ಪ್ಯಾರಿಸ್, ಏ 18 (ಕ್ಸಿನುವಾ) ಸ್ಪೇನ್ ಟೆನಿಸ್ ತಾರೆ ರಾಫೆಲ್ ನಡಾಲ್ ಅವರು ರೊಬರ್ಟ್ ಬೌಟಿಸ್ತಾ ಅವರ ವಿರುದ್ಧ 6-1, 6-1 ಅಂತರದಲ್ಲಿ ನೇರ ಸೆಟ್ಗಳಿಂದ ಜಯ ಸಾಧಿಸಿ ಮೊಂಟ್-ಕಾರ್ಲೊ ಮಾಸ್ಟರ್ ಅಂತಿಮ 16 ರ ಘಟ್ಟಕ್ಕೆ ತಲುಪಿದ್ದಾರೆ.
11 ಬಾರಿ ವಿಜೇತ ರಾಫೆಲ್ ನಡಾಲ್, 73 ಪಂದ್ಯಗಳಲ್ಲಿ 69ನೇ ಜಯ ಹಾಗೂ ಮೊಂಟ್-ಕಾರ್ಲೊ ಮಾಸ್ಟರ್ ಟೂರ್ನಿಯಲ್ಲಿ 16ನೇ ವಿಜಯ ಇದಾಗಿದೆ. 2015ರಲ್ಲಿ ಕೊನೆಯ ಬಾರಿ ಸಬರ್ಿಯಾ ತಾರೆ ನೊವಾಕ್ ಜೊಕೊವಿಚ್ ಅವರನ್ನು ಈ ಟೂರ್ನಿ ಸೆಮಿಫೈನಲ್ನಲ್ಲಿ ಮಣಿಸಿದ್ದರು.
"ಮೊಂಟ್-ಕಾರ್ಲೊ ಮಾಸ್ಟರ್ ಟೂರ್ನಿಎಲ್ಲ ಆಟಗಾರರ ಪಾಲಿಗೆ ವಿಶೇಷವಾಗಿದ್ದು, ನನ್ನ ಪಾಲಿಗೆ ಈ ಟೂರ್ನಿಯು ಇನ್ನಷ್ಟು ವಿಶೇಷವಾಗಿದೆ. ಇಲ್ಲಿ ಎಲ್ಲ ರೀತಿಯ ಅನುಭವವಾಗಿದೆ. ಇಲ್ಲಿ ಆಡುವ ಅವಕಾಶ ಸಿಕ್ಕಾಗಲೆಲ್ಲ ಹಳೆಯ ನೆನಪುಗಳು ಹೆಚ್ಚು ಮರುಕಳಿಸುತ್ತವೆ. ಹಾಗಾಗಿ, ಈ ಟೂನರ್ಿಯಲ್ಲಿ ಹೆಚ್ಚು ಖುಷಿಯಾಗಿ ಆಡಲು ಪ್ರಯತ್ನಿಸುತ್ತೇನೆ." ಎಂದು ನಡಾಲ್ ಹೇಳಿದರು.
ಮತ್ತೊಂದು ಪುರುಷರ ಸಿಂಗಲ್ಸ್ ಹಣಾಹಣಿಯಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರು ಫೆಲಿಕ್ಸ್ ಆಗರ್ ಅವರ ವಿರುದ್ಧ 6-1, 6-4 ಅಂತರದಲ್ಲಿ ನೇರ ಸೆಟ್ಗಳಿಂದ ಜಯ ಸಾಧಿಸಿ ಅಂತಿಮ 16ರ ಹಂತಕ್ಕೆ ತಲುಪಿದ್ದಾರೆ.
ಮೊಂಟ್-ಕಾರ್ಲೊ ಮಾಸ್ಟರ್ ಯಲ್ಲಿ ಜ್ವೆರೆವ್ ಆಡಿರುವ 10 ಪಂದ್ಯಗಳಲ್ಲಿ ಇದು 7ನೇ ಜಯವಾಗಿದೆ. ಈ ಪಂದ್ಯದ ಗೆಲುವಿನೊಂದಿಗೆ ಜರ್ಮನಿ ಆಟಗಾರ ಡೊಮಿನಿಚ್ ಥೀಮ್ ಹಾಗೂ ಸ್ಟೆಫಾನೋಸ್ ಸಿಟ್ಸಿಪಸ್ ಅವರೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಮತ್ತೊಂದು ಪಂದ್ಯದಲ್ಲಿ 5ನೇ ಶ್ರೇಯಾಂಕದ ಜಪಾನ್ನ ಕೀ ನಿಶಿಕೋರಿ ಅವರು ಫ್ರಾನ್ಸ್ನ ಫೆರರ್ೆ-ಹ್ಯೂಗಸ್ ಹರ್ಬಟರ್್ ಅವರ ವಿರುದ್ಧ 5-7, 4-6 ಅಂತರದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರ ನಡೆದರು.