ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿವೆ ಮಠಗಳು: ಪ್ರಭುಶ್ರೀ

Monasteries doing rites: Prabhushree

ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿವೆ ಮಠಗಳು: ಪ್ರಭುಶ್ರೀ 

ಚಿಮ್ಮಡ 29: ಇಂದಿನ ಯುವಕರಿಗೆ ಮಠಗಳು ಉತ್ತಮ ಸಂಸ್ಕಾರ, ತಂದೆ ತಾಯಿಯವರ ಕುರಿತ ಗೌರವಭಾವ ಹಾಗೂ ಗುರುವಿನ ಮಹತ್ವವನ್ನು ತಿಳಿಸಿಕೊಡುವ ಮಹತ್ವದ ಕಾಯಕ ಮಾಡುತ್ತಿವೆ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು. 

ಗ್ರಾಮದ ಸರಕಾರಿ ಪ್ರೌಢಶಾಲೆಯ ಸಭಾ ವೇದಿಕೆಯಲ್ಲಿ 2001-02ಸಾಲಿನ ಚಿಮ್ಮಡ ಸರಕಾರಿ ಪ್ರೌಢಶಾಲೆಯ ಸ್ನೇಹಬಳಗದಿಂದ ರವಿವಾರ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು. ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದ ಶಿಕ್ಷಣದ ಮೌಲ್ಯ ಕುಸಿಯುತಿದ್ದು ಮಕ್ಕಳು ವಿದ್ಯಾರ್ಥಿ ಜೀವನದಲ್ಲಿಯೇ ದುಶ್ಚಟಗಳಿಗೆ ದಾಸರಾಗುತಿದ್ದಾರೆ. ಪಾಲಕ, ಶಿಕ್ಷಕರು ಈ ಕುರಿತು ಗಂಭೀರವಾಗಿ ಯೋಚಿಸುವ ಅವಶ್ಯಕತೆಯಿದ್ದು, ದುಶ್ಚಟಗಳನ್ನು ಮೊಳಕೆಯಲ್ಲಿಯೇ ಚಿವುಟಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ವಾತಾವರಣ ನಿರ್ಮಿಸಬೇಕಾಗಿದೆ ಎಂದರು. 

ನಿವೃತ ದೈಹಿಕ ಶಿಕ್ಷಕರಾದ ಎಂಡಿ ವಾಲಿ, ಕೆ.ಎಂ ವಿಜಾಪೂರ, ಪಿ.ಎಸ್‌. ಸೊರಗಾವಿ, ಬಿ.ಎಸ್‌. ಕಡಕೋಳ, ಎ.ಎ. ಮುಜಾವರ, ಎನ್‌.ಟಿ. ಗುಗ್ಗರಿ, ಎಂ.ಎಂ. ಜಮಾದರ, ಸುರೇಶ ಮರಡಿ ಮಾತನಾಡಿದರು. 

ಉದ್ಯಮಿ ರಾಜು ಬಗನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಸಮಾರಂಭದ ಸಾನಿಧ್ಯವನ್ನು ಶ್ರೀ ಓಂಕಾರ ಮಹಾರಾಜರು ವಹಿಸಿದ್ದರು. ಶಿವಪ್ಪಾ ಬೆಳಗಲಿ, ಪ್ರಕಾಶ ಹಳ್ಳೂರ, ಶಂಕರ ಅಥಣಿ, ಪುಂಡಲಿಕ ಸಗರಿ, ವಿಠ್ಠಲ ವೆಂಕಟ್ಯಾಪೂರ, ಮಹಾಲಿಂಗ ಹಟ್ಟಿ, ಶಂಕರ ಕರಡಿ, ರಾಮಪ್ಪಾ ನೇಸೂರ, ಉಪಸ್ಥಿತರಿದ್ದರು. 

ಇದೇ ಸಂಧರ್ಬದಲ್ಲಿ ವಿದ್ಯೆ ಕಲಿಸಿದ ಗುರುಗಳಿಗೆ ಹಾಗೂ ಪೂಜ್ಯರಿಗೆ ಪುಷ್ಪವೃಷ್ಠಿಯೊಂದಿಗೆ ಸತ್ಕರಿಸಿ ಗೌರವಿಸಲಾಯಿತು ಹಾಗೂ ಅಗಲಿದ ಗುರುವೃಂದಕ್ಕೆ ಹಾಗೂ ಸ್ನೇಹ ಬಳಗಕ್ಕೆ ಮೌನಾಚರಣೆಯ ಮೂಲಕ ಅಶ್ರುದರ​‍್ಣ ಮಾಡಲಾಯಿತು. 

ಕಾರ್ಯಕ್ರಮಕ್ಕೆ ಅವ್ವನಪ್ಪಾ ಮುಗಳಖೋಡ ಸ್ವಾಗತಿಸಿದರು, ಕಾಳಪ್ಪಾ ಬಡಿಗೇರ ನಿರೂಪಿಸಿದರು, ಮಲ್ಲಪ್ಪಾ ಬಿರಾದರಪಾಟೀಲ ವಂದಿಸಿದರು.