲೆಯ ಜನತೆಗೆ ಕುಡಿಯುವ ನೀರು, ಶೌಚಾಲಯ, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಕೆಲಸವನ್ನು ನೀಡಿ ಗುಳೆ ಹೋಗದಂತೆ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಈ ಕುರಿತು ಅಧಿಕಾರಿಗಲ ತುತರ್ು ಸಭೆ ನಡೆಸುವುದಾಗಿ ತಿಳಿಸಿದರು.

ಪ್ರಸಕ್ತ ಸಾಲಿನಿಂದ ಜಿಲ್ಲೆಯಲ್ಲಿ 24 ಇಂಗ್ಲೀಷ ಮೆಡಿಯಂ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಪಾಲಕರು ಖಾಸಗಿ ಶಾಲೆಗಳಿಗೆ ಮೊರೆ ಹೋಗದೇ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ತಿಳಿಸಿದರು. ಕನ್ನಡ ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲೀಷ ವಿಷಯ ಭೋದನೆಗಾಗಿ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದ ಅವರು ಜಿಲ್ಲೆಯಲ್ಲಾಗುವ ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೇ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಲಾಗುವುದು. ಅಂಗನವಾಡಿ, ವಸತಿ ನಿಲಯ ಹಾಗೂ ಆಸ್ಪತ್ರೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದರು. 

ಈ ಹಿಂದೆ ಜಿ.ಪಂ ಸದಸ್ಯರಾಗಿದ್ದಾಗ ವಿವಿಧ ಅಭಿವೃದ್ದಿ ಕೆಲಸಗಳಿಗಾಗಿ ಆಯಾ ಇಲಾಖೆಗೆ ಸಂಬಂಧಪಟ್ಟ ವಿಷಯದ ಬಗ್ಗೆ ಚಚರ್ಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಲು ಹೋದಾಗ ಯಾವುದೇ ಕಾರಣಗಳಿಂದ ಕಚೇರಿಯಲ್ಲಿ ಲಭ್ಯವಾಗುತ್ತಿರಲಿಲ್ಲ. ವಾರದಲ್ಲಿ ಎರಡು ಭಾರಿ ಕಚೇರಿಗೆ ಭೇಟಿ ತೆರಳಿದರು ಸಭೆ, ಕಾರ್ಯಕ್ರಮಗಳಿಗೆ ಹೋಗಿರುವುದಾಗಿ ತಿಳಿಸುತ್ತಿದ್ದರು. ಇದರಿಂದ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸಿದಗಿದ್ದರೆ, ಸಾಮಾನ್ಯ ಜನರ ಗತಿ ಎನು ಎಂಬ ತಿಳಿದು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಇದನ್ನು ಸರಿಪಡಿಸಿಕೊಳ್ಳಲು ತಿಳಿಸಿದರು ಸಾಧ್ಯವಾಗಲಿಲ್ಲ. ಸಾರ್ವಜನಿಕರು ಯಾವುದೇ ಕೆಲಸಗಳಿಗಾಗಿ ದೂರ ದೂರದಿಂದ ವಿವಿಧ ಇಲಾಖೆಗಳ ಕಚೇರಿ ಕೆಲಸದ ನಿಮಿತ್ಯ ಬಂದಾಗ ಅಧಿಕಾರಿಗಳೇ ಸಿಗದೇ ಹೋದರೆ ಅವರ ಕೆಲಸಗಳು ಆಗುವುದು ಯಾವಾಗ ಎಂಬುದನ್ನು ತಿಳಿದು ಪ್ರತಯೊಬ್ಬ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿ.ಪಂ ವ್ಯಾಪ್ತಿಗೆ ಒಳಪಡುವ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಕಚೇರಿಯಲ್ಲಿ ಇರತಕ್ಕದ್ದೆಂದು ಆದೇಶಿಸುವುದಾಗಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯದಿಂದ ಬರ ಅಧ್ಯಯನಕ್ಕೆ ಬಂದಾಗ, ಸಭೆ, ಸಮಾರಂಭ ಹಾಗೂ ವಿಡಿಯೋ ಕಾನ್ಪರೇನ್ಸ ಇದ್ದಾಗ ಅಧಿಕಾರಿಗಳು ತಮ್ಮ ವ್ಯಯಕ್ತಿಕ ಕೆಲಸಗಳಿದ್ದಾಗ ಜಿ.ಪಂ ಸಿಇಓ ಹಾಗೂ ತಮ್ಮ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ತಮ್ಮನ್ನು ಭೇಟಿ ಮಾಡಲು ಸಮಯವನ್ನು ನಿಗದಿಪಡಿಸಲಾಗುವುದು. ಅನಾವಶ್ಯಕವಾಗಿ ಕಾಯದೇ ತಮಗೆ ತಿಳಿಸಿದ ಭೇಟಿ ಸಮಯದಲ್ಲಿ ತಮ್ಮನ್ನು ಭೇಟಿಯಾಗಬಹುದಾಗಿದೆ ಎಂದು ತಿಳಿಸಿದರು.