ಹಣ ಲೂಟಿ: ಮುಖ್ಯ ಕಛೇರಿ ಎದುರು ಪ್ರತಿಭಟನೆ

ವಿಜಯಪುರ 04:ರೋಣಿಹಾಳ ಗ್ರಾಮದ ಸಿಂಡಿಕೇಟ್ ಬ್ಯಾಂಕಿನ ಸಿಬ್ಬಂದಿಯಿಂದ ಬಡರೈತ, ಮಹಿಳೆಯರ, ಮುದ್ದತಿ, ಠೇವಣಿ ಹಣ ಲೂಟಿ ಮಾಡಿದ ಪ್ರಯುಕ್ತ ರೋಣಿಹಾಳ ಗ್ರಮಸ್ಥರು ಹಾಗೂ ಕನರ್ಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಿಂದ ಸಿಂಡಿಕೇಟ್ ಬ್ಯಾಂಕಿನ ಮುಖ್ಯ ಕಛೇರಿ ಎದುರು ಪ್ರತಿಭಟನೆ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಂ.ಸಿ. ಮುಲ್ಲಾ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕಿನ ಮಾನ್ಯತೆ ಪಡೆದಿರುವ ಬ್ಯಾಂಕು ಸಿಂಡಿಕೇಟ್. ಇಲ್ಲಿ ಈ ರೀತಿ ಗ್ರಾಹಕರ ಹಣವನ್ನು ಲೂಟಿ ಮಾಡಿ ಅವರಿಗೆ ವಂಚಿಸಿರುವುದು ಖಂಡನೀಯ. ಗ್ರಾಮಸ್ಥರಲ್ಲಿ ಹೆಚ್ಚಾಗಿ ಬಡ ರೈತರು, ಕೂಲಿಕಾಮರ್ಿಕರು ಮಹಿಳೆಯರು ಕೂಡಿಟ್ಟ ಹಣವನ್ನು ಬ್ಯಾಂಕ ಸಿಬ್ಬಂಧಿಯು ಹಣ ಲಪಟಾಯಿಸಿ ಮೋಸ ಮಾಡಿರುವುದು ಅಕ್ಷಮ್ಯ ಅಪರಾಧ ಸಂಬಂಧಪಟ್ಟ ಗ್ರಾಹಕರಿಗೆ ತಕ್ಷಣದಿಂದ ಅವರ ಹಣ ವಾಪಸ್ ಮಾಡಲು ಒತ್ತಾಯಿಸಿದರು. ಹಣ ವಾಪಸ್ ನೀಡದಿದ್ದರೆ ಜಿಲ್ಲೆಯಾದ್ಯಂತ ಎಲ್ಲ ಸಿಂಡಿಕೇಟ್ ಬ್ಯಾಂಕಿನ ಶಾಖೆಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. 

ರಾಜ್ಯ ಮಹಿಳಾ ಉಪಾಧ್ಯಕ್ಷ ರೇಷ್ಮಾ ಪಡೇಕನೂರ ಮಾತನಾಡಿ, ಬ್ಯಾಂಕ ಮೋಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಮತ್ತು ಈ ಕುರಿತು ಬ್ಯಾಂಕಿನ ಮೇಲಾಧೀಕಾರಿಗಳ ಗಮನಕ್ಕೆ ತಂದು ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು 15 ದಿವಸಗಳ ಕಲಾವಕಾಶ ನೀಡಿದರು.

ಯುವ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ನಮ್ಮ ಜಿಲ್ಲಯಲ್ಲಿ ಬರ ಆವರಿಸಿದ್ದು, ರೈತಾಪಿ ವರ್ಗ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದೆ ಅಂತಹದರಲ್ಲಿ ವಿಶ್ವಾಸ ಪಾತ್ರ ಬ್ಯಾಂಕವೇ ಗ್ರಾಹಕರಿಗೆ ಮೋಸ ಮಾಡಿದ್ದು ವಿಶ್ವಾಸಘಾತವಾಗಿದೆ. ನಮ್ಮ ಈ ಧರಣಿಯು ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದರು. 

ಈ ಸಂದರ್ಭದಲ್ಲಿ ಮಹಾದೇವ ರಾವಜಿ, ಯಾಕೂಬ ಕೋಪರ್, ದಸ್ತಗೀರ ಸಾಲೋಟಗಿ, ಫಯಾಜ ಕಲಾದಗಿ, ಕಲ್ಲು ಸೊನ್ನದ, ಅನೀಲ ಬಜಂತ್ರಿ, ಮಲ್ಲು ಮಡಿವಾಳರ, ಬಸವರಾಜ ಮಡಿವಾಳರ, ರಾಜು ಹಜೇರಿ,ಸದಾನಂದ ಇಂಡಿ, ಶರಣಪ್ಪ ದಿನ್ನಿ, ಪರಶುರಾಮ ಉಗ್ರಾಣ, ಶಿವಾನಂದ ಬಡಿಗೇರ, ನರೇಂದ್ರ ಬಡಿಗೇರ, ಹಾಜಿಮಲಂಗ ಬಡೇಗರ, ಮಹಿಬೂಬ ಶೇಖ, ಯಾಸೀನ ಬಢೇಗರ, ಬಸವರಾಜ ಬಿ.ಕೆ., ಫೈರೋಜಖಾನ ಸೇರಿದಂತೆ ತಾಲೂಕಾ ಪದಾಧಿಕಾರಿಗಳು ಗರಾಮದ ಘಟಕದ ವೇದಿಕೆ ಕಾರ್ಯಕರ್ತರು ಮೋಸ ಹೋದ ರೈತರು, ಮಹಿಳೆಯರು ಗ್ರಾಹಕರು ಇನ್ನಿತರರು ಉಪಸ್ಥಿತರಿದ್ದರು.