ಶಿರಡಿ 19: ಬಡವರಿಗೆ
ಮನೆ ಒದಗಿಸುವುದು ಮತ್ತು ಬಡತನ ನಿಮರ್ೂಲನೆ ಮಾಡುವುದು ಕೇಂದ್ರ ಸಕರ್ಾರದ ಮೊದಲ ಮತ್ತು ಪ್ರಮುಖ ಆದ್ಯತೆಯಾಗಿದೆ
ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಬಡವರಿರಬಹುದು ಅಥವಾ ಮಧ್ಯಮ ವರ್ಗದವರಿರಬಹುದು ಅವರಿಗೆ
ಸ್ವಂತ ಮನೆಗಳನ್ನು ಒದಗಿಸಲು ಕೇಂದ್ರ ಸಕರ್ಾರವು ಕಳೆದ ನಾಲ್ಕು ವರ್ಷಗಳಿಂದ ಗಂಭೀರ ಪ್ರಯತ್ನ ಮಾಡುತ್ತಿದೆ
ಎಂದು ಹೇಳಿದರು.
ಶಿರಡಿಯ ಸಾಯಿ
ಮಂದಿರ ಸಂಕೀರ್ಣದಲ್ಲಿ ಹಲವು ಯೋಜನೆಗಳನ್ನು ಪ್ರಾರಂಭಿಸುವ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಸುಮಾರು 2.5 ಲಕ್ಷ ಫಲಾನುಭವಿಗಳಿಗೆ ಕೀಗಳನ್ನು ಹಸ್ತಾಂತರಿಸಿದರು.
ಈ ಮನೆಗಳು ಅವರ ಕನಸಿನ ಚಿಹ್ನೆಯಾಗಿದೆ, ಬಡತನ ನಿಮರ್ೂಲನೆ
ಮಾಡುವತ್ತ ಕೇಂದ್ರ ಸಕರ್ಾರ ದೊಡ್ಡ ಹೆಜ್ಜೆಯನ್ನು ಇಟ್ಟಿದೆ ಎಂದು ಪ್ರಧಾನಿ ಹೇಳಿದರು. ಇದರಿಂದ ಅವರ
ಜೀವನದಲ್ಲಿ ಸಕರಾತ್ಮಕ ಬದಲಾವಣೆಯಗಿದೆ. ವಿಜಯದಶಮಿಯ ದಿನದ ಸಂದರ್ಭದಲ್ಲಿ ಅವರ ಕನಸುಗಳನ್ನು ಹಿಡೇರಿಸಿದ
ಭಾಗ್ಯ ದೊರಕಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.
ಕಳೆದ ನಾಲ್ಕು
ವರ್ಷಗಳಲ್ಲಿ ಕೇಂದ್ರ ಸಕರ್ಾರವು ಒಂದು ಕೋಟಿ 25 ಲಕ್ಷ ಮನೆಗಳನ್ನು ನಿಮರ್ಿಸಿದೆ, ಅದರೆ ಹಿಂದಿನ ಸಕರ್ಾರ
25 ಲಕ್ಷ ಮನೆಗಳನ್ನು ನಿಮರ್ಿಸಿತ್ತು ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ
ಜೊತೆಗೆ ಕೃಷಿ ಕ್ಷೇತ್ರಕ್ಕೂ ಪ್ರಾಮುಖ್ಯತೆ ನೀಡಲಾಗುವುದು ಎಂದು ಹೇಳಿದರು. ಸಕರ್ಾರವು ರ್ಯೆತರು ಬೆಳೆದ
ಉತ್ಪನ್ನಗಳಿಗೆ ಒಳ್ಳೆ ಬೆಲೆ ಸಿಗುವಂತ ವಾತವರಣ ಸೃಷ್ಟಿಸಲು ಸತತ ಪ್ರಯತ್ನ ಮಾಡುತ್ತಿದೆ, ಕೇಂದ್ರ
ಸಕರ್ಾರವು ಬೆಂಭಲ ಬೆಲೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ಇದಕ್ಕೂ ಮೊದಲು
ಈ ಯೋಜನೆಯ ಫಲಾನುಭವಿಗಳೊಂದಿಗೆ ವೀಡಿಯೊ ಕಾನ್ಪೆರೆನ್ಸ್ ಮೂಲಕ ಪ್ರಧಾನಿ ಮೋದಿ ಸಂವಹನ ನಡೆಸಿದರು.
ಇಂದು ಬೆಳಿಗ್ಗೆ ಶಿರಡಿಗೆ ಆಗಮಿಸಿದ ಅವರು ಸಾಯಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾಯಿ
ಸಮಾದಿಯ ನೂರನೇ ವರ್ಷದ ನೆನಪಿಗಾಗಿ ಬೆಳ್ಳಿ ನಾಣ್ಯವನ್ನು ಪ್ರಧಾನಿ ಬಿಡುಗಡೆ ಮಾಡಿದರು. ಶಿರಡಿ ಸಾಯಿ
ಸಂಸ್ಥಾನ ಟ್ರಸ್ಟ್ನ ಆನೇಕ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಿದರು. ಜೊತೆಗೆ 10 ಮೆಗಾವಾಟ್ ಸೊಲಾರ್
ಯೋಜನೆ ಮತ್ತು ದರ್ಶನಕ್ಕಾಗಿ ಭಕ್ತಾದಿಗಳು ನಿಲ್ಲುವ ಸರತಿ ಮಳಿಗೆಯನ್ನು ಪ್ರಾರಂಭಿಸಿದರು. ಸಾಯಿಬಾಬ
ಅವರ ಜ್ಞಾನ, ಸಾಯಿ ಅವರ ಕ್ಯಾಂಪಸ್, ಸಾಯಿಸೃಷ್ಟಿ ಮತ್ತು ಅವರ ಇತರ ಮಹತ್ವದ ಕೆಲಸಗಳನ್ನು ಪ್ರವಾಸಿಗರಿಗೆ
ಡಿಜಿಟಲ್ ಮೂಲಕ ತೋರಿಸಲಾಗುವುದು.