ಮೈಕ್ರೋ ಪೈನಾನ್ಸ್‌ಗೆ ಮೂಗದಾರ: ರಾಜ್ಯ ಸರಕಾರ ಗಣರಾಜ್ಯೋತ್ಸಕ್ಕೆ ಜನತೆಗೆ ನೀಡಿದ ಬಹುದೊಡ್ಡ ಕೊಡುಗೆ- ರವೀಂದ್ರಗೌಡ ಎಫ್. ಪಾಟೀಲ
ರಾಣೇಬೆನ್ನೂರು27:ರಾಜ್ಯದಲ್ಲಿ ನೊಂದವರ ಬಿಸಿಯುಸಿರಿಗೆ ಕಾರಣವಾಗಿದ್ದ ಮೈಕ್ರೋ ಪೈನಾನ್ಸ್‌ಗಳಿಗೆ ಮೂಗುದಾರ ಹಾಕಿ ತೊಂದರೆಗೆ ಸಿಲಿಕಿ ಬೀದಿಗೆ ಬಿದ್ದರಾಜ್ಯದ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಬದುಕನ್ನ “ಬದುಕಿದೆಯಾ ಬಡಜೀವಿ“ ಎನ್ನುತ್ತಾ ನಿಟ್ಟಿಸಿರು ಬಿಡುವಂತೆಜನಪರ ಕಾಳಜಿ ತೋರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಪೈನಾನ್ಸ್‌ನವರ ದಬ್ಬಾಳಿಕೆ ಅಟ್ಟಹಾಸಗಳನ್ನು ಆತ್ಮಹತ್ಯೆಯ ಪ್ರಕರಣಗಳನ್ನು ಸೆಳೆಯುವಂಥ ವರದಿ ನೀಡಿ ಸರಕಾರ ಎಚ್ಚೆತ್ತುಕೊಳ್ಳುವಂತೆ ಮಾಡಿದ ಮಾಧ್ಯಮದವರಿಗೆರಾಜ್ಯದ ಲಕ್ಷಾಂತರ ನೊಂದ ಕುಟುಂಬಗಳ ಪರವಾಗಿರೈತ ಮುಖಂಡ ಪ್ರಕರಣದದೂರುದಾರರಲ್ಲಿಒಬ್ಬರಾದರವೀಂದ್ರೌಡಎಫ್. ಪಾಟೀಲ ಧನ್ಯವಾದ ತಿಳಿಸಿದ್ದಾರೆ.
ಅವರುತುರ್ತುಗಿ ಈ ಮೇಲ್ ಮುಖಾಂತರ ನೊಂದವರ ಪರವಾಗಿ ಮನವಿ ಸಲ್ಲಿಸಿ ಮಾತನಾಡಿದಅವರು ಸರಕಾರ 2 ವರ್ಷದ ಹಿಂದೆಯೇ ಈ ತೀರ್ಮಾನತೆಗೆದುಕೊಂಡಿದ್ದರೆಅನೇಕ ಬಡವರು ಬದುಕುಳಿಯುತ್ತಿದ್ದರು ಜೊತೆಗೆಯಾವ ಕುಟುಂಬಗಳು ಬೀದಿಗೆ ಬೀಳುತ್ತಿರಲಿಲ್ಲ, ಪೈನಾನ್ಸ್‌ನವರಅಟ್ಟಹಾಸ ಈ ರೀತಿ ಮಿತಿ ಮೀರುತ್ತಿರಲಿಲ್ಲ ಎಂದರು.
ಆಯಾಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತುರ್ತಾಗಿ ಈ ಬಗ್ಗೆ ಸಭೆಗಳನ್ನು ನಡೆಸಿ ನೋಂದವರಿಗೆ ಆತ್ಮಸ್ಥೈರ್ಯ ತುಂಬುವಂತ ಕೆಲಸ ಮಾಡುವಂತಾಗಬೇಕು. ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಹೆಚ್ಚಿನಅಧಿಕಾರ ನೀಡಿ ಸಹಾಯವಾಣಿ ವ್ಯವಸ್ಥೆ ಮಾಡಬೇಕೆಂದುರವೀಂದ್ರಗೌಡಎಫ್.ಪಾಟೀಲರು ಈ ದಿವಸ ವಿರೋಧ ಪಕ್ಷದ ನಾಯಕರುರಾಜ್ಯದಲ್ಲಿ ಕಾನೂನು ಹದಗೆಟ್ಟಿದೆಎಂದು ಮಾತನಾಡುತ್ತಿದ್ದಾರೆ.ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆಯೇಇಲ್ಲಾ, ಏಕೆಂದರೆ ಪೈನಾನ್ಸನವರ ದಬ್ಬಾಳಿಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆದು ಸಾವಿರಾರು ಕುಟುಂಗಳು ಬೀದಿಗೆ ಬಿದ್ದಿದ್ದರೂ ಯಾವೊಬ್ಬ ನಾಯಕರು ಈ ನೊಂದವರ ಪರವಾಗಿಒಮ್ಮೆಯೂಧ್ವನಿ ಎತ್ತಲಿಲ್ಲ, ಅವರ ನೆರವಿಗೆದಾವಿಸಲಿಲ್ಲ, ಹೀಗಾಗಿ ಬಡವರ ಬಗ್ಗೆ ಸರಕಾರದ ಬಗ್ಗೆ ಮಾತನಾಡುವ ನೈತಿಕತೆಯನ್ನುಅವರು ಕಳೆದುಕೊಂಡಿದ್ದಾರೆ ಎಂದರು. ನಾಳೆಯ ಪ್ರಜಾರಾಜ್ಯೋತ್ಸವದಂದು ರಾಜ್ಯದ ಲಕ್ಷಾಂತರ ಜನರಿಗೆ ರಾಜ್ಯ ಸರಕಾರಕೊಟ್ಟ ಬಹುದೊಡ್ಡ ಕೊಡುಗೆ ಇದಾಗಿದೆ ಎಂದರಲ್ಲದೆ ರಾಜ್ಯ ಸರಕಾರ ಸುಗ್ರಿವಾಜ್ಞೆ ಮೂಲಕ ಕಠಿಣ ಕಾನೂನು ಜಾರಿಗೆತಂದು ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡವರಿಗೆ ಪರಿಹಾರ ಸಿಗುವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದಿದ್ದಾರೆ.
ಈ ಹಿಂದೆಎಸ್.ಎಂ. ಕೃಷ್ಣಾ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಮಳೆ ಬಾರದೆಭೀಕರ ಬರಗಾಲ ಆವರಿಸಿದಾಗ ದಲಾಲರು, ಪೈನ್ಸಾನವರು, ಗಿರವಿ ಅಂಗಡಿಯವರು, ಮೀಟರ್ ಬಡ್ಡಿದಂದೆಯವರುರೈತರ ಮೇಲೆ ಇದೇರೀತಿ ಪ್ರಹಾರ ಮಾಡುತ್ತಾ, ರೈತರ ಜಮೀನುಗಳನ್ನು ಬಲತ್ಕಾದಿಂದ ಬರೆಯಿಸಿಕೊಳ್ಳುವುದು, ಪೇಟೆಗೆ ಬಂದಾಗ ರೈತರನ್ನುಅಂಗಡಿಗೆ ಕರೆದೊಯ್ದು ಕೂಡಿ ಹಾಕುವಂಥ ಕೃತ್ಯಗಳನ್ನು ನಡೆಸುತ್ತಿದ್ದರು.ತಕ್ಷಣವೇ ಸರಕಾರ ಸುಗ್ರೀವಾಜ್ಞೆ ಮೂಲಕ ಸಾಲ ವಸೂಲಾತಿಗೆ ಕಡಿವಾಣ ಹಾಕಿ ದಂದೆ ಕೋರರಿಗೆ ಕಠಿಣ ಕ್ರಮ ಜರುಗಿಸಿ ರೈತರನ್ನು, ಬಡವರನ್ನು ರಕ್ಷಿಸಿದ್ದನ್ನು ಇಲ್ಲಿ ಸ್ಮರಸಬಹುದಾಗಿದೆಎಂದ ಪಾಟೀಲರು ಮತ್ತೆ ಅದೇ ಅಸರಕಾರ ಅಧಿಕಾರದಲ್ಲಿರುವುದರಿಂದ ಬಡವರ ಪರವಾಗಿ ನಿರ್ಧಾರಕೈಗೊಂಡಿರುವುದು ಸಂತಸತಂದಿದೆ ಎಂದರು.