ನವದೆಹಲಿ, ಡಿ 1-ಡಿಸೆಂಬರ್ 3 ರಿಂದ ಮೊಬೈಲ್ ಕರೆ ದರ ಮತ್ತು ಡೇಟಾ ಶುಲ್ಕವನ್ನು ಹೆಚ್ಚಿಸುವುದಾಗಿ ವೋಡಾಫೋನ್, ಐಡಿಯಾ, ಭಾರ್ತಿ ಏರ್ ಟೆಲ್ ಭಾನುವಾರ ಘೋಷಿಸಿವೆ.
ಈ ಸಂಸ್ಥೆಗಳು ಪ್ರೀಪೇಯ್ಡ್ ಸೇವೆಗೆ ಹೊಸ ಪ್ಲಾನ್ ಗಳನ್ನು ಘೋಷಿಸಿವೆ. ಇವು ಹಳೆಯ ಪ್ಲಾನ್ ಗೆ ಹೋಲಿಸಿದಲ್ಲಿ ಶೇ 42 ರಷ್ಟು ಹೆಚ್ಚಿವೆ ಎಂದು ಅಂದಾಜಿಸಬಹುದಾಗಿದೆ. ಹೆಚ್ಚುವರಿ ಕರೆ ದರ ಮತ್ತು ಡೇಟಾ ಶುಲ್ಕ ಡಿಸೆಂಬರ್ 3 ರ ಮಧ್ಯರಾತ್ರಿಯಿಂದ ಜಾರಿಯಾಗಲಿವೆ ಎಂದು ಹೇಳಲಾಗಿದೆ.