ಮೋದಿ ಆಯಾರಾಮ್, ಷಾ ಗಯಾರಾಮ್: ರಾಮಲಿಂಗಾರೆಡ್ಡಿ ವ್ಯಂಗ್ಯ

Ramalingareddy

ಬೆಂಗಳೂರು, ನ.30-ಬಿಜೆಪಿಯಲ್ಲೀಗ ಆಯಾರಾಮ್ ನರೇಂದ್ರ ಮೋದಿ, ಗಯಾರಾಮ್ ಅಮಿತ್ ಷಾ. ಇನ್ನು  ಕೆಲವು ದಿನಗಳಲ್ಲಿ ಈ ಆಯಾರಾಮ್ ಗಯಾರಾಮ್‌ರಿಗೆ ರಾಜ್ಯ ಸೇರಿದಂತೆ ದೇಶದ ಜನರು ತಕ್ಕ ಪಾಠ  ಕಲಿಸುವುದು ಖಚಿತ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ರಾಮಲಿಂಗಾರೆಡ್ಡಿ  ಹೇಳಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಉಪಚುನಾವಣೆಯಲ್ಲಿ ಬಿಜೆಪಿ ಆರಕ್ಕಿಂತ ಕಡಿಮೆ ಸ್ಥಾನ ಬಂದರೆ ಬಿಜೆಪಿ ಸರ್ಕಾರಕ್ಕೆ  ತೊಂದರೆಯಾಗಲಿದೆ. ಆಪರೇಷನ್‌‌ಗೆ ಕಾಂಗ್ರೆಸ್ ಎಂದಿಗೂ ವಿರೋಧವೇ. 1985ರಲ್ಲಿ ಆಯಾರಾಮ್‌  ಗಯಾರಾಮ್ ಪದ್ಧತಿಗೆ ಕಡಿವಾಣ ಹಾಕಲು ಪಕ್ಷಾಂತರ ನೀತಿ ಕಾಯಿದೆ‌ ತಂದರು. ಕಾಂಗ್ರೆಸ್  ಎಂದಿಗೂ ಸ್ಟ್ರೇಟ್ ಆಪರೇಷನ್ ಆಗಲಿ ರಿವರ್ಸ್ ಆಪರೇಷನ್ ಆಗಲಿ ಎಂದಿಗೂ‌  ಮಾಡುವುದಿಲ್ಲ. ಆಯಾ ರಾಮ್ ಮೋದಿ‌ ಗಯಾರಾಮ್ ಅಮಿತ್‌ ಷಾ.ಪಕ್ಷಾಂತರಕ್ಕೆ ಪ್ರೋತ್ಸಾಹಕ್ಕೆ  ನೀಡುವ ನಾಯಕರಿವರು. ಮೋದಿ ಒಬ್ಬ ಒಳ್ಳೆಯ ಭಾಷಣಕಾರ ಮಾತ್ರವೇ ಹೊರತು ಒಳ್ಳೆಯ  ಆಡಳಿತಗಾರನಲ್ಲ. ಅಮಿತ್‌ಷಾ ಏನೂ ಅಲ್ಲ. ಅವರ ಬಗ್ಗೆ ಒಳ್ಳೆಯ ಜನಾಭಿಪ್ರಾಯವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಆಪರೇಷನ್‌‌  ಕಮಲದ ಹಣೆಬರಹ ಏನು ಎನ್ನುವುದು ಡಿ‌.9 ರ ಬಳಿಕ‌ ಗೊತ್ತಾಗಲಿದೆ. ಬಿಜೆಪಿಯವರು ಮಧ್ಯಂತರ  ಚುನಾವಣೆ ಆಗಲು ಬಿಡುವುದಿಲ್ಲ. ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿ ಅರ್ಧಕ್ಕರ್ಧ  ಬಿದ್ದುಹೋಗಲಿದೆ. ಹೀಗಾಗಿ ಸೋಲುವ ಜನವಿರೋಧಿ ಭಯ ಬಿಜೆಪಿಗೆ ಇದೆ. ಹೀಗಾಗಿ ಮಧ್ಯಂತರ  ಚುನಾವಣೆ ನಡೆಸಲು ಬಿಜೆಪಿ ಬಿಡುವುದಿಲ್ಲ ಎಂದರು.

ಬಿಜೆಪಿ‌ ಮತ್ತು ಕೇಂದ್ರದ ಮೇಲೆ ಜನರಿಗೆ ನಂಬಿಕೆ‌ ಇಲ್ಲ. ಬಿಜೆಪಿಯ ಅರ್ಥಿಕ ಕುಸಿತ, ಜಿಡಿಪಿ ಕುಸಿತ ಎಲ್ಲದರಿಂದ ಜನರು ಬೇಸತ್ತಿದ್ದಾರೆ.

ಬಡ, ಮಧ್ಯಮವರ್ಗದವರನ್ನು ಕೇಂದ್ರ ಎಷ್ಟು ತುಳಿಯಬೇಕೋ ಅಷ್ಟು ತುಳಿದು ಹಾಕಿದೆ‌. ಪ್ರಣಾಳಿಕೆಯ  ಭರವಸೆಗಳನ್ನು ಈಡೇರಿಸಿಲ್ಲ. ಉದ್ಯೋಗ ಸೃಷ್ಟಿಯೇ ಇಲ್ಲ. ಆರ್ಥಿಕ ಕುಸಿತದಿಂದ ನಿರುದ್ಯೋಗ  ಹೆಚ್ಚಿದೆ. 2020 ರಷ್ಟೊತ್ತಿಗೆ ಇನ್ನೂ 3 ಕೋಟಿ ಜನರು ನಿರುದ್ಯೋಗಿಗಳಾಗುತ್ತಾರೆ‌ ಎಂದು  ಟಾಟಾ ಹೇಳಿದ್ದಾರೆ. ಸ್ವಾತಂತ್ರ ಭಾರತದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ  ಮಟ್ಟದ ನಿರುದ್ಯೋಗ ದೇಶದಲ್ಲಿ ತಲೆದೋರಿದೆ‌. ಬಿಜೆಪಿ ಮೇಲೆ ಜನರಿಗೆ  ವಿಶ್ವಾಸವಿಲ್ಲ. ಭಾವನಾತ್ಮಕ ವಿಷಯಗಳ ಮೇಲೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಜನರು  ಬಿಜೆಪಿಯಿಂದ ಹತಾಶರಾಗಿದ್ದಾರೆ. ಉಪಚುನಾವಣೆಯಲ್ಲಿ ಹದಿನೈದಕ್ಕೆ‌ ಹದಿನೈದೂ  ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು.ನೆರೆ ಬಂದಾಗ ರಾಜ್ಯದ ಯಾವುದೇ‌ ಬಿಜೆಪಿ ಸಚಿವರಾಗಲೀ ಕೇಂದ್ರದ ಸಂಸದರಾಗಲಿ ಸರಿಯಾಗಿ ಸಂತ್ರಸ್ತರಿಗೆ ಸ್ಪಂದಿಸಲೇ‌  ಇಲ್ಲ.

ಬಿಜೆಪಿಯ  ವಿಶ್ವಾಸದ್ರೋಹ ಜನರ ಬಗ್ಗೆ ನಿರ್ಲಕ್ಷ್ಯದಿಂದ ಜನರು ಬೇಸತ್ತಿದ್ದಾರೆ. ಚುನಾವಣಾ  ಅಕ್ರಮಗಳು ಬಿಜೆಪಿಯಿಂದ ಹೆಚ್ಚುತ್ತಿವೆ. ಹಿರೇಕೇರೂರು ಜೆಡಿಎಸ್ ಅಭ್ಯರ್ಥಿಯಾಗಿದ್ದ  ಸ್ವಾಮೀಜಿ ಅವರ ಮೇಲೆ ಬಿಜೆಪಿ ಧಮಕಿ ಹಾಕಿ ಅವರನ್ನು ಕಣದಿಂದ ಹಿಂದಕ್ಕೆ ಸರಿಯುವಂತೆ  ಮಾಡಿದೆ. ಬಿಜೆಪಿಯ ಚುನಾವಣೆ ಸಂದರ್ಭದಲ್ಲಿ ನಡೆಸಿದ ಒಂಭತ್ತು ಅಕ್ರಮಗಳ ಬಗ್ಗೆ ಚುನಾವಣಾ  ಆಯೋಗಕ್ಕೆ ಕಾಂಗ್ರೆಸ್ ಹಲವು ಬಾರಿ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣಾ  ಆಯೋಗ‌ ಸೇರಿದಂತೆ ದೇಶದ ಸ್ವಾಯತ್ತ ಸಂಸ್ಥೆಗಳು ಬಿಜೆಪಿಯ ಕೈಗೊಂಬೆಯಾಗಿವೆ. ಬಿಜೆಪಿಯಿಂದ  ದೇಶ ಬಂಡವಾಳಷಾಹಿಗಳ ಕೈಗೊಂಬೆಯಾಗಿದೆ. ರಾಜ್ಯ ಮತ್ತು  ಕೇಂದ್ರ‌ ಚುನಾವಣಾ ಆಯೋಗ ಎರಡೂ ಬಿಜೆಪಿಯ ಕೈಗೊಂಬೆಯಾಗಿದೆ ಎಂದು ಬೇಸರ  ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ‌ ಇಲ್ಲ.‌ ಎಸ್.ಆರ್.ಪಾಟೀಲ್,  ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್,‌ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಹಿರಿಯ  ನಾಯಕರಿಗೆ ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು  ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು‌. ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಜೊತೆ  ಮೈತ್ರಿ ಬಗ್ಗೆ ತಮಗೇನೂ ಗೊತ್ತಿಲ್ಲ. ಈ ಬಗ್ಗೆ ಪಕ್ಷದ ನಾಯಕರು ತೀರ್ಮಾನಿಸುತ್ತಾರೆ  ಎಂದು ರಾಮಲಿಂಗಾರೆಡ್ಡಿ‌ ಹೇಳಿದರು.