ಮೋದಿ, ಉದ್ಧವ್ ಅಣ್ಣ-ತಮ್ಮ ಇದ್ದಂತೆ: ಶಿವಸೇನೆ

Shiv Sena

ಮುಂಬೈ, ನವೆಂಬರ್ 29-ಶಿವಸೇನೆ ಮತ್ತು ಬಿಜೆಪಿ ಬೇರೆ ಬೇರೆಯಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 'ಸಹೋದರರಂತೆ'  ಎಂದು ಶುಕ್ರವಾರ ಶಿವಸೇನೆ ಹೇಳಿದೆ.

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ, "ಶಿವಸೇನೆ-ಬಿಜೆಪಿ ಮಹಾರಾಷ್ಟ್ರ ರಾಜಕೀಯದಲ್ಲಿ ವಿಭಿನ್ನ ದಾರಿಯಲ್ಲಿ ಹೋಗಿರಬಹುದು, ಆದರೆ ಮೋದಿ-ಠಾಕ್ರೆ ಅವರ ಸಂಬಂಧಗಳು 'ಅಣ್ಣ-ತಮ್ಮಂದಿರಂತೆ' ಇವೆ ... ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ  ಅವರ ಕಿರಿಯ ಸಹೋದರನಿಗೆ ಅವಕಾಶ ನೀಡುವುದು ಪ್ರಧಾನಮಂತ್ರಿಯ ಜವಾಬ್ದಾರಿಯಾಗಿದೆ  ಎಂದು ಅಭಿಪ್ರಾಯಪಟ್ಟಿದೆ.

ಪ್ರಧಾನ ಮಂತ್ರಿ ಇಡೀ ದೇಶಕ್ಕೆ ಸೇರಿದವರೇ ಹೊರತು ಯಾವುದೇ ಒಂದು ಪಕ್ಷಕ್ಕೆ ಸೇರಿದವರಲ್ಲ, ಮತ್ತು ಈ ತತ್ವವನ್ನು ಅನುಸರಿಸಿದರೆ, ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ರಾಜ್ಯ ಸರ್ಕಾರಗಳ ವಿರುದ್ಧ ಯಾವುದೇ ತಲ್ಲಣ, ಕಳವಳ ಇರುವುದಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಸಾರ್ವಜನಿಕ ಭಾವನೆಗಳನ್ನು ಗೌರವಿಸುವ ಅಗತ್ಯವನ್ನು ಒತ್ತಿ ಹೇಳಿರುವ ಸಂಪಾದಕೀಯ, ಇದೇ ಅಂಶ ಇಲ್ಲಿ ರಾಜ್ಯ ಸರ್ಕಾರ ರಚನೆಗೆ ಕಾರಣವಾಯಿತು ಮತ್ತು ಕೇಂದ್ರವು ಹೊಸ ಆಡಳಿತವನ್ನು ಯಾವುದೇ ರೀತಿಯಲ್ಲಿ ಅಸ್ಥಿರಗೊಳಿಸದಂತೆ ನೋಡಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದರು.

ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಮುಂದಿರುವ ಸವಾಲುಗಳನ್ನು ಪ್ರಸ್ತಾಪಿಸಿ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯವನ್ನು "ಸುಮಾರು ಐದು ಲಕ್ಷ ಕೋಟಿ ರೂ.ಗಳ ದೊಡ್ಡ ಸಾಲಕ್ಕೆ" ತಳ್ಳಿ ಅವರು ಹೊರಟು ಹೋಗಿದ್ದಾರೆ ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ಅನಿಶ್ಚಿತ ಪರಿಸ್ಥಿತಿಯನ್ನು ಗಮನಿಸಿದರೆ, ಹೊಸ ಸರ್ಕಾರವು ಸಾರ್ವಜನಿಕ ಕಲ್ಯಾಣಕ್ಕಾಗಿ ತನ್ನ ಉದ್ದೇಶಿತ ಗುರಿ ಸಾಧಿಸಲು ಜಾಗರೂಕತೆಯಿಂದ ನಡೆದುಕೊಳ್ಳಬೇಕಾಗುತ್ತದೆ, ಮುಂಬೈ ನಗರ ದೇಶದ ಬೊಕ್ಕಸಕ್ಕೆ ಗರಿಷ್ಠ ಕೊಡುಗೆ ನೀಡುತ್ತದೆ, ಇದು ಭಾರತದಾದ್ಯಂತದ ಜನರಿಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಒದಗಿಸುತ್ತದೆ ಎಂದು ಹೇಳಿದೆ.

ಮಹಾರಾಷ್ಟ್ರದ ಸೈನಿಕರು ತಮ್ಮ ಪ್ರಾಣ ತ್ಯಾಗ ಮಾಡಿ ದೇಶದ ಗಡಿಗಳನ್ನು ತಲೆಮಾರುಗಳಿಂದ ಭದ್ರಪಡಿಸುತ್ತಿದ್ದಾರೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಅದರಂತೆ, ಹೊಸ ಮುಖ್ಯಮಂತ್ರಿ ರಾಜ್ಯಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು, ಅಥವಾ 'ದೆಹಲಿ ದರ್ಬಾರ್' ಸರದಿಯಲ್ಲಿ ನಾಲ್ಕನೇ ಐದನೇ ಸ್ಥಾನಕ್ಕೆ ಕೆಳಗಿಳಿಯಬಾರದು, ಬದಲಾಗಿ ಸಮಾನವಾಗಿ ನಿಲ್ಲಬೇಕು.

'' ಸೇನೆಯ ಕೇಸರಿ ಧ್ವಜವು ಮಂತ್ರಾಲಯ ಮತ್ತು ವಿಧಾನ ಭವನದ ಮೇಲೆ ಹಾರಲು ಪ್ರಾರಂಭಿಸಿದೆ ... ಈಗ ಪ್ರತೀಕಾರದ ಮನೋಭಾವವನ್ನು ಅಳವಡಿಸಿಕೊಳ್ಳಬೇಡಿ, ಅದು ನಿಮಗೆ ಹಾನಿಯನ್ನುಂಟು ಮಾಡುತ್ತದೆ. 'ಸೂರಜ್ಯ' (ಉತ್ತಮ ಆಡಳಿತ) ಹಬ್ಬವು ಇದೀಗ ಪ್ರಾರಂಭವಾಗಿದೆ… ನೀವು ಏನು ನೋಡುತ್ತಿದ್ದೀರಿ? ಬನ್ನಿ, ಸೇರಿಕೊಳ್ಳಿ! '' ಎಂದು ಸಂಪಾದಕೀಯವು ಕೇಂದ್ರವನ್ನು ಎಚ್ಚರಿಸಿದೆ.