ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪುವಂತೆ ನಿಗಾವಹಿಸಿ: ತಾಪಂ ಗುರಿಕಾರ

ಲೋಕದರ್ಶನ ವರದಿ

ಶಿರಹಟ್ಟಿ 05: ಪ್ರಸ್ತುತ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಎಲ್ಲ ಇಲಾಖೆಗಳ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯದ ಕಾರಣ ಸರ್ಕಾರವು  ಗ್ರಾಮೀಣ ಪ್ರದೇಶದಲ್ಲಿನ ಕಡುಬಡವರೂ ಸಹ ಎಲ್ಲ ಯೋಜನೆಗಳನ್ನು ಸದ್ಭಳಕೆ ಮಾಡಬೇಕೆಂಬ ಕನಸು ಸಾಕಾರಗೊಳ್ಳದೇ ಹಾಗೇಯೇ ಉಳಿಯುತ್ತಿದ್ದು ವಿಷಾದಕರ ಸಂಗತಿಯಾಗಿದ್ದು, ಇನ್ನು ಮುಂದೆ ಎಲ್ಲ ಯೋಜನೆಗಳು ಸದ್ಬಳಕೆಯಾಗುವಂತೆ ಗ್ರಾಮೀಣ ಮಟ್ಟದಲ್ಲಿ ಕಾರ್ಯಗತವಾಗುವಂತೆ ಕಾರ್ಯ ನಿರ್ವಹಿಸಿ ಎಂದು ತಾಪಂ ಈಓ. ಆರ್ ವೈ ಗುರಿಕಾರ ಕರೆ ನೀಡಿದರು.

ಅವರು ತಾಲೂಕ ಪಂಚಾಯತದ ಸಾಮಥ್ರ್ಯ ಸೌಧದಲ್ಲಿ ಸುಶೀಲವ್ವ ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ  ಕೆಡಿಪಿ ಸಭೆಯಲ್ಲಿ ಮಾತನಾಡುತ್ತಾ, ಎಲ್ಲ ಇಲಾಖೆಯ ಅಧಿಕಾರಿಗಳ ಕಾರ್ಯ ಬರೀ ದಾಖಲೆಗಳಿಗೆ ಮಾತ್ರ ಸೀಮಿತವಾಗಿದ್ದು, ಅವನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ಹಾಗೂ ಪ್ರತೀ ರೈತರ ಮನೆ ಬಾಗಿಲಿಗೆ ತಲುಪಿಸಿ ಯೋಜನೆಗಳನ್ನು ತಲುಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.

ಈ ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿ ಈಓ ಗುರಿಕಾರ ಈವೆರೆಗೆ ತಾಲೂಕಾದ್ಯಂತ ಒಟ್ಟು ಎಷ್ಟು ಸಸಿಗಳನ್ನು ನೆಡಲಾಗಿದೆ ಎಂದು ವಿವರಗಳನ್ನು ಕೇಳಿದಾಗ ಅಧಿಕಾರಿಗಳು ಸಭೆಯಲ್ಲಿ ವಿವರ ನೀಡುತ್ತಾ, ಈವರೆಗೆ ಒಟ್ಟು 55 ಸಾವಿರ ಸಸಿಗಳನ್ನು ನೀಡಲಾಗಿದ್ದು, ಇನ್ನೂ ಸಸಿಗಳಿಗೆ ಬೇಡಿಕೆ ಇದೆ ಎಂದು ಹೇಳಿದರು. ಆಗ ಗುರಿಕಾರ ಅವರು ಅಧಿಕಾರಿಗಳಿಗೆ, ಈವರೆಗೆ ಒಟ್ಟು ಶಾಲಾ ಆವರಣ, ಬಯಲು ಪ್ರದೇಶ, ರಸ್ತೆಯ ಅಕ್ಕ-ಪಕ್ಕ, ಅರಣ್ಯ ಪ್ರದೇಶಗಳಲ್ಲಿ ನೆಡಲಾದ ಒಟ್ಟು ಸಸಿಗಳ ಬಗ್ಗೆ ವಿವರಗಳನ್ನು ನೀಡಿ ಎಂದಾಗ ಅಧಿಕಾರಿಗಳಲ್ಲಿ ನಿಖರವಾದ ಉತ್ತರ ಸಿಗದೇ ಇದ್ದಾಗ, ಬರುವ 3-4 ದಿನಗಳಲ್ಲಿ ವಿವರ ನೀಡಿ ಎಂದು ಹೇಳಿದರು. 

ರೇಷ್ಮೆ ಇಲಾಖೆಯ ತಾಲೂಕಾ ವಿಸ್ತರಣಾಧಿಕಾರಿ ಎಂ ಎಸ್ ಸವಣೂರ ಸಭೆಯಲ್ಲಿ ವಿವರಿಸುತ್ತಾ, ನಾನು ಹೊಸದಾಗಿ ಬಂದಿದ್ದು, ಸಧ್ಯ ಕಲಘಟಗಿ ಹಾಗೂ ಶಿರಹಟ್ಟಿ ಮಾರುಕಟ್ಟೆಯನ್ನು ಒಬ್ಬನೇ ನೋಡಿಕೊಳ್ಳಬೇಕಾಗಿದ್ದು, ಶಿರಹಟ್ಟಿ ಅಲ್ಲಿ 3 ದಿವಸ ಹಾಗೂ ಕಲಘಟಗಿ ಅಲ್ಲಿ 3 ದಿವಸ ಕಾರ್ಯ ನಿರ್ವಹಿಸಬೇಕಾಗಿದ್ದು ಬಹಳ ತೊಂದರೆ ಆಗುತ್ತಿದೆ. ಕಾರಣ ಇಲ್ಲಿ ಸಿಬ್ಬಂದಿಯ ಕೊರತೆಯ ತೊಂದರೆ ಹೆಚ್ಚಿದ್ದು ಎಲ್ಲವನ್ನೂ ನಾನೇ ಮಾಡುವುದು ಬಹಳ ತೊಂದರೆಯ ಕೆಲಸವಾಗಿದ್ದರಿಂದ ಆದಷ್ಟು ಬೇಗನೇ ನಮ್ಮ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೇಮಿಸುವಂತೆ ಅಧಿಕಾರಿಗಳಲ್ಲಿ ಹಾಗು ಜನಪ್ರತಿನಿಧಿಗಳಲ್ಲಿ ಒತ್ತಾಯಿಸಿದರು.

ನಂತರ ಆರೋಗ್ಯ ಇಲಾಖೆಯ ತಾಲೂಕಾ ವೈಧ್ಯಾಧಿಕಾರಿ ಸುಭಾಸ ದಾಯಗೊಂಡ ಹಾಗೂ ಚಂದ್ರು ಲಮಾಣಿ ಆಯುಷ್ಮಾನ ಭಾರತ ಹಾಗೂ ಆರೋಗ್ಯ ಕನರ್ಾಟಕ ಯೋಜನೆಗಳ ಬಗ್ಗೆ ಸವಿವರ ನೀಡಿದರು. ಕುಟುಂಬದ ಪ್ರತೀ ಸದಸ್ಯರು ಬೇರೆ ಬೇರೆಯಾಗಿ ಆಯುಷ್ಮಾನ ಭಾರತ ಯೋಜನೆಯ ಕಾಡರ್ುಗಳನ್ನು ಪಡೆಯಬೇಕು, ಈ ಯೋಜನೆಯು ಸಕರ್ಾರಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಗಳ ವರೆಗೆ ಆರೋಗ್ಯ ವಿಮೆಯನ್ನು ಉಚಿತವಾಗಿ ಪಡೆಯಬಹುದಾಗಿದ್ದು, ಒಂದು ವೇಳೆ ಈ ಯೋಜನೆಯ ಪರವಾನಿಗೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆ ಪಡೆಯಬೇಕಾದಲ್ಲಿ ಸಕರ್ಾರಿ ಆಸ್ಪತ್ರೆಯಿಂದ ಒಂದು ರೆಫರಲ್ ಪತ್ರವನ್ನು ಪಡೆದು ವಿಮೆ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು. ಈ ಯೋಜನೆಯು ಬಿಪಿಎಲ್ ಕಾಡರ್ುದಾರರಿಗೆ ಸಂಪೂರ್ಣ ಉಚಿತವಾಗಿದ್ದು, ಏಪಿಎಲ್ ಕುಟುಂಬದವರು ಈ ಯೋಜನೆ ಪಡೆಯಬೇಕಾದರೆ ಕನಿಷ್ಠ 30% ಹಣವನ್ನು ಸಕರ್ಾರಕ್ಕೆ ಭರಿಸಬೇಕೆಂದು ಹೇಳಿದರು. ಈಓ ಗುರಿಕಾರ ಅವರು ಈ ಎಲ್ಲ ಯೋಜನೆಗಳು ಸಂಪೂರ್ಣವಾಗಿ ಕಾರ್ಯಗತವಾಗಲು ಕಾಲಕಾಲಕ್ಕೆ ಸಭೆ ನಡೆಸಿ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ತಿಳಿಸಿದರು.

ಈ ಸಭೆಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚೀಗೇರಿ, ತಾಪಂ ಉಪಾದ್ಯಕ್ಷೆ ಪವಿತ್ರಾ ಶಂಕಿನದಾಸರ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.