ಬೆಳಗಾವಿ 5- ಮಹಾಂತೇಶ ನಗರದಲ್ಲಿರುವ ಮಹಾಂತಭವನದಲ್ಲಿ ಇದೇ ದಿ. 8 ಗುರುವಾರದಂದು ಸಾ. 5-30 ಕ್ಕೆ ಮಾಸಿಕ ಅನುಭಾವ ಶರಣ ಸತ್ಸಂಗ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆ(ರಿ) ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಬೆಳಗಾವಿ ಇವರು ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಡಾ ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದರ್ಯ ಮಠ ಗದಗ ಹಾಗೂ ರುದ್ರಾಕ್ಷಿಮಠ ನಾಗನೂರ ಬೆಳಗಾವಿ ಹಾಗೂ ಇವರು ವಹಿಸಲಿದ್ದಾರೆ. 'ಚನ್ನಬಸವಣ್ಣನವರ ವಚನ ನಿರ್ವಚನ' ಎಂಬ ವಿಷಯ ಕುರಿತು ಹಾರೂಗೇರಿ ಶರಣವಾಯಿನಿಯ ಆಯ್. ಆರ್. ಮಠಪತಿಯವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಷಟ್ಸ್ಥಳ ಧ್ವಜಾರೋಹಣವನ್ನು ಪ್ರೊ. ಸಿದ್ದನಗೌಡ ಚೌಬಾರಿ ದಂಪತಿಗಳು ನಡೆಸಿಕೊಡಲಿದ್ದು ಮುಖ್ಯ ಅತಿಥಗಳಾಗಿ ಎಸ್. ಎಲ್. ಬಾಡಗೆ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಬಸವತತ್ವ ಪ್ರಚಾರ ಭಿತ್ತಿಪತ್ರಗಳ ಬಿಡುಗಡೆ ನಡೆಯಲಿದೆ. ಚೆನ್ನಪ್ಪ ನರಸಣ್ಣವರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಎಸ್. ಜಿ. ಸಿದ್ನಾಳ ಸ್ವಾಗತಿಸಲಿದ್ದಾರೆ. ಈ ಕಾರ್ಯಕ್ರಮದ ಸದುಪಯೋಗವನ್ನು ಹೆಚ್ಚಿನ ಭಕ್ತರು ಪಡೆಯಬೇಕೆಂದು ಜಾಗತಿಕ ಲಿಂಗಾಯತ ಮಹಾಸಭೆ(ರಿ) ಹಾಗೂ ರಾಷ್ಟ್ರ್ಯಿಬಸಸೇನಾ ಜಿಲ್ಲ ಘಟಕಗಳ ಪರವಾಗಿ ಬೆಳಗಾವಿ ನಗರ ಘಟಕ ಕಾರ್ಯದಶರ್ಿ ಅಶೋಕ ಮಳಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.