ಲೋಕ ಅಧಾಲತನಲ್ಲಿ ಹೆಚ್ಚು ಪ್ರಕರಣ ಇತ್ಯರ್ಥ

More cases settled in Lok Adhalat

ಲೋಕ ಅಧಾಲತನಲ್ಲಿ ಹೆಚ್ಚು ಪ್ರಕರಣ ಇತ್ಯರ್ಥ 

ಶಿಗ್ಗಾವಿ : ಪಟ್ಟಣದ ಜೆ.ಎಂ.ಎಫ್‌.ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಹಿರಿಯ ದಿವಾಣಿ ನ್ಯಾಯದೀಶ ಸುನೀಲ ತಳವಾರ ಅವರು ನ್ಯಾಯಾಲಯದಲ್ಲಿ ಬಾಕಿ ಇರುವ 218 ಪ್ರಕರಣಗಳ ಪೈಕಿ 198 ಪ್ರಕರಣಗಳ ವ್ಯಾಜ್ಯ ಪೂರ್ವ 1805 ಪ್ರಕರಣಗಳ ಪೈಕಿ 1514 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಿದರು.     

ಅದೇ ತರನಾಗಿ ದಿವಾಣಿ ನ್ಯಾಯದೀಶೆ ಅಶ್ವಿನಿ ಚಂದ್ರಕಾಂತ ಅವರ ನ್ಯಾಯಾಲಯದಲ್ಲಿ ಬಾಕಿ ಇರುವ 466 ಪ್ರಕರಣಗಳಲ್ಲಿ 451 ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ 1471 ಪ್ರಕರಣಗಳಲ್ಲಿ 1234 ಪ್ರಕರಣಗಳು ರಾಜಿ ಸಂಧಾನದೊಂದಿಗೆ ಇತ್ಯರ್ಥ ಗೊಂಡವು. ಅಧಾಲತನಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರು ಹಾಗೂ ಹಿರಿಯ ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.