ಕೋಟಿ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ಶಾಲೆ ಶೀಘ್ರ ಆರಂಭ : ಜೆ.ಎನ್‌.ಗಣೇಶ್

Morarji Desai School to start soon at a cost of crores: J.N. Ganesh

ಕೋಟಿ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ಶಾಲೆ ಶೀಘ್ರ ಆರಂಭ : ಜೆ.ಎನ್‌.ಗಣೇಶ್  

ಕಂಪ್ಲಿ 26: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸೇರಿದಂತೆ ರಾಜ್ಯದ ಎಲ್ಲಾ ಕಾರ್ಮಿಕರ ಸಮಗ್ರವಾದ ಅಭಿವೃದ್ಧಿಗಾಗಿ ಕಾಂಗ್ರೇಸ್ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆಂದು ಶಾಸಕ ಜೆ.ಎನ್‌.ಗಣೇಶ್ ತಿಳಿಸಿದರು. 

 ಅವರು ಬುಧವಾರ ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು, ಕಾರ್ಮಿಕ ಅಧಿಕಾರಿಗಳ ಕಚೇರಿ ವಿಜಯನಗರ ಉಪವಿಭಾಗ ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಏರಿ​‍್ಡಸಿದ್ದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಟೂಲ್‌ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ,ಕಾರ್ಮಿಕರಿಗೆ ಟೂಲ್ ಕಿಟ್‌ಗಳನ್ನು ವಿತರಿಸಿ ಮಾತನಾಡಿ ರಾಜ್ಯದ ಕಾರ್ಮಿಕರಿಗಾಗಿ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕರ ಮಕ್ಕಳಿಗಾಗಿ ಮುರಾರ್ಜಿ ದೇಸಾಯಿ ರಾಜ್ಯಾದ್ಯಂತ ಆರಂಭಿಸಲಿದ್ದು, ಕಂಪ್ಲಿಯಲ್ಲಿ 44 ಕೋಟಿ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ಶಾಲೆಯನ್ನು ಆರಂಭಿಸಲಿದ್ದು, ಇದಕ್ಕಾಗಿ 5 ಎಕರೆ ಜಮೀನನ್ನು ಮೀಸಲಿಡಲಾಗಿದೆ.  

ಕಂಪ್ಲಿ ಮತ್ತು ಕುರುಗೋಡು ತಾಲ್ಲೂಕುಗಳಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ತಲಾ 5 ಕೋಟಿ ರೂಗಳು ಮಂಜೂರಾಗಿದ್ದು, ನಿವೇಶನಕ್ಕಾಗಿ ತಹಸಿಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರ್ಮಿಕ ಇಲಾಖೆಯಿಂದ ವಸತಿ ರಹಿತ ಕಾರ್ಮಿಕರಿಗಾಗಿ 3 ಸಾವಿರ ಮನೆಗಳು ಮಂಜೂರಾಗಿದ್ದು, ಈಗಾಗಲೇ 1500 ಅರ್ಜಿಗಳನ್ನು ಸ್ವೀಕರಿಸಿದ್ದು, ಇನ್ನು 1500 ಜನ ಕಾರ್ಮಿಕರು ಮನೆಗಳಿಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಪ್ರತಿ ಮನೆಯನ್ನು 7 ಲಕ್ಷರೂಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.  ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕಾಧೀಕಾರಿ ಸೂರ​‍್ಪ ಡೊಬ್ಬರಮತ್ತೂರು ಮಾತನಾಡಿ ಕಂಪ್ಲಿ ತಾಲ್ಲೂಕಿನಲ್ಲಿ 8172 ನೋಂದಾಯಿತ ಕಾರ್ಮಿಕರಿದ್ದು, ಇದರಲ್ಲಿ 210 ಕಾರ್ಮಿಕರಿಗೆ ವಿವಿಧ ವಿಭಾಗಳ ಕಾರ್ಮಿಕರಿಗೆ ಅವರ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿ ಎಂದು ಟೂಲ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದರಲ್ಲದೆ, ಇದರಲ್ಲಿ 150 ಮೇಸ್ತ್ರಿಗಳಿಗೆ, 15 ಎಲೆಕ್ಟ್ರಾನಿಕ್ ಕಾರ್ಮಿಕರಿಗೆ, 30 ವೆಲ್ಡ್‌ರುಗಳು ಹಾಗೂ ಇತರೆ 15 ಜನ ಕಾರ್ಮಿಕರು ಸೇರಿದಂತೆ 210 ಕಾರ್ಮಿಕರಿಗೆ ಟೂಲ್‌ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ವಿವರಿಸಿದರು. 

 ಕಾರ್ಯಕ್ರಮದಲ್ಲಿ ಹೊಸಪೇಟೆ ಕಂಪ್ಲಿ ಕಾರ್ಮಿಕ ನೀರೀಕ್ಷಕರಾದ ಶಿವಶಂಕರ್ ತಳವಾರ್, ಬಳ್ಳಾರಿ ಜಿಲ್ಲಾ ಯೋಜನಾಧಿಕಾರಿಗಳಾದ ಮೌನೇಶ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್,ಪುರಸಭೆ ಅಧ್ಯಕ್ಷರಾದ ಬಿ.ಪ್ರಸಾದ್, ಸ್ಥಾಯಿ ಸಮಿತಿ ಛೇರಮನ್‌ರಾದ ಎಂ.ಉಸ್ಮಾನ್, ಸದಸ್ಯರಾದ ಸಿ.ಆರ್‌.ಹನುಮಂತ, ನಾಮನಿರ್ದೇಶನ ಸದಸ್ಯರಾದ ಡಿ.ಮೌನೇಶ್, ಗದ್ಗಿ ವಿರೂಪಾಕ್ಷಿ,ಮುಖಂಡರಾದ ಕಿಶೋರ್, ಬಿ.ಸಿದ್ದಪ್ಪ, ರಾಘವೇಂದ್ರ, ಸತ್ಯಣ್ಣ, ಸುಧಾಕರ್ ಸೇರದಂತೆ ಜನಪ್ರತಿನಿಧಿಗಳು, ಮುಖಂಡರು, ನೂರಾರು ಕಾರ್ಮಿಕರು ಭಾಗವಹಿಸಿದ್ದರು.